ದುಬೈ: ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ., ಮಧ್ಯಪ್ರಾಚ್ಯದ ಹೆಮ್ಮೆಯ ಸಂಸ್ಥೆಯ ದಶಮಾನೋತ್ಸವ ಸಂಭ್ರಮ ಮತ್ತು ದುಬಾಯಿ ಯಕ್ಷೋತ್ಸವ 2025ರ ಅಂಗವಾಗಿ ನಡೆಯಲಿರುವ ಅದ್ದೂರಿಯ ಯಕ್ಷಗಾನ ಸಂಬಂಧಿ ಕಾರ್ಯಕ್ರಮ, ಗಲ್ಫ್ ರಾಷ್ಟ್ರದಲ್ಲಿಯೇ ಪ್ರಥಮ ಬಾರಿಗೆ ನಡೆಯಲಿರುವ ‘ಯಕ್ಷಗಾಯನ ಸೌರಭ’ ಮತ್ತು ‘ಶಿವಾನಿ ಸಿಂಹವಾಹಿನಿ’ ಇದರ ಆಮಂತ್ರಣ ಪತ್ರ ಮತ್ತು ಪ್ರವೇಶಪತ್ರದ ಬಿಡುಗಡೆ ಸಮಾರಂಭವು ದುಬೈನ ಹೋಟೇಲ್ ಫಾರ್ಚೂನ್ ಪ್ಲಾಝದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆಯಿತು.
ಅದ್ದೂರಿಯ ಆಯೋಜನೆಯ ಈ ಕಾರ್ಯಕ್ರಮ, ಇದೇ ಬರುವ ದಿನಾಂಕ 29-06-2025 ರಂದು ದುಬಾಯಿ ಕರಮದ ಶೇಖ್ ರಶೀದ್ ಅಡಿಟೋರಿಯಂನಲ್ಲಿ (ಇಂಡಿಯನ್ ಸ್ಕೂಲ್ ಕರಮ- ವೂದ್ ಮೆತಾ ಮೆಟ್ರೋ ಸ್ಟೇಶನ್ ಸಮೀಪ) ನಡೆಯಲಿರುವ ಬಹು ನಿರೀಕ್ಷಿತ ಸಮಾರಂಭದ ಆಮಂತ್ರಣ ಪತ್ರ ಬಿಡುಗಡೆ ಮತ್ತು ಪ್ರವೇಶ ಪತ್ರ ಬಿಡುಗಡೆ ಕಾರ್ಯಕ್ರಮ ಪ್ರಾರ್ಥನೆ-ದೀಪಪ್ರಜ್ವಲನೆಯೊಂದಿಗೆ ಪ್ರಾರಂಭವಾಯಿತು.
ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಸ್ವಾಗತಿಸಿದ ಯಕ್ಷಗಾನ ಅಭ್ಯಾಸ ಕೇಂದ್ರದ ಸಂಚಾಲಕ ದಿನೇಶ ಶೆಟ್ಟಿಯವರು ತಮ್ಮ ಪ್ರಾಸ್ತಾವಿಕ ಮಾತುಗಳಲ್ಲಿ, ಯಕ್ಷಗಾನ ಅಭ್ಯಾಸ ಕೇಂದ್ರ ನಡೆದು ಬಂದ ದಾರಿ, ಉದ್ದೇಶ, ಸಾಫಲ್ಯ ಕುರಿತು ಮಾತನಾಡಿ, ಪ್ರಸ್ತುತ ವರ್ಷದ ಅದ್ದೂರಿಯ ದಶಮಾನೋತ್ಸವ ಕಾರ್ಯಕ್ರಮ ಮತ್ತು ಯಕ್ಷಗಾನ ಶಿವಾನಿ ಸಿಂಹವಾಹಿನಿ ಯಶಸ್ಸಿಗೆ ಸರ್ವರ ಸಹಕಾರವನ್ನು ಬಯಸಿದರು.
ಯಕ್ಷಧ್ರುವ ಪಟ್ಲ ಘಟಕ ಯುಎಇ ಇದರ ಸಹಭಾಗಿತ್ವದೊಂದಿಗೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಪಟ್ಲ ಟ್ರಸ್ಟ್ ಸ್ಥಾಪಕರಾದ ಸತೀಶ ಶೆಟ್ಟಿಯವರು ಸ್ವತಃ ತಮ್ಮ ಗಾನ ಸಾರಥ್ಯದ ಮೂಲಕ ಕಲೆಯೇರಿಸಲಿದ್ದಾರೆ ಎಂದು ತಿಳಿಸಿದರು. ಶಿವಾನಿ ಸಿಂಹವಾಹಿನಿ ಯಕ್ಷಗಾನ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಅತಿಥಿ ಕಲಾವಿದರಾದ, ಗಾನ ಪ್ರತಿಭೆ ದೇವಿಪ್ರಸಾದ ಆಳ್ವ ತಲಪಾಡಿ, ಕಾವ್ಯ ನಾಯಕ್ ಅಜೇರು, ಚೆಂಡೆ-ಮದ್ದಳೆ ವಾದಕರಾದ ಚಂದ್ರಶೇಖರ ಸರಪಾಡಿ, ಪ್ರಮುಖ ವೇಷಧಾರಿಗಳಾಗಿ ಭಾಗವಹಿಸಲಿರುವ ಸುಬ್ರಾಯ ಹೊಳ್ಳ ಕಾಸರಗೋಡು ಮತ್ತು ಅರುಣ್ ಕೋಟ್ಯಾನ್, ಹಾಗೂ ವರ್ಣವಸ್ತ್ರಾಲಂಕಾರ ತಜ್ಞರಾದ ಗಂಗಾಧರ ಡಿ. ಶೆಟ್ಟಿಗಾರ್ ಕಿನ್ನಿಗೋಳಿ, ನಿತಿನ್ ಕುಂಪಲ ಮತ್ತು ಮನೋಜ್ ಶೆಟ್ಟಿಗಾರ್ ಹಳೆಯಂಗಡಿಯವರ ವಿವರಗಳನ್ನು ಸಭೆಗೆ ನೀಡಿದ್ದು ಕಾರ್ಯಕ್ರಮ ನಿರೂಪಕರಾಗಿ ಚೇತನ್ ಶೆಟ್ಟಿಯವರು ಆಗಮಿಸಲಿದ್ದಾರೆ ಎಂದು ತಿಳಿಸಿದರು.
ಯುಎಇ ಯಕ್ಷಗಾನ ಅಭ್ಯಾಸ ಕೇಂದ್ರದ ಗುರುಗಳು ಪ್ರಸಂಗ ನಿರ್ದೇಶಕರೂ ಆದ ಶೇಖರ್ ಡಿ. ಶೆಟ್ಟಿಗಾರ್ ಕಿನ್ನಿಗೋಳಿಯವರು, ಸಭೆಗೆ ಕಾರ್ಯಕ್ರಮದ ಮಾಹಿತಿ ನೀಡುತ್ತಾ, ಕೀರ್ತಿಶೇಷ ಯಕ್ಷಬ್ರಹ್ಮ ಅಗರಿ ಶ್ರೀನಿವಾಸ ಭಾಗವತ ವಿರಚಿತ, ಈಗಾಗಲೇ ಲಕ್ಷಕ್ಕೂ ಮಿಕ್ಕಿದ ಪ್ರದರ್ಶನ ಕಂಡ – “ಶಿವಾನಿ ಸಿಂಹವಾಹಿನಿ” – ಪ್ರಸಂಗ- ಪ್ರದರ್ಶನ ಕುರಿತಾಗಿ ವಿವರವನ್ನು ಸಭೆಗ ನೀಡಿದರು. ಅಲ್ಲದೆ ಯುಎಇ.ಯಲ್ಲಿಯೇ ಪ್ರಥಮ ಬಾರಿಗೆ, ಪ್ರಖ್ಯಾತ ಭಾಗವತ ತ್ರಯರಿಂದ ನಡೆಯಲಿರುವ “ಯಕ್ಷ ಗಾಯನ ಸೌರಭ” ಅಲ್ಲದೆ ಕಾರ್ಯಕ್ರಮ ಆರಂಭದಲ್ಲಿ ಅಬ್ಬರಿಸಲಿರುವ, “ಅಬ್ಬರ ತಾಳ”, ವೈಭವದ ಶೋಭಾಯಾತ್ರೆ, ಪುಟಾಣಿ ಮಕ್ಕಳು ಮತ್ತು ಕೇಂದ್ರದ ಭಾಗವತಿಗೆ ಮತ್ತು ಚೆಂಡೆ-ಮದ್ದಳೆ ಅಭ್ಯಾಸಿಗಳ ಹಿಮ್ಮೇಳದೊಂದಿಗೆ ನಡೆಯಲಿರುವ ಸೊಗಸಾದ ಪೂರ್ವರಂಗದ ಮೂಲಕ ಪರಂಪರೆಯ ನಾಟ್ಯ ವೈಭವ ಕಾಣಿಸಿಕೊಡಲಿದ್ದಾರೆ ಎಂಬಿತ್ಯಾದಿಗಳ ವಿವರಗಳನ್ನೂ ಸಭೆಗೆ ನೀಡಿದರು.
ಗೌರವಾನ್ವಿತ ಅತಿಥಿಗಳಾಗಿ ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ, ಉದ್ಯಮಿ ಹಾಗೂ ಯುಎಇ ಬಂಟ್ಸ್, ಕರ್ನಾಟಕ ಎನ್.ಆರ್.ಐ ವೇದಿಕೆಯ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ ಮೊದಲಾದವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ, ಯಕ್ಷೋತ್ಸವದ ಆಮಂತ್ರಣ ಪತ್ರ ಮತ್ತು ಪ್ರವೇಶ ಬಿಡುಗಡೆಗೊಳಿಸಿ, ಕಾರ್ಯಕ್ರಮಕ್ಕೆ ಶುಭಕೋರಿದರು.
ಇದೆ ಸಂದರ್ಭದಲ್ಲಿ, ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಅಡ್ಯಾರ್ ಗಾರ್ಢನ್ ನಲ್ಲಿ ಹಮ್ಮಿಕೊಂಡಿರುವ ದಶಮಾನೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರವನ್ನು ವೇದಿಕೆಯಲ್ಲಿ ಬಿಡುಗಡೆಗೊಳಿಸಲಾಯಿತು.
ಯಕ್ಷಧ್ರುವ ಪಟ್ಲ ಟ್ರಸ್ಟ್ ದುಬಾಯಿ ಘಟಕದ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ, ಸಂಚಾಲಕರಾದ ಪ್ರವೀಣ್ ಶೆಟ್ಟಿ ಮೊದಲಾದವರು ಅಶಕ್ತ ಕಲಾವಿದರ ನೆರವಿಗಾಗಿ ಸ್ಥಾಪಿಸಿರುವ ಪಟ್ಲ ಟ್ರಸ್ಟ್ ಇದನ್ನು ಬಲಪಡಿಸುವ ಉದ್ದೇಶದಿಂದ ನಾವೆಲ್ಲರೂ ಕೈಜೋಡಿಸೋಣ ಎಂದು ಕರೆ ನೀಡಿದರು.
ಅಲ್ಲದೆ ತಮ್ಮ ಗೌರವ ಉಪಸ್ಥಿತಿಯ ಮೂಲಕ ಸಭೆಯನ್ನು ಚಂದಗಾಣಿಸಿಕೊಟ್ಟ ದೀಪಕ್ ಎಸ್‌ಪಿ ಅಧ್ಯಕ್ಷರು- ಬಿಲ್ಲವಾಸ್ ದುಬೈ, ಸತೀಶ್ ಪೂಜಾರಿ ಅಧ್ಯಕ್ಷರು – ಶಾರ್ಜಾ ಕರ್ನಾಟಕ ಸಂಘ, ಸುಧಾಕರ ರಾವ್ ಪೇಜಾವರ- ಉದ್ಯಮಿ, ಬ್ರಾಹ್ಮಣ ಸಮಾಜ ಯುಎಇ, ವರದರಾಜ ಶೆಟ್ಟಿಗಾರ್-ಉಪಾಧ್ಯಕ್ಷರು ಪದ್ಮಶಾಲಿ ಸಮುದಾಯ ದುಬೈ, ರಮಾನಂದ ಶೆಟ್ಟಿ -ಉದ್ಯಮಿ- 365 Enviro Dubai ; ಮನೋಜ್ ಬಂಗೇರ , ಪೊಲದವರ ಯಾನೆ ಗಟ್ಟಿ ಸಮಾಜ ದುಬೈ, ಸಂದೇಶ್ ಜೈನ್ , ಜೈನ್ ಮಿಲನ್ ದುಬೈ ; ಸುಪ್ರೀತ್ ಗಾಣಿಗ- ಗಾಣಿಗ ಸಮಾಜ ದುಬೈ, ಜಸ್ಮಿತಾ ವಿವೇಕ್- ಅಧ್ಯಕ್ಷರು ತೀಯಾ ಸಮಾಜ ದುಬೈ , ಶೋಧನ್ ಪ್ರಸಾದ್- ಚಿತ್ರ ನಿರ್ಮಾಪಕರು, ಸುಗಂಧರಾಜ್ ಬೇಕಲ್ -ಮಾರ್ಗದೀಪ ಸಾಂಸ್ಕೃತಿಕ ಸಮಿತಿ, ಮಲ್ಲಿಕಾರ್ಜುನ ಗೌಡ -ವೀರಶೈವ ಲಿಂಗಾಯತ ಸಮಾಜ ದುಬೈ, ಕಿರಣ್ ಗೌಡ – ಒಕ್ಕಲಿಗರ ಸಂಘ ದುಬೈ -ಯುಎಇ, ವಿಶ್ವನಾಥ್ ಶೆಟ್ಟಿ- ರಂಗ ನಿರ್ದೇಶಕರು, ಗಮ್ಮತ್ ಕಲಾವಿದೆರ್ ದುಬೈ, ಸಂದೀಪ್ ಕೋಟ್ಯಾನ್- ಬಿರುವೆರ್ ಕುಡ್ಲ ಯುಎಇ, ವಾಸು ಕುಮಾರ್ ಶೆಟ್ಟಿ,-ಕರ್ನಾಟಕ ಸಂಘ ದುಬೈನ ಜಯಂತ್ ಶೆಟ್ಟಿ , ಮನೋಹರ್ ಹೆಗ್ಡೆ , ನಾಗರಾಜ್ ರಾವ್ ಉಡುಪಿ ರಶ್ಮಿಕಾಂತ್ ಶೆಟ್ಟಿ ,ಲ ಪ್ರಭಾಕರ ಸುವರ್ಣ, ಅರುಣ್ ಕುಮಾರ್, ಅಮರದೀಪ್ ಪ್ರಭಾಕರ್ ಹಾಗೂ ಯುಎಇ ವಿವಿದ ಸಂಘಸಂಸ್ಥೆಗಳ ಪದಾಧಿಕಾರಿಗಳು, ಉದ್ಯಮಿಗಳು ಕಾರ್ಯಕ್ರಮಕ್ಕೆ ಸಂಪೂರ್ಣ ಬೆಂಬಲದ ಜೊತೆಗೆ ಶುಭಹಾರೈಸಿ ಮಾತನಾಡಿದರು.ಭಾಗವಹಿಸಿದ ಎಲ್ಲರಿಗೂ ಕೇಂದ್ರದ ವತಿಯಿಂದ ಗೌರವಾರ್ಪಣೆ ಮಾಡಲಾಯಿತು.
ಕೇಂದ್ರದ ಹಿರಿಯ ಕಲಾವಿದರಾದ ವೆಂಕಟೇಶ ಶಾಸ್ತ್ರಿ ಪುತ್ತಿಗೆ, ಭವಾನಿಶಂಕರ ಶರ್ಮ, ಜಯಾನಂದ ಪಕ್ಕಳ, ಮೊದಲಾದವರು ವೇದಿಕೆಯಲ್ಲಿ ಅತಿಥಿಗಳೊಂದಿಗೆ ಉಪಸ್ಥಿತರಿದ್ದು ಕಾರ್ಯಕ್ರಮ- ಪ್ರಸಂಗಗಳ ಮುನ್ನೋಟದ ಮಾತುಗಳನ್ನಾಡಿದರು.
ಅಭ್ಯಾಸ ಕೇಂದ್ರದ ಹಿತೈಷಿಗಳಾದ ಮಾಧ್ಯಮ ಮಿತ್ರರಾದ ವಿಜಯ ಕುಮಾರ್ ಶೆಟ್ಟಿ, ದಿವ್ಯೆಶ್ ಉದ್ಯಾವರ, ವಿವೇಕ್ , ಶರತ್ ಸರಳಾಯ, ನಾಗೇಶ್ ಸರಳಾಯ ಮೊದಲಾದವರ ಉಪಸ್ಥಿತಿಯನ್ನು ಕೇಂದ್ರದ ವತಿಯಿಂದ ಗೌರವಿಸಲಾಯಿತು.ಕೇಂದ್ರದ ವಿದ್ಯಾರ್ಥಿಗಳು, ಮಕ್ಕಳ ಪೋಷಕರು, ಕಾರ್ಯಕರ್ತರು, ಕಲಾಪ್ರೇಮಿಗಳು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಪ್ರೋತ್ಸಾಹಿಸಿದರು.
ಯಕ್ಷಗಾನ ಅಭ್ಯಾಸ ಕೇಂದ್ರದ ಸದಸ್ಯರೂ, ಕಲಾವಿದರಾದ ಗಿರೀಶ್ ನಾರಾಯಣ ಅವರು ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.
Comments are closed.