ರಾಷ್ಟ್ರೀಯ

ಕುಕ್ಕರ್‌ಗೆ ತಲೆ ಸಿಕ್ಕಿಸಿಕೊಂಡು ಪರದಾಡಿದ ಬಾಲಕ…ಈ ವಿಡಿಯೋ ನೋಡಿ

Pinterest LinkedIn Tumblr

368

ಭೂಪಾಲ್, ಸೆ.8: ಆಟವಾಡುತ್ತಿದ್ದ ಐದು ವರ್ಷದ ಪೋರ ಅನಿರೀಕ್ಷಿತವಾಗಿ ತನ್ನ ತಲೆಯನ್ನು ಅಡುಗೆ ಮಾಡುವ ಕುಕ್ಕರ್ ಒಳಗೆ ಸಿಕ್ಕಿಸಿಕೊಂಡು ನರಳಾಡಿದ್ದ ದೃಶ್ಯಗಳು ಸಾಮಾಜಿಕ ತಾಣದಲ್ಲಿ ಹರಿದಾಡಿ ಭಾರಿ ಸುದ್ದಿ ಮಾಡಿದೆ.

ಮಧ್ಯಪ್ರದೇಶದ ನರಸಿಂಗಪುರ ಪ್ರದೇಶದ 5 ವರ್ಷದ ಪೋರ ಎಂದಿನಂತೆ ಮನೆಯ ಆವರಣದಲ್ಲಿ ಆಟವಾಡುತ್ತಿದ್ದಾಗ, ಆಕಸ್ಮಿಕವಾಗಿ ಆತನ ತಲೆ ಪ್ರೆಷರ್ ಕುಕ್ಕರ್‌ನೊಳಗೆ ಸಿಲುಕಿಕೊಂಡು ಗಂಟೆಗಟ್ಟಲೇ ಹೆಣಗಾಡಿದ್ದಾನೆ.

ಕುಕ್ಕರ್‌ನಲ್ಲಿ ತಲೆ ಸಿಕ್ಕಿಸಿಕೊಂಡು ಬಾಲಕ ಚೀರಾಡುತ್ತಿದ್ದಾಗ ನೆರೆಹೊರೆಯವರು, ಪೋಷಕರು ಓಡೋಡಿ ಬಂದು ಆತನ ರಕ್ಷಣೆಗೆ ಹರಸಾಹಸ ಮಾಡಿದ್ದಾರೆ.

ಕೊನೆಗೆ ಮೆಟಲ್ ಕಟರ್ (ಆಕ್‌ಯಾಸ್ ಬ್ಲೇಡ್) ಬಳಸಿ ಬಾಲಕನ ತಲೆಗೆ ಸಿಲುಕಿಕೊಂಡ ಕುಕ್ಕರನ್ನು ವಿಭಜಿಸಿದ್ದಾರೆ.

ಎರಡು ಗಂಟೆಗೂ ಹೆಚ್ಚು ಹೊತ್ತು ಕುಕ್ಕರ್‌ನಲ್ಲಿ ತಲೆ ಸಿಕ್ಕಿಸಿಕೊಂಡಿದ್ದ ಬಾಲಕನನ್ನು ರಕ್ಷಿಸಿದ ವಿಡಿಯೋವನ್ನು ಸಾಮಾಜಿಕ ತಾಣದಲ್ಲಿ ಜನರು ಮುಗಿಬಿದ್ದು ನೋಡುತ್ತಿದ್ದಾರೆ.

Write A Comment