ಕರಾವಳಿ

ಮರವಂತೆ | ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ನಿಯಂತ್ರಣ, ಸವಾರರ ಸುರಕ್ಷತೆಗೆ ಇಲಾಖೆಗಳಿಂದ ಅಗತ್ಯ ಕ್ರಮ

Pinterest LinkedIn Tumblr

ಕುಂದಾಪುರ: ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮರವಂತೆ ಬೀಚ್ ಬಳಿ ಎ.29 ರಂದು ಪ್ರವಾಸಿ ಬಸ್‌ವೊಂದು ನಿಂತಿದ್ದ ಟ್ಯಾಂಕರ್ ಹಾಗೂ ಟ್ರಕ್‌ಗೆ ಡಿಕ್ಕಿ ಹೊಡೆದು ಭೀಕರ ರಸ್ತೆ ಅಪಘಾತ ಸಂಭವಿಸಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್‌ಟಿಓ ಅಧಿಕಾರಿ ಮಾರುತಿ ನಾಯ್ಕ್, ಎನ್‌ಎಚ್‌ಎಐ, ಬೈಂದೂರು ಪೊಲೀಸ್ ವೃತ್ತ ನಿರೀಕ್ಷಕ ಶಿವಕುಮಾರ್ ಹಾಗೂ ಸಿಬ್ಬಂದಿಗಳು, ಐಆರ್ಬಿ ಸಂಸ್ಥೆಯಿಂದ ಮನೋಜ್ ಮೊದಲಾದವರು ಅಪಘಾತ ಸ್ಥಳಕ್ಕೆ ಭೇಟಿ ನೀಡಿ ಜಂಟಿ ಪರಿಶೀಲನೆ ನಡೆಸಿದ್ದು ಈ ಪ್ರದೇಶದಲ್ಲಿ ಅಪಘಾತ ತಡೆಗಟ್ಟುವ ಉದ್ದೇಶದಿಂದ ರಸ್ತೆ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳುವ ಕುರಿತು ಅವಲೋಕಿಸಿ ಸಂಬಂಧಿತ ರಾ.ಹೆದ್ದಾರಿ ಗುತ್ತಿಗೆ ವಹಿಸಿರುವ ಐ.ಆರ್.ಬಿ.ಗೆ ನಿರ್ದೇಶನ ನೀಡಲಾಗಿತ್ತು.

ಸೂಚನಾ ಫಲಕಗಳಗಳ ಅಳವಡಿಕೆ: ನೋ ಪಾರ್ಕಿಂಗ್, ವಾಹನಗಳ ವೇಗ ಮಿತಿ ಸಂಬಂಧಿತ ಸೂಚನೆಗಳು, ಪ್ರತಿಫಲಕಗಳು (ರಿಫ್ಲೆಕ್ಟರ್), ಅಪಘಾತ ವಲಯ ಸೂಚಕ ನಾಮಫಲಕಗಳು ಸಹಿತ ವಾಹನ ಸವಾರರ ಸುರಕ್ಷತೆ ಹಾಗೂ ಅಪಘಾತ ನಿಯಂತ್ರಣದ ದೃಷ್ಟಿಯಿಂದ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಗುತ್ತಿಗೆ ಸಂಸ್ಥೆ ಕ್ರಮವಹಿಸಿದೆ.

Comments are closed.