ಮನೋರಂಜನೆ

ವೈರಲ್ ಆಯ್ತು ವಿರಾಟ್ ಕೊಹ್ಲಿ ವಿರಹ ಗೀತೆ; ‘ಜೋ ವಾದಾ ಕಿಯಾ ವೋ ನಿಭಾನಾ ಪಡೇಗಾ’ ಗೀತೆ ಹಾಡುವ ಮೂಲಕ ಗೆಳತಿ ಮನಗೆಲ್ಲಲು ಕೊಹ್ಲಿ ಯತ್ನ..!

Pinterest LinkedIn Tumblr

https://youtu.be/2BPfC7V6qpw

ಢಾಕಾ: ಕಡಿದು ಹೋಗಿರುವ ನಟಿ ಅನುಷ್ಕಾರೊಂದಿಗೆನ ತಮ್ಮ ಸಂಬಂಧವನ್ನು ಮರಳಿ ಪಡೆಯುವ ನಿಟ್ಟಿನಲ್ಲಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಪ್ರಯತ್ನಿಸುತ್ತಿದ್ದಾರೆಯೇ ಎಂಬ ಅನುಮಾನ ಮೂಡುತ್ತಿದೆ.

ವಿರಾಟ್ ಕೊಹ್ಲಿ ಅವರ ಇತ್ತೀಚೆಗಿನ ಕೆಲ ವರ್ತನೆಗಳು ಇಂತಹ ಅನುಮಾನಕ್ಕೆ ಕಾರಣವಾಗುತ್ತಿದ್ದು, ಏಷ್ಯಾಕಪ್ ಟಿ20 ಟೂರ್ನಿಗಾಗಿ ಬಾಂಗ್ಲಾದೇಶದಲ್ಲಿರುವ ವಿರಾಟ್ ಕೊಹ್ಲಿ ಇತ್ತೀಚೆಗೆ ಹಾಡಿದ್ದ ವಿರಹ ಗೀತೆಯ ವಿಡಿಯೋ ಇದೀಗ ವೈರಲ್ ಆಗಿದ್ದು, ಅನುಷ್ಕಾ ಶರ್ಮಾ ಅವರ ಮನವೊಲಿಸಲು ಕೊಹ್ಲಿ ಈ ವಿರಹ ಗೀತೆಯನ್ನು ಹಾಡಿದ್ದಾರೆ ಎಂಬ ಅಭಿಪ್ರಾಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಢಾಕಾದಲ್ಲಿರುವ ಭಾರತೀಯ ರಾಯಭಾರಿ ನಿವಾಸದಲ್ಲಿ ಸೋಮವಾರ ಸಂಜೆ ನಡೆದ ಸಮಾರಂಭದಲ್ಲಿ ವಿರಾಟ್ ಕೊಹ್ಲಿ, 1963ರಲ್ಲಿ ಮೊಹಮದ್ ರಫಿ ಹಾಗೂ ಲತಾ ಮಂಗೇಶ್ಕರ್ ಹಾಡಿದ್ದ ‘ತಾಜ್‌ಮಹಲ್’ ಚಿತ್ರದ ‘ಜೋ ವಾದಾ ಕಿಯಾ ವೋ ನಿಭಾನಾ ಪಡೇಗಾ’ (ಕೊಟ್ಟಿರುವ ಮಾತನ್ನು ಉಳಿಸಿಕೊಳ್ಳಬೇಕಾಗುತ್ತದೆ) ಹಾಡನ್ನು ಹಾಡಿದ್ದರು. ಇದನ್ನು ಯುವರಾಜ್ ಸಿಂಗ್ ವಿಡಿಯೋ ಮಾಡಿಕೊಂಡು ಬಳಿಕ ಇನ್‌ಸ್ಟಾಗ್ರಾಮ್‌ನಲ್ಲಿ ಹರಬಿಟ್ಟಿದ್ದರು. ಅಲ್ಲದೆ ಈ ವಿಡಿಯೋದ ಅಡಿ ಬರಹದಲ್ಲಿ ‘ನಾನು ಈ ಗೀತೆಯನ್ನು ಬಹಳ ಇಷ್ಟಪಡುತ್ತೇನೆ’ ಎಂದು ಯುವಿ ಬರೆದುಕೊಂಡಿದ್ದರು.

ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಅನುಷ್ಕಾರನ್ನು ನೆನಪಿಸಿಕೊಂಡೇ ವಿರಾಟ್ ಈ ಗೀತೆ ಹಾಡಿದ್ದಾರೆ ಎಂದು ಸುದ್ದಿಯಾಗಿದೆ.

ಸಧ್ಯಕ್ಕೆ ಕೊಹ್ಲಿ ಮತ್ತು ಅನುಷ್ಕಾ ದೂರಾಗಿರಬಹುದು. ಆದರೆ ಮತ್ತೆ ಒಂದಾಗುವ ಪ್ರಯತ್ನವನ್ನು ಮಾತ್ರ ವಿರಾಟ್ ಮುಂದುವರೆಸಿದ್ದಾರೆ. ಇದಕ್ಕೆ ಅನುಷ್ಕಾ ಅಣ್ಣ ಕರ್ಣೇಶ್ ಸಹಾಯ ಮಾಡುತ್ತಿದ್ದಾರೆ ಎಂದೂ ಪತ್ರಿಕೆಯೊಂದು ವರದಿ ಮಾಡಿದೆ. ನೌಕಾಪಡೆಯಲ್ಲಿರುವ ಕರ್ಣೇಶ್ ಮತ್ತು ಕೊಹ್ಲಿ ಅವರದ್ದು ಹಳೆಯ ಸ್ನೇಹ. ಯಾಕೆಂದರೆ ಕರ್ಣೇಶ್ 19 ವಯೋಮಿತಿ ಕರ್ನಾಟಕ ತಂಡದ ಮಾಜಿ ಆಟಗಾರ. ಹೀಗಾಗಿ ಕರ್ಣೇಶ್ ಮೂಲಕ ಅನುಷ್ಕಾ ಜತೆ ಮತ್ತೆ ಸಂಬಂಧ ಜೋಡಿಸಿಕೊಳ್ಳಲು ಕೊಹ್ಲಿ ಯತ್ನಿಸಿದ್ದಾರೆ ಎಂದು ಹೇಳಲಾಗಿದೆ. ತಂಗಿ ಜತೆಗಿನ ಕೊಹ್ಲಿ ‘ಪ್ಯಾಚ್‌ಅಪ್’ಗೆ ಕರ್ಣೇಶ್ ಪ್ರಯತ್ನ ಕೂಡ ತೆರೆಮರೆಯಲ್ಲಿ ಸಾಗಿದ್ದು, ಶೀಘ್ರವೇ ಸಿಹಿ ಸುದ್ದಿ ತರಲಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ಒಟ್ಟಾರೆ ಬಾಲಿವುಡ್ ಮತ್ತು ಕ್ರಿಕೆಟ್ ಪ್ರೇಮ್ ಕಹಾನಿ ಮತ್ತೆ ಮುಂದುವರೆದಿದ್ದು, ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಕೆರಳಿಸಿದೆ.

Write A Comment