ಕರಾವಳಿ

ಭಾರತೀಯ ಮಜ್ದೂರ್ ಸಂಘದಿಂದ ವಿಶ್ವಕರ್ಮ ದಿನಾಚರಣೆ, ವಿಶ್ವ ಕಾರ್ಮಿಕ ದಿನಾಚರಣೆ: ಶಾಸಕರಿಗೆ ಸನ್ಮಾನ

Pinterest LinkedIn Tumblr

ಕುಂದಾಪುರ: ಭಾರತೀಯ ಮಜ್ದೂರ್ ಸಂಘ ಕುಂದಾಪುರದ ನೇತೃತ್ವದಲ್ಲಿ ಬಿ.ಎಂ.ಎಸ್.ಕಾರ್ಯಾಲಯದಲ್ಲಿ ನಡೆದ ವಿಶ್ವಕರ್ಮ ದಿನಾಚರಣೆ ಹಾಗೂ ವಿಶ್ವ ಕಾರ್ಮಿಕ ದಿನಾಚರಣೆಯ ಕಾರ್ಯಕ್ರಮದಲ್ಲಿ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಅವರನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಆರ್.ಎಸ್.ಎಸ್ ಮಂಗಳೂರು ವಿಭಾಗ ಕಾರ್ಯವಾಹ ವಾದಿರಾಜ ಭಟ್ ಗೋಪಾಡಿ ಇವರು ಬೌಧಿಕ್ ಮಾಡಿದರು.

ಉಡುಪಿ ಜಿಲ್ಲಾ ಬಿ.ಎಮ್.ಎಸ್. ಕಟ್ಟಡ ಕಾರ್ಮಿಕರ ಗೌರವಾಧ್ಯಕ್ಷ ಸುಧೀರ್ ಕೆ.ಎಸ್, ಅಧ್ಯಕ್ಷ ಗಿರೀಶ್ ಕುಂದಾಪುರ, ಪ್ರಧಾನ ಕಾರ್ಯದರ್ಶಿ ರಾಜು ದೇವಾಡಿಗ ಆಟೋರಿಕ್ಷಾ ಮಜ್ದೂರ್ ಸಂಘದ ನಿಕಟಪೂರ್ವ ಅಧ್ಯಕ್ಷ ಸುರೇಶ್ ಪುತ್ರನ್, ಪ್ರಸ್ತುತ ಅಧ್ಯಕ್ಷ ಮಂಜುನಾಥ್ ಪ್ರಧಾನ ಕಾರ್ಯದರ್ಶಿ ರವಿ ಪುತ್ರನ್ ವೇದಿಕೆಯಲ್ಲಿದ್ದರು.

ಕಾರ್ಯಕ್ರಮದಲ್ಲಿ ಬಿಜೆಪಿ ಪಕ್ಷದ ಮುಖಂಡರು, ಆಟೋರಿಕ್ಷಾ ಸಂಘದ ಸದಸ್ಯರು, ಕಟ್ಟಡ ಕಾರ್ಮಿಕರ ಸಹಿತ ಹಲವರು ಉಪಸ್ಥಿತರಿದ್ದರು.

Comments are closed.