ಮುಂಬೈ

ವಡಾ ಪಾವ್ ಫ್ರೀಯಾಗಿ ನೀಡದ್ದಕ್ಕೆ ಸಹಾಯಕನಿಗೆ ಥಳಿಸಿದ ಶಿವಸೇನೆ ನಾಯಕ; ಇಲ್ಲಿದೆ ವೀಡಿಯೋ ನೋಡಿ..

Pinterest LinkedIn Tumblr

ಮುಂಬೈ: ವಡಾಪಾವ್’ನ್ನು ಫ್ರೀಯಾಗಿ ನೀಡಿಲಿಲ್ಲ ಎಂಬ ಕಾರಣಕ್ಕೆ ಅಂಗಡಿ ಮಾಲೀಕನ ಸಹಾಯಕನೊಬ್ಬನಿಗೆ ಶಿವಸೇನೆ ನಾಯಕ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ವಿಲೆಪಾರ್ಲೆಯಲ್ಲಿ ಶನಿವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಸುನೀಲ್ ಮಹಾದಿಕ್ ಸೇನಾ ನಾಯಕ ವ್ಯಕ್ತಿಗೆ ಥಳಿಸಿದವನಾಗಿದ್ದಾನೆ. ಶನಿವಾರ ಸಂಜೆ ಅಂಗಡಿಗೆ ಬಂದಿರುವ ಸುನೀಲ್ 100 ವಡಾಪಾವನ್ನು ಉಚಿತವಾಗಿ ನೀಡುವಂತೆ ಕೇಳಿದ್ದಾನೆ. ಈ ವೇಳೆ ಅಂಗಡಿ ಮಾಲೀಕನ ಸಹಾಯಕನಾಗಿ ಕೆಲಸ ಮಾಡುತ್ತಿರುವ ಚೇತನ್ ಜೆವೇರಿಯಾ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದಾನೆ.

ಇದರಿಂದ ತೀವ್ರವಾಗಿ ಕೆಂಡಾಮಂಡಲವಾಗಿರುವ ಸುನೀಲ್ ಚೇತನ್ ನ್ನನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಹಲ್ಲೆ ನಂತರ ಚೇತನ್ ಮುಂಬೈ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಇದೀಗ ಕ್ರಮಕೈಗೊಂಡಿರುವ ಪೊಲೀಸರು ಸುನೀಲ್ ನನ್ನು ಬಂಧನಕ್ಕೊಳಪಡಿಸಿದ್ದಾರೆಂದು ತಿಳಿದುಬಂದಿದೆ.

Write A Comment