ಮುಂಬೈ

ಚಿದಂಬರಂ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ: ಶಿವಸೇನೆ

Pinterest LinkedIn Tumblr

P-Chidambaram1

ನವದೆಹಲಿ: ಇಶ್ರಾತ್ ಜಹಾನ್ ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಗೆ ಸೇರಿದ್ದವಳಾಗಿದ್ದಾಳೆಂದು ಹೇಳಿದ್ದರೂ ಕೂಡ ಅಂದು ಅಫಿಡಿವಿಟಿಯನ್ನು ತಿದ್ದುಪಡಿ ಮಾಡಿದ್ದ ಮಾಜಿ ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ಅವರ ವಿರುದ್ಧ ದೇಶದ್ರೋಹ ಪ್ರಕರಣವನ್ನು ದಾಖಲು ಮಾಡುಂತೆ ಶಿವಸೇನೆ ಮಂಗಳವಾರ ಆಗ್ರಹಿಸಿದೆ.

ಈ ಕುರಿತಂತೆ ಮಾತನಾಡಿರುವ ಶಿವಸೇನೆ ನಾಯಕ ಸಂಜಯ್ ರೌತ್ ಅವರು, ಅಂದು ಚಿದಂಬರಂ ಅವರು ತೆಗೆದುಕೊಂಡಿದ್ದ ನಿರ್ಧಾರ ಕೇವಲ ಗಂಭೀರ ವಿಚಾರವಷ್ಟೇ ಅಲ್ಲ, ದೇಶಕ್ಕೆ ಆಪಾಯಕಾರಿಯಾಗಿತ್ತು. ಅಂದಿನ ಯುಪಿಎ ಸರ್ಕಾರ ಇಶ್ರತ್ ಜಹಾನ್ ಎನ್ ಇಟಿ ಉಗ್ರ ಸಂಘಟನೆ ಜೊತೆ ಸಂಬಂಧದಲ್ಲಿರುವಂತೆ ನೋಡಿಕೊಂಡಿತ್ತು ಎಂದು ಹೇಳಿದ್ದಾರೆ.

ಗುಜುರಾತ್ ನಲ್ಲಿ ಪೊಲೀಸರು ಎನ್ ಕೌಂಟರ್ ಮಾಡುವ ಮುಖಾಂತರ ಉಗ್ರ ಸಂಘಟನೆಗೆ ಸೇರಿದ್ದಳವನ್ನು ಹತ್ಯೆ ಮಾಡಿದ್ದು, ಅಂದಿನ ಸರ್ಕಾರ ಪೊಲೀಸರನ್ನು ನಿಂದಿಸಿತ್ತು. ಆದರೆ, ಇಂದು ಅದೇ ಪ್ರಕರಣಕ್ಕೆ ಸಂಬಂಧಿಸಿ ಉಗ್ರ ಹೆಡ್ಲಿ ಹೇಳಿಕೆಯನ್ನು ನೀಡಿದ್ದು, ಇಶ್ರಾತ್ ಜಹಾನ್ ಮಾನವ ಬಾಂಬರ್ ಆಗಿದ್ದಳೆಂದು ಹೇಳಿದ್ದಾನೆ. ಸತ್ಯಾಸತ್ಯತೆಗಳು ಬಹಿರಂಗವಾಗಿದ್ದು, ಇದರಲ್ಲಿ ಸರ್ಕಾರ ಮುಚ್ಚಿಡುವುದು ಏನಿದೆ. ಯಾರಿಗೆ ಸಹಾಯ ಮಾಡಲು ಯತ್ನಿಸುತ್ತಿದ್ದಾರೆ ಎಂದು ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಚಿದಂಬರಂ ಅವರು ಈ ಹಿಂದೆ ಸರ್ಕಾರ ಅಫ್ಜಲ್ ಗುರು ಶಿಕ್ಷೆ ನೀಡಿಕೆ ವೇಗವಾಯಿತು ಎಂದು ಹೇಳಿದ್ದರು. ಇದರಲ್ಲಿ ಅಫ್ಜಲ್ ಗುರು ಮತ್ತು ಇಶ್ರತ್ ಜಹಾನ್ ಅವರಿಗೆ ಬೆಂಬಲ ಸೂಚಿಸಿರುವುದು ಬಹಿರಂಗವಾಗಿದೆ. ಹೀಗಾಗಿ ಯಾರು ಉಗ್ರರಿಗೆ ಬೆಂಬಲ ಸೂಚಿಸುತ್ತಿದ್ದಾರೋ ಅವರೆಲ್ಲರೂ ವಿಚಾರಣೆಗೊಳಗಾಗಬೇಕು. ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಾಗಬೇಕು. ನ್ಯಾಯಾಲಯಕ್ಕೆ ಎಳೆದುಕೊಂಡು ಬಂದು ಶಿಕ್ಷೆ ವಿಧಿಸಿ ಎಂದು ಹೇಳಿದ್ದಾರೆ.

