ಕರ್ನಾಟಕ

ಮಾರ್ಚ್ 19 ಕ್ಕೆ ಲಂಡನ್ ನಲ್ಲಿ ಶಿವಲಿಂಗ ಪ್ರೀಮಿಯರ್ ಶೋ

Pinterest LinkedIn Tumblr

shiva-linga

ಮೊಟ್ಟ ಮೊದಲ ಬಾರಿಗೆ ಲಂಡನ್ ನಲ್ಲಿ ಕನ್ನಡ ಚಿತ್ರವೊಂದನ್ನ ಪ್ರದರ್ಶಿಸಲು ಶಿವಲಿಂಗ ಚಿತ್ರತಂಡ ಮುಂದಾಗಿದೆ.
ಮಾರ್ಚ್ 19 ರಂದು ಲಂಡನ್ ನ ಸಫಾರಿ ಸಿನಿಮಾ ಹಾರೋ ಎಂಬಲ್ಲಿ ಸುಮಾರು 650 ಮಂದಿ ಪ್ರೇಕ್ಷಕರಿಗೆ ಶಿವಲಿಂಗ ಸಿನಿಮಾ ಪ್ರದರ್ಶನ ಏರ್ಪಡಿಸಲಾಗಿದೆ. ಲಂಡನ್ ನ ರಿಯೋಬಿನ್ ರಾಜ್ ಪ್ರೊಡಕ್ಷನ್ ಶಿವಲಿಂಗ ಚಿತ್ರ ತಂಡಕ್ಕೆ ಆಹ್ವಾನ ನೀಡಿದೆ.

ಇದೇ ಮೊದಲ ಬಾರಿಗೆ ಕನ್ನಡ ಚಿತ್ರವೊಂದರ ಪ್ರದರ್ಶನಕ್ಕೆ ಲಂಡನ್ ನಿಂದ ಆಹ್ವಾನ ಬಂದಿದೆ. ಬಹು ದೊಡ್ಡ ಮಟ್ಟದಲ್ಲಿ ಸಿನಿಮಾ ಪ್ರದರ್ಶನಕ್ಕೆ ಆಯೋಜಕರು ನಿರ್ಧರಿಸಿದ್ದಾರೆ. ಈ ಪ್ರೀಮಿಯರ್ ಶೋ ನಲ್ಲಿ ಚಿತ್ರ ತಂಡದ ಕೆಲವರು ಹಾಗೂ ನಟ ಶಿವರಾಜ್ ಕುಮಾರ್ ಪಾಲ್ಗೊಳ್ಳಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಾನು ತುಂಬಾ ಉತ್ಸುಕನಾಗಿದ್ದೇನೆ ಎಂದು ನಿರ್ದೇಶಕ ಪಿ. ವಾಸು ಹೇಳಿದ್ದಾರೆ.

ಇನ್ನು ಶಿವಲಿಂಗ ಚಿತ್ರವನ್ನು ರಿಮೇಕ್ ಮಾಡಲು ಹಲವು ಭಾಷೆಯಿಂದ ಪ್ರಸ್ತಾಪ ಬಂದಿದೆ ಎಂದು ಅವರು ಹೆಚ್ಚಿನ ಮಾಹಿತಿ ನೀಡಲಿಲ್ಲ.

Write A Comment