ಕರಾವಳಿ

ಬೈಕಿಗೆ ಸರಪಳಿ ಕಟ್ಟಿ ನಾಯಿಯನ್ನು ಎಳೆದೊಯ್ಯುತ್ತಿದ್ದ ವ್ಯಕ್ತಿ ವಿರುದ್ಧ ಬೈಂದೂರು ಠಾಣೆಯಲ್ಲಿ ಸುಮೊಟೊ ಪ್ರಕರಣ ದಾಖಲು

Pinterest LinkedIn Tumblr

ಕುಂದಾಪುರ: ಸಾಕು ನಾಯಿಯೊಂದನ್ನು ಬೈಕಿಗೆ ಸರಪಳಿಯಿಂದ ಕಟ್ಟಿ ಎಳೆದೊಯ್ಯುತ್ತಿದ್ದ ಆರೋಪಿಯ ವಿರುದ್ಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಾಗಿದೆ.

ಯಡ್ತರೆ ಗ್ರಾಮದ ರಾಷ್ಟ್ರೀಯ ಹೆದ್ದಾರಿ 66ರ ಬೈಂದೂರು ಕುಂದಾಪುರ ಏಕಮುಖ ರಸ್ತೆಯ ಸರ್ವೀಸ್ ರಸ್ತೆಯಲ್ಲಿ ರಾವುತನಕಟ್ಟೆಯಿಂದ ನಾಕಟ್ಟೆ ಸೇತುವೆಯವರೆಗೆ ಪಡುವರಿ ಗ್ರಾಮದ ನಿವಾಸಿಯೊಬ್ಬ ತನ್ನ ಮನೆಯ ಸಾಕು ನಾಯಿಯೊಂದನ್ನು ಆತನ ಬೈಕಿಗೆ ಸರಪಳಿಯಿಂದ ಕಟ್ಟಿ ಚಲಾಯಿಸಿಕೊಂಡು ಹೋಗುತ್ತಿರುವ ವಿಡಿಯೋ ಮೇ 25ರಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಈ ವಿಡಿಯೋವನ್ನು ಪೊಲೀಸರು ಗಮನಿಸಿದ್ದು, ಪರಿಶೀಲಿಸಿದಾಗ ವ್ಯಕ್ತಿಯ ಬೈಂದೂರು ಪಡುವರಿ ಗ್ರಾಮದ ಸುಬ್ರಹ್ಮಣ್ಯ ಎಂಬುದಾಗಿ ತಿಳಿದು ಬಂದಿದೆ. ಮೂಕಪ್ರಾಣಿಯನ್ನು ಈ ರೀತಿಯಾಗಿ ಹಿಂಸಾತ್ಮಕ ರೀತಿಯಲ್ಲಿ ಎಳೆದಾಡಿಕೊಂಡು ಹೋಗಿರುವುದರಿಂದ ನಾಯಿಯು ಗಾಯಗೊಂಡಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.

ಅದರಂತೆ ಆರೋಪಿ ವಿರುದ್ಧ ಬೈಂದೂರು ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿದ್ದು, ತನಿಖೆ ಮುಂದುವರೆದಿದೆ.

Comments are closed.