ಇಶ್ರಾತ್ ಜಹಾನ್ ವಿರುದ್ಧದ ಆರೋಪಗಳಲ್ಲಿ ಯಾವುದೇ ನಂಬಲರ್ಹ ಸಾಕ್ಷ್ಯಾಧಾರಗಳಿಲ್ಲ ಎಂಬ ಕಾರಣಕ್ಕೆ ಅಂದಿನ ಗೃಹ ಸಚಿವಾಲಯದ ಅಫಿಡಿವಿಟ್ ನ್ನು ತಿದ್ದುಪಡಿ ಮಾಡಿತ್ತು ಎಂಬ ಜಿಕೆ. ಪಿಳ್ಳೈ ಅವರ ಹೇಳಿಕೆ ಸಂಬಂಧ ಇದೀಗ ಗೃಹ ಸಚಿವಾಲಯವು ತನಿಖೆ ನಡೆಸಲು ಸಂಪೂರ್ಣ ಸಿದ್ದತೆಗಳನ್ನು ಮಾಡಿಕೊಂಡಿದೆ.

ಈ ಹಿಂದೆ ಜಿ.ಕೆ. ಪಿಳ್ಳೈ ಅವರು ಇಶ್ರಾತ್ ಜಹಾನ್ ಪ್ರಕರಣ ಸಂಬಂಧ ಖಾಸಗಿ ಮಾಧ್ಯಮವೊಂದರಲ್ಲಿ ಮಾತನಾಡಿ, ಇಶ್ರಾತ್ ಜಹಾನ್ ಎಲ್ ಇಟಿ ಉಗ್ರ ಸಂಘಟನೆಗೆ ಸೇರಿದ್ದಳೆಂದು ತಿಳಿದುಬಂದಿದ್ದರೂ ಕೂಡ ಇಶ್ರಾತ್ ವಿರುದ್ಧದ ಆರೋಪಗಳಲ್ಲಿ ಯಾವುದೇ ನಂಬಲರ್ಹ ಸಾಕ್ಷ್ಯಾಧಾರಗಳಿಲ್ಲ ಎಂಬ ಕಾರಣಕ್ಕೆ ಅಂದಿನ ಗೃಹ ಸಚಿವಾಲಯದ ಅಫಿಡಿವಿಟ್ ನ್ನು ತಿದ್ದುಪಡಿ ಮಾಡಲಾಗಿತ್ತು. 200ರಲ್ಲಿ ತಿದ್ದುಪಡಿ ಮಾಡಿ ನ್ಯಾಯಾಲಯಕ್ಕೆ ಸಲಿಸಿದ್ದ ಅವಧಿಯಲ್ಲಿ ಪಿಳ್ಳೈ ಅವರು ಗೃಹ ಕಾರ್ಯದರ್ಶಿಗಳಾಗಿದ್ದರು. ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಅವರು ಗೃಹ ಸಚಿವರಾಗಿದ್ದರು. ಅಂದು ಗುಪ್ತಚರ ಇಲಾಖೆಯ ಮುಖ್ಯಸ್ಥರಾಗಿದ್ದ ರಾಜೇಂದ್ರ ಕುಮಾರ್ ಅವರು, ಪ್ರಕರಣದ ಸತ್ಯವನ್ನು ತಿರುಚಲು ಕಾಂಗ್ರೆಸ್ ರಾಜಕಾರಣಿಗಳು ಹಾಗೂ ಸಿಬಿಐ ಅಧಿಕಾರಿಯೊಬ್ಬರನ್ನು ಬಳಸಿಕೊಂಡಿದ್ದರು ಎಂದು ಆರೋಪಿಸಿದ್ದರು.

ಇದರಂತೆ ಪಿಳ್ಳೈ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ಚಿದಂಬರಂ ಅವರು, ಅಂದಿನ ಗೃಹ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದ ಪಿಳ್ಳೈ ಅವರು ಪ್ರಕರಣದಲ್ಲಿ ತನ್ನ ಪಾತ್ರವೇ ಇಲ್ಲದಂತೆ ದೂರ ಸರಿಯುತ್ತಿರುವುದು ಬೇಸರ ತಂದಿದೆ ಎಂದು ಹೇಳಿದ್ದರು.

Write A Comment