ಕರಾವಳಿ

ವಿದ್ಯುತ್ ತಂತಿ ಮೈ ಮೇಲೆ ಬಿದ್ದು ಯುವ ಯಕ್ಷಗಾನ ಕಲಾವಿದ ದಾರುಣ ಮೃ*ತ್ಯು, ಇನ್ನೊಬ್ಬ ಕಲಾವಿದ ಪಾರು

Pinterest LinkedIn Tumblr

ಉಡುಪಿ: ಆಗುಂಬೆ ಸಮೀಪ ವಿದ್ಯುತ್ ತಂತಿ ಮೈ ಮೇಲೆ ಬಿದ್ದ ಪರಿಣಾಮ ದ್ವಿಚಕ್ರ ವಾಹನದಲ್ಲಿದ್ದ ಯುವ ಯಕ್ಷಗಾನ ಕಲಾವಿದ ರಂಜಿತ ಬನ್ನಾಡಿ ಸಾವನ್ನಪ್ಪಿದ ಅವಘಡ ಬುಧವಾರ ನಡೆದಿದೆ.

ಕೊಪ್ಪ ಸಮೀಪದಲ್ಲಿದ್ದ ಸೂರಾಲು ಮೇಳದ ಪ್ರದರ್ಶನ ಮಳೆಯಿಂದ ರದ್ದಾದ ಕಾರಣ ಮನೆಗೆ ವಾಪಾಸಾಗುತ್ತಿದ್ದ ವೇಳೆ ಆಗುಂಬೆ ಸಮೀಪ ವಿದ್ಯುತ್ ತಂತಿ ಮೈ ಮೇಲೆ ಬಿದ್ದು ದ್ವಿಚಕ್ರ ವಾಹನ ಬಿಡುತ್ತಿದ್ದ ರಂಜಿತ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಥಳಿಯರ ಸಹಕಾರದಿಂದ ಹಿಂಬದಿ ಸವಾರ ಸ್ತ್ರೀ ಪಾತ್ರಧಾರಿ ವಿನೋದ್ ರಾಜ್ ಎನ್ನುವವರು ಪಾರಾಗಿದ್ದಾರೆ.

ಘಟನೆ ನಡೆದ ಕೂಡಲೇ ಸ್ಥಳಿಯರ ಸಹಕಾರದಿಂದ ತುರ್ತುವಾಹನದ ಮೂಲಕ ಮಣಿಪಾಲ ಖಾಸಗಿ ಅಸ್ಪತ್ರೆ ಕರೆತರಲಾಯಿತಾದರೂ ಅದಾಗಲೇ ಕೊನೆಯುಸಿರೆಳೆದಾಗಿತ್ತು ಎಂದು ತಿಳಿದು ಬಂದಿದೆ.

Comments are closed.