ಮುಂಬೈ

ಚಾಕೊಲೇಟ್ ಆಸೆ ತೋರಿಸಿ 3 ವರ್ಷ ಮಗು ಮೇಲೆ ಅತ್ಯಾಚಾರ

Pinterest LinkedIn Tumblr

3 rape

ಥಾಣೆ: ಚಾಕೊಲೇಟ್ ಆಸೆ ತೋರಿಸಿ 3 ವರ್ಷದ ಹೆಣ್ಣು ಮಗವಿನ ಮೇಲೆ ಅತ್ಯಾಚಾರ ಮಾಡಿರುವ ಘಟನೆಯೊಂದು ಮಹಾರಾಷ್ಟ್ರದ ಭಯಾಂದರ್ ಟೌನ್ ಶಿಪ್ ನಲ್ಲಿ ಮಂಗಳವಾರ ನಡೆದಿದೆ.

ವಿನೀತ್ ಧವಡೆ (34) ಅತ್ಯಾಚಾರ ಮಾಡಿದ ಆರೋಪಿಯಾಗಿದ್ದಾನೆ. ಬಾಲಕಿಯ ನೆರೆಮನೆಯಾತನಾಗಿರುವ ಈತ ಫೆ.26 ರಂದು ಮನೆಯೆದುರು ಆಟವಾಡಿಕೊಂಡಿದ್ದ ಮಗುವಿಗೆ ಚಾಕೊಲೇಟ್ ಕೊಡಿಸುವುದಾಗಿ ಆಸೆ ತೋರಿಸಿದ್ದಾನೆ. ನಂತರ ತನ್ನ ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ನಡೆಸಿದ್ದಾನೆಂದು ತಿಳಿದುಬಂದಿದೆ.

ನಂತರ ಮನೆಗೆ ಬಂದ ಪೋಷಕರು ಬಾಲಕಿಯನ್ನು ಕಂಡು ಅನುಮಾನಗೊಂಡು ವಿಚಾರಿಸಿದ್ದಾರೆ. ಈ ವೇಳೆ ಬಾಲಕಿ ನಡೆದ ವಿಚಾರವನ್ನು ತಿಳಿಸಿದ್ದಾಳೆ. ಇದರಂತೆ ಪೋಷಕರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 376 ಮತ್ತು 4, 8, 12 ರ ಪೋಸ್ಕೋ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Write A Comment