ರಾಷ್ಟ್ರೀಯ

ಮದುವೆ ಛತ್ರವಾಗಿ ಮಾರ್ಪಟ್ಟ ಸರ್ಕಾರಿ ಆಸ್ಪತ್ರೆ, ರೋಗಿಗಳ ಪರದಾಟ….ಈ ವೀಡಿಯೋ ನೋಡಿ..

Pinterest LinkedIn Tumblr

ಪಾಟ್ನಾ: ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಉತ್ತರ ಪ್ರದೇಶದ ಸರ್ಕಾರಿ ಆಸ್ಪತ್ರೆಯೊಂದು ಮದುವೆ ಛತ್ರವಾಗಿ ಬದಲಾದ ಪರಿಣಾಮ ಅಲ್ಲಿದ್ದ ರೋಗಿಗಳೆಲ್ಲಾ ವೈದ್ಯಕೀಯ ಸೇವೆ ಲಭಿಸದೆ ಕೆಲಕಾಲ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.

ಉತ್ತರ ಪ್ರದೇಶದ ಬುಲಂದ್ ಶಹರ್ ನ ಸರ್ಕಾರಿ ಮಹಿಳಾ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ರೋಗಿಗಳಿಗೆ ಚಿಕಿತ್ಸೆ ನೀಡಬೇಕಿದ್ದ ಆಸ್ಪತ್ರೆ ಕೆಲಕಾಲ ಮನರಂಜನಾ ತಾಣವಾಗಿ ಮಾರ್ಪಟ್ಟಿತ್ತು. ರೋಗಿಗಗಳ ಚಿಕಿತ್ಸೆ ಮರೆತ ವೈದ್ಯರು ಮತ್ತು ಆಸ್ಪತ್ರೆ ಸಿಬ್ಬಂದಿಗಳು ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮನಸೋ ಇಚ್ಛೆ ಕುಣಿದಾಡಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವ್ಯಾಪಕ ಟೀಕೆಗೆ ಗುರಿಯಾಗಿದೆ.

ಫೆಬ್ರವರಿ 18ರಂದು ಈ ಘಟನೆ ಸಂಭವಿಸಿದ್ದು, ಆಸ್ಪತ್ರೆಯ ಓರ್ವ ಸಿಬ್ಬಂದಿ ಮಗಳ ಮದುವೆ ಕಾರ್ಯಕ್ರಮವನ್ನು ಆಸ್ಪತ್ರೆ ಸಿಬ್ಬಂದಿ ಅಲ್ಲಿಯೇ ಆಯೋಜನೆ ಮಾಡಿದ್ದು ಇದೀಗ ವ್ಯಾಪಕ ಟೀಕೆಗೆ ಕಾರಣವಾಗಿದೆ. ಈ ಬಗ್ಗೆ ಮಾಧ್ಯಮಗಳಲ್ಲಿ ವ್ಯಾಪಕ ಸುದ್ದಿಯಾಗಿದ್ದರೂ ಕೂಡ ಉತ್ತರ ಪ್ರದೇಶದ ಆರೋಗ್ಯ ಇಲಾಖೆ ಘಟನೆ ಕುರಿತಂತೆ ದಿವ್ಯ ಮೌನಕ್ಕೆ ಶರಣಾಗಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

“ಆಸ್ಪತ್ರೆಯಲ್ಲಿ ಮದುವೆ ನಡೆಯುತ್ತಿದ್ದ ಸಂದರ್ಭದಲ್ಲಿ ಸಾಕಷ್ಚು ರೋಗಿಗಳು ವೈದ್ಯರಿಗಾಗಿ ಮತ್ತು ಚಿಕಿತ್ಸೆಗಾಗಿ ಕಾಯುತ್ತಿದ್ದರು. ಒಂದಷ್ಟು ಮಂದಿ ಸಿಬ್ಬಂದಿಗಳಲ್ಲಿ ಈ ಬಗ್ಗೆ ಮನವಿ ಮಾಡಿಕೊಂಡರಾದರೂ ಅದಕ್ಕೆ ಸ್ಪಂದಿಸದ ಸಿಬ್ಬಂದಿಗಳು ಮೋಜು-ಮಸ್ತಿಯಲ್ಲಿ ತೊಡಗಿದ್ದರು ಎಂದು ಆಸ್ಪತ್ರೆಯ ರೋಗಿಯೊಬ್ಬರ ಸಂಬಂಧಿ ತಿಳಿಸಿದ್ದಾರೆ.

Write A Comment