ಕರಾವಳಿ

ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಮಕ್ಕಳಿಗಾಗಿ ‘ತೆರೆದ ಮನೆ’ ಕಾರ್ಯಕ್ರಮ

Pinterest LinkedIn Tumblr

ಕುಂದಾಪುರ: ತಾಲೂಕಿನ ಶಂಕರನಾರಾಯಣ ಪರಿಸರದ ಶಾಲಾ ಮಕ್ಕಳನ್ನು ಒಗ್ಗೂಡಿಸಿ ಶಂಕರನಾರಾಯಣದ ಜಿ.ಎಸ್ ಆಚಾರ್ಯ ರಂಗಮಂದಿರದಲ್ಲಿ  ಬೇಸಿಗೆ ಶಿಬಿರ ನಡೆಯುತ್ತಿದ್ದು ಈ ಶಿಬಿರದ ಎಲ್ಲಾ ವಿದ್ಯಾರ್ಥಿಗಳನ್ನು ಶಂಕರನಾರಾಯಣ ಠಾಣೆಗೆ ಕರೆಸಿ ಅಧಿಕಾರಿಗಳು, ಸಿಬ್ಬಂದಿಗಳು ಮಕ್ಕಳಿಗೆ ‘ತೆರೆದ ಮನೆ’ ಕಾರ್ಯಕ್ರಮ ನಡೆಸಿ ಅತ್ಯಗತ್ಯ ಇರುವ ಮಾಹಿತಿಯನ್ನು ನೀಡಿದರು.

ಈ ಸಂದರ್ಭ ಠಾಣೆಯ ನಿಸ್ತಂತು (ವಯರ್‌ಲೆಸ್) ಕುರಿತು ಸೂಕ್ತ ತಿಳುವಳಿಕೆ ಹಾಗೂ ರಿವಾಲ್ವರ್ ಮತ್ತು ಬಂದೂಕುಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಯಿತು. ಮಕ್ಕಳ ಸಹಾಯವಾಣಿ 1098 ಬಗ್ಗೆ ಹಾಗೂ 112 ಅದರ ಉಪಯೋಗದ ಬಗ್ಗೆ, ಬಾಲ ಅಪರಾಧ ಫೋಕ್ಸೋ ಕಾಯ್ದೆ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಲಾಯಿತು. ಠಾಣೆಯ ಬಂದಿಖಾನೆಯನ್ನು ಪೊಲೀಸ್ ಉಪನಿರೀಕ್ಷಕರ ಕೊಠಡಿ ಠಾಣಾ ಬರಹಗಾರರ ಕೊಠಡಿ ಪರಿಚಯಿಸಲಾಯಿತು.

ಕುಂದಾಪುರ ಗ್ರಾಮಾಂತರ ವೃತ್ತ ನಿರೀಕ್ಷಕ ಸಂತೋಷ್ ಕಾಯ್ಕಿಣಿ,  ಶಂಕರನಾರಾಯಣ ಪೊಲೀಸ್ ಠಾಣಾ ಕಾನೂನು ಮತ್ತು‌ ಸುವ್ಯವಸ್ಥೆ ಪಿಎಸ್ಐ ಐ.ಆರ್. ಗಡ್ಡೇಕರ್, ತನಿಖಾ ವಿಭಾಗದ ಪಿಎಸ್ಐ ಅಕ್ಷಯಕುಮಾರಿ ಮತ್ತು ಎಎಸ್ಐ, ಸಿಬ್ಬಂದಿಗಳು ಇದ್ದರು.

Comments are closed.