ಅಂತರಾಷ್ಟ್ರೀಯ

ದುಬೈಯಲ್ಲಿ ಜಾನಿ ಲಿವರ್ ರ ಕಾಮಿಡಿ ಪ್ರದರ್ಶನ “ಧೂಮ್ ಧಮಾಕ-2016″ಕ್ಕೆ ಆನ್‌ಲೈನ್ ಬುಕ್ಕಿಂಗ್ ಆರಂಭ; ಅದ್ದೂರಿಯ ಪ್ರದರ್ಶನದಲ್ಲಿ ಭಾಗವಹಿಸಲಿದ್ದಾರೆ ಖ್ಯಾತ ಕಲಾವಿದರು

Pinterest LinkedIn Tumblr

ದುಬೈಯಲ್ಲಿ ಮಂಗಳೂರಿನ ಪ್ರಖ್ಯಾತ ಉದ್ಯಮಿ, ಅಕ್ಮೆ ಬಿಲ್ಡಿಂಗ್ ಮೆಟೀರಿಯಲ್ಸ್ ನ ಆಡಳಿತ ನಿರ್ದೇಶಕ, ಖ್ಯಾತ ಹಾಡುಗಾರರೂ ಆಗಿರುವ ಹರೀಶ್ ಶೇರಿಗಾರ್ ಅವರು ಮೂರನೇ ಬಾರಿಗೆ “ಧೂಮ್ ಧಮಾಕ-2016” ಎಂಬ ಕಾಮಿಡಿ ಶೋ ಆಯೋಜಿಸಿದ್ದಾರೆ.

Johny & Jamie

ಜನವರಿ 8 ರಂದು (ಶುಕ್ರವಾರ) ಸಂಜೆ 6 ಗಂಟೆಗೆ ದುಬೈಯ ಇಂಡಿಯನ್ ಹೈಸ್ಕೂಲ್‌ನ ಶೇಖ್ ರಶೀದ್ ಆಡಿಟೋರಿಯಂನಲ್ಲಿ ಅದ್ದೂರಿಯ ಕಾರ್ಯಕ್ರಮ ನಡೆಯಲಿದೆ. ನಿರ್ಗತಿಕ ಮತ್ತು ಬಡವರಿಗೆ ದೇಣಿಗೆ ಸಂಗ್ರಹಿಸುವ ಮಹತ್ತರ ಉದ್ದೇಶದಿಂದ ಈ ಪ್ರದರ್ಶನ ಏರ್ಪಡಿಸಿದ್ದಾರೆ. ಪ್ರದರ್ಶನದ ಬಳಿಕ ದೇಣಿಗೆ ನೀಡುವ ಸಂಸ್ಥೆಯ ಹೆಸರನ್ನು ಘೋಷಿಸಲಿದ್ದಾರೆ.

ಆನ್‌ಲೈನ್ ಬುಕ್ಕಿಂಗ್‌ಗಾಗಿ ಈ ವೆಬ್‌ಸೈಟ್‌ಗೆ ಲಾಗಿನ್ ಆಗಿರಿ……..

www.dhoomdhamaka2016.com

ಈ ಬಾರಿಯ ಧೂಮ್ ಧಮಾಕದಲ್ಲಿ ಬಾಲಿವುಡ್‌ನ ಖ್ಯಾತ, ಹೆಸರಾಂತ ಹಾಸ್ಯ ಕಲಾವಿದ, ಹಾಸ್ಯರಾಜ ಎಂದೇ ಖ್ಯಾತರಾಗಿರುವ ಜಾನಿ ಲಿವರ್ ತಮ್ಮ ಪುತ್ರಿ ಜಮಿ ಲಿವರ್ ಅವರೊಂದಿಗೆ ಭಾಗವಹಿಸುತ್ತಿದ್ದಾರೆ.

Layout 1

“ಧೂಮ್ ಧಮಾಕ 2016” ಕಾರ್ಯಕ್ರಮದಲ್ಲಿ ಜಾನಿ ಲಿವರ್ ತನ್ನ ತಂಡದೊಂದಿಗೆ ಜನರನ್ನು ಹಾಸ್ಯದಲ್ಲಿ ಮುಳುಗೇಳಿಸಲಿದ್ದಾರೆ. ಸಾಮಾಜಿಕ, ರಾಜಕೀಯ, ಹಲವರ ಮಿಮಿಕ್ರಿ, ಪಾಪ್ ಸಂಸ್ಕೃತಿ, ಸಾಂಸ್ಕೃತಿಕ ವ್ಯವಹಾರ, ತಂತ್ರಜ್ಞಾನ ಮುಂತಾದ ಹತ್ತು ಹಲವು ವಿಷಯಗಳ ಸಂಯೋಜನೆಗಳೊಂದಿಗೆ ಸೃಜನಾತ್ಮಕ ಮಾದರಿಯಲ್ಲಿ ಎಲ್ಲ ವರ್ಗದ ಜನರನ್ನು ನಗಿಸುವ ಚಾಕಚಕ್ಯತೆ ಜಾನಿ ಹೊಂದಿದ್ದಾರೆ.

“ಧೂಮ್ ಧಮಾಕ-2016” ಕ್ಕೆ ತುಳು ಭಾಷೆಯಲ್ಲಿ ಆಹ್ವಾನ ನೀಡಿದ ಜಾನಿ ಲಿವರ್ 

ಜಾನಿ ಲಿವರ್ ಅವರು ಮುಂಬೈಯಲ್ಲಿ 2012ರಿಂದ ದಿ ಕಾಮಿಡಿ ಸ್ಟೋರ್ ನಡೆಸುತ್ತಿದ್ದು, 2013ರಲ್ಲಿ ಸೋನಿ ಮನರಂಜನಾ ವಾಹಿನಿಯ ಕಾಮಿಡಿ ಸರ್ಕಸ್ ಕೆ ಮಹಬಲಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ.

ವಿಶೇಷ ಆಕರ್ಷಣೆಯಾಗಿ ನೃತ್ಯ ರೂಪಕ !

surya

ಅದೇ ರೀತಿ ಖ್ಯಾತ ನೃತ್ಯ ಪಟುಗಳಾದ ಪ್ರಥಮ ಪ್ರಸಾದ್ ರಾವ್ ಮತ್ತು ಸೂರ್ಯ ಎನ್.ರಾವ್ ಅವರ ಸಮ್ಮಿಲನ ಕೂಡ ಈ ಕಾರ್ಯಕ್ರಮದ ವೈಶಿಷ್ಟ್ಯತೆ ಹಾಗೂ ಆಕರ್ಷಣೆಯಾಗಿದೆ. ಸಮ್ಮಿಲನದಲ್ಲಿ ವಿವಿಧ ಮಾದರಿ, ವಿನ್ಯಾಸಗಳು, ಭಾರತೀಯ ಶಾಸ್ತ್ರೀಯ ನೃತ್ಯ ಮಾದರಿಗಳು, ಕೂಚುಪುಡಿ ಮತ್ತು ಕಥಕ್‌ನಂತಹ ನೃತ್ಯ ರೂಪಗಳು ಒಟ್ಟಾಗಲಿವೆ.

ಇವರಿಬ್ಬರು ಬೆಂಗಳೂರಿನಲ್ಲಿ ಮಹಾಮಾಯ ಆರ್ಟ್ಸ್ ಫೌಂಡೇಶನ್ ನಡೆಸುತ್ತಿದ್ದಾರೆ. ಅವರು ಕಟಕ್ ಅಂತಾರಾಷ್ಟ್ರೀಯ ನೃತ್ಯ ಹಬ್ಬದಲ್ಲಿ ನೃತ್ಯ ಶಿರೋಮಣಿ ಪ್ರಶಸ್ತಿ ಸ್ವೀಕರಿಸಿದ್ದಾರೆ. ಮಾತ್ರವಲ್ಲ ಭುವನೇಶ್ವರಿಯಲ್ಲಿ ನಡೆದ ಶಾಂತಿ ಹಬ್ಬದಲ್ಲಿ ಒಡಿಸ್ಸಾ ಸರ್ಕಾರದಿಂದ ನ್ಯಾಷನಲ್ ಎಕ್ಸಲೆನ್ಸ್ ಪ್ರಶಸ್ತಿ ಪಡೆದಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಯಾದ ಕನ್ನಡ ಚಲನಚಿತ್ರ ಶ್ರೀ ಸಾಯಿ ಚಿತ್ರದಲ್ಲೂ ಅವರು ನಟಿಸಿದ್ದಾರೆ.

surya-prats

ಭಾರತ, ಮಾತ್ರವಲ್ಲ ಯುರೋಪ್, ಮಧ್ಯ ಏಷ್ಯಾ, ಅಮೆರಿಕ, ಸಿಂಗಾಪೂರ ಸೇರಿದಂತೆ ಹಲವು ದೇಶಗಳಲ್ಲಿ ತಮ್ಮ ಅದ್ಭುತ ಪ್ರದರ್ಶನ ನೀಡಿದ್ದಾರೆ. ಪ್ರಥಮ ಪ್ರಸಾದ್ ರಾವ್ ಅವರು ದಕ್ಷಿಣ ಭಾರತದ ಪ್ರಖ್ಯಾತ ಸಿನಿಮಾ ನಟಿ ವಿನಯಾ ಪ್ರಸಾದ್ ಅವರ ಪುತ್ರಿ. ಒಂದು ಅತ್ಯುತ್ತಮ ಉದ್ದೇಶಕ್ಕಾಗಿ ಇದೀಗ ಈ ಕುಟುಂಬ ನೃತ್ಯ, ಸಂಗೀತ, ಹಾಸ್ಯವನ್ನೊಳಗೊಂಡ ಮನರಂಜನೆ ನೀಡಲು ಸಿದ್ಧವಾಗಿದೆ.

ಆನ್‌ಲೈನ್ ಬುಕ್ಕಿಂಗ್‌ಗಾಗಿ …….
www.dhoomdhamaka2016.com Mail: hs9466@gmail.com or SMS / what’s up 97155- 6609466

Write A Comment