ಕರಾವಳಿ

ತ್ರಾಸಿ | ಸೆಂಟ್ರಲ್ ಎಸಿ ತಾಮ್ರದ ಪೈಪ್ ಕಳವಿಗೆ ಯತ್ನ: ಬಾಲಕ ಸಹಿತ ಇಬ್ಬರು ವಶಕ್ಕೆ

Pinterest LinkedIn Tumblr

ಕುಂದಾಪುರ: ತ್ರಾಸಿಯಲ್ಲಿರುವ ಅಖಿಲ ಭಾರತ ಕೊಂಕಣಿ ಖಾರ್ವಿ ಮಹಾಜನ ಸಭಾ ಹಾಲ್‌ನ ಒಂದನೇ ಮಹಡಿಯ ಸ್ಟೆಪ್ ಬಳಿ ಅಳವಡಿಸಿದ್ದ ಸೆಂಟ್ರಲ್ ಎಸಿಯ ತಾಮ್ರದ ಪೈಪ್‌ ಕಳವಿಗೆ ಯತ್ನಿಸಿದ್ದ ಇಬ್ಬರು ಆರೋಪಿಗಳನ್ನು ಗಂಗೊಳ್ಳಿ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಸ್ರೂರು ಗ್ರಾಮದ ಮಹಮ್ಮದ್ ಹನೀಫ್ (18) ಹಾಗೂ ಕಾನೂನು ಸಂಘರ್ಷಕ್ಕೊಳಗಾದ ಬಾಲಕ ಬಂಧಿತರು.

ಎ.16ರಂದು ಈ ಘಟನೆ ನಡೆದಿದ್ದು ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Comments are closed.