ಅಂತರಾಷ್ಟ್ರೀಯ

11 ತಿಂಗಳ ಮಗುವಿಗೆ ಡಿಕ್ಕಿ ಹೊಡೆದ ವ್ಯಾನ್: ಪವಾಡಸದೃಶ ಬದುಕುಳಿದ ಮಗು ! ಇಲ್ಲಿದೆ ವೀಡಿಯೋ

Pinterest LinkedIn Tumblr

MINI-VAN

ಜಿನ್‍ಜಿಯಾಂಗ್: ಮಿನಿ ವ್ಯಾನ್ ಡಿಕ್ಕಿ ಹೊಡೆದರೂ 11 ತಿಂಗಳ ಮಗು ಪವಾಡಸದೃಶ ರೀತಿಯಲ್ಲಿ ಬದುಕಿ ಉಳಿದಿದೆ. ಚೀನಾದ ಜಿನ್‍ಜಿಯಾಂಗ್ ನಗರದಲ್ಲಿ ಆಗಸ್ಟ್ 28ರಂದು ಘಟನೆ ನಡೆದಿದ್ದು, ಈಗ ಪೊಲೀಸರು ಈ ಅಪಘಾತದ ಸಿಸಿಟಿವಿ ದೃಶ್ಯಾವಳಿಗಳನ್ನು ಬಿಡುಗಡೆ ಮಾಡಿದ್ದಾರೆ.

ಮಗುವಿನ ಜೊತೆ ತಾಯಿ ರಸ್ತೆ ಬದಿಯಲ್ಲಿ ಕೂತಿದ್ದರು. ಈ ವೇಳೆ ಎದುರುಗಡೆಯಿಂದ ವೇಗವಾಗಿ ಬಂದ ಮಿನಿ ವ್ಯಾನ್ ಮಗುವಿಗೆ ಡಿಕ್ಕಿ ಹೊಡೆಯುತ್ತದೆ. ಆದರೆ ಚಾಲಕ ತಕ್ಷಣ ಬ್ರೇಕ್ ಹಾಕಿ ನಿಲ್ಲಿಸಿ ಇಳಿದು ಬಂದು ವ್ಯಾನ್ ಎತ್ತಲು ಪ್ರಯತ್ನಿಸಿದರೂ ಆತ ಇದರಲ್ಲಿ ಸಫಲನಾಗುವುದಿಲ್ಲ. ಬಳಿಕ ಅಲ್ಲೇ ಇದ್ದ ಕೆಲವರು ಬಂದು ವ್ಯಾನ್ ಎತ್ತುತ್ತಾರೆ. ಮಗುವಿನ ತಾಯಿ ಮಗುವನ್ನು ಕರೆದುಕೊಂಡು ಓಡಿ ಹೋಗಿ ಆಸ್ಪತ್ರೆಗೆ ದಾಖಲಿಸಿದ್ದಾಳೆ.

https://youtu.be/zH3qLa9XG5g

Write A Comment