ಕರಾವಳಿ

ಬೆಂಗಳೂರು-ಮೈಸೂರು-ಮುರ್ಡೇಶ್ವರಕ್ಕೆ ನಿತ್ಯ ಸಂಚರಿಸುವ ರೈಲಿಗೆ ಕುಂದಾಪುರದಲ್ಲಿ ಅದ್ಧೂರಿ ಸ್ವಾಗತ

Pinterest LinkedIn Tumblr

ಕುಂದಾಪುರ: ಬೆಂಗಳೂರಿನಿಂದ ಮೈಸೂರು ಮೂಲಕ ಮಂಗಳೂರಿಗೆ ಸಂಚರಿಸುತ್ತಿದ್ದ ನಿತ್ಯದ ರೈಲು ಮುರ್ಡೇಶ್ವರದವರೆಗೆ ವಿಸ್ತರಣೆಗೊಂಡಿದ್ದು, ಭಾನುವಾರ ಬೆಳಗ್ಗೆ ಕುಂದಾಪುರಕ್ಕೆ ಪ್ರಥಮವಾಗಿ ಆಗಮಿಸಿದ ಈ ರೈಲಿಗೆ ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿಯ ವತಿಯಿಂದ ಅದ್ಧೂರಿ ಸ್ವಾಗತ ಕೋರಲಾಯಿತು.

ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮ ದಿನದಂದೇ ಈ ರೈಲು ಕುಂದಾಪುರದ ರೈಲು ನಿಲ್ದಾಣಕ್ಕೆ ಆಗಮಿಸಿದ್ದು ಕುಂದಾಪುರ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ, ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ ಸದಸ್ಯರು, ರೈಲು ಪ್ರಯಾಣಿಕರು, ಕೋಟೇಶ್ವರ ರೋಟರಿ ಕ್ಲಬ್ ಸದಸ್ಯರು, ರೈಲು ಪ್ರಯಾಣಿಕರು ಸಿಹಿ ಹಂಚಿ ಸಂಭ್ರಮಿಸಿದರು. ಚೆಂಡೆ ವಾದನದೊಂದಿಗೆ ರೈಲನ್ನು ಬರಮಾಡಿಕೊಳ್ಳಲಾಯಿತು. ರೈಲಿಗೆ ಹೂವಿನ ಮಾಲೆ ಹಾಕಿ, ಮೈಸೂರು ಸಂಸದ ಪ್ರತಾಪ್‌ಸಿಂಹ ಅವರಿಗೆ ಕೃತಜ್ಞತೆ ಸಲ್ಲಿಸುವ ಬ್ಯಾನರ್ ಅಳವಡಿಸಲಾಯಿತು.

ಕುಂದಾಪುರ ರೈಲು ಪ್ರಯಾಣಿಕರ ಸಮಿತಿ ಅಧ್ಯಕ್ಷ ಗಣೇಶ್ ಪುತ್ರನ್ ಮಾತನಾಡಿ, ಈ ರೈಲಿಗೆ ಒಂದು ವರ್ಷದಿಂದ ನಿರಂತರವಾಗಿ ಪ್ರಯತ್ನಿಸಿದ್ದು, ಮೈಸೂರು ಸಂಸದ ಪ್ರತಾಪ್‌ಸಿಂಹ ಅವರ ಪ್ರಯತ್ನ, ಮಂಗಳೂರು, ಉಡುಪಿ ಸಂಸದರು ಹಾಗೂ ಅನೇಕ ಮಂದಿ ಜನಪ್ರತಿನಿಧಿಗಳ ಸಹಕಾರವಿತ್ತು. ಪ್ರಧಾನಿ ಅವರ ಜನ್ಮ ದಿನದಂದೇ ಈ ರೈಲು ಕುಂದಾಪುರಕ್ಕೆ ಬಂದಿರುವುದು ಖುಷಿಯ ವಿಚಾರ ಎಂದರು.

ಸದಸ್ಯರಾದ ಗೌತಮ್ ಶೆಟ್ಟಿ, ವಿವೇಕ್ ನಾಯಕ್ ಮಾತನಾಡಿದರು. ಈ ಸಂದರ್ಭದಲ್ಲಿ ಕೋಟೇಶ್ವರ ರೋಟರಿ ಕ್ಲಬ್ ಅಧ್ಯಕ್ಷ ಜಗದೀಶ್ ಮೊಗವೀರ, ಸಹಾಯಕ ಗವರ್ನರ್ ಮೊಳಹಳ್ಳಿ ಗಣೇಶ್ ಶೆಟ್ಟಿ, ಶ್ರೀನಿವಾಸ ಶೆಟ್ಟಿ, ಸತೀಶ್ ನಾಯಕ, ವರದರಾಜ ಶೆಟ್ಟಿ, ಉದಯ್ ಕುಮಾರ್ ಶೆಟ್ಟಿ ಮಾರ್ಕೋಡು, ಗೋಪಾಡಿ ಗ್ರಾ.ಪಂ. ಅಧ್ಯಕ್ಷ ಸುರೇಶ್ ಶೆಟ್ಟಿ, ಗ