ಕರಾವಳಿ

ಪಡುಬಿದ್ರೆ | ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದ ಇಬ್ಬರ ಬಂಧನ

Pinterest LinkedIn Tumblr

ಉಡುಪಿ: ವಾಹನದಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪಡುಬಿದ್ರೆ ಪೊಲೀಸರು ಇನ್ನಾ ಗ್ರಾಮದ ಕಜನಡ್ಕ ಎಂಬಲ್ಲಿ ಸೋಮವಾರ ಬಂಧಿಸಿದ್ದಾರೆ.

ನಾಲು ಗ್ರಾಮದ ಅಲಂಗಾರ ರೋಡ್ ನಿವಾಸಿ ಇಸ್ಮಾಯಿಲ್(42) ಹಾಗೂ ಮುಲ್ಕಿ ಕರ್ನಿರೆ ಬಳಿಯ ನಿವಾಸಿ ಕರ್ನಿರೆ ಮಹಮ್ಮದ್(62) ಬಂಧಿತ ಆರೋಪಿಗಳು.

ಕಾರ್ಕಳ ಕಡೆಯಿಂದ ಪಡುಬಿದ್ರಿ ಕಡೆಗೆ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ವಾಹನವನ್ನು ಪೊಲೀಸರು ತಡೆದು ಪರಿಶೀಲಿಸಿದಾಗ 3 ದನಗಳು ಕಂಡುಬಂದಿದ್ದು ವಾಹನದ ಚಾಲಕ ಇಸ್ಮಾಯಿಲ್ ಹಾಗೂ ಮುಹಮ್ಮದ್‌ನನ್ನು ವಶಕ್ಕೆ ಪಡೆದುಕೊಂಡರು. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಇಸ್ಮಾಯಿಲ್ ವಿರುದ್ದ ಮಂಗಳೂರಿನ ಬರ್ಕೆ ಪೊಲೀಸ್‌ ಠಾಣೆಯಲ್ಲಿ 1, ಮುಲ್ಕಿ ಠಾಣೆಯಲ್ಲಿ 3, ಬಂಟ್ವಾಳ ನಗರ ಠಾಣೆಯಲ್ಲಿ 1, ಸುರತ್ಕಲ್ ಪೊಲೀಸ್ ಠಾಣೆಯಲ್ಲಿ 1, ಕಾರ್ಕಳ ನಗರ ಠಾಣೆಯಲ್ಲಿ 1, ಹೆಬ್ರಿ ಪೊಲೀಸ್‌ ಠಾಣೆಯಲ್ಲಿ 2 ಪ್ರಕರಣಗಳು ಅಕ್ರಮ ಗೋ ಸಾಗಾಟ ಮತ್ತು ಗೋಹತ್ಯೆ ನಿಷೇಧ ಕಾಯಿದೆಯಂತೆ ದಾಖಲಾಗಿವೆ.

ವಶಪಡಿಸಿಕೊಂಡ ವಾಹನ ಹಾಗೂ ದನಗಳ ಮೌಲ್ಯ 4,25,000ರೂ. ಎಂದು ಅಂದಾಜಿಸಲಾಗಿದೆ. ಈ ಕಾರ್ಯಾಚರಣೆ ಯಲ್ಲಿ ಎಸ್ಸೆ ಅನಿಲ್ ಕುಮಾ‌ರ್, ಸಿಬ್ಬಂದಿ ಎಎಸ್ಸೆ ದಿನಕರ, ನವೀನ್ ಕುಮಾ‌ರ್, ಅಶ್ವಿನ್ ಕುಮಾ‌ರ್, ಕೃಷ್ಣ ಪ್ರಸಾದ್, ಸಂದೇಶ್, ಪ್ರಭು ಅಥಣಿ, ರಾಘವೇಂದ್ರ, ಅಣ್ಣಪ್ಪ ಶ್ರೀಧ‌ರ್ ಭಾಗವಹಿಸಿದ್ದರು.

Comments are closed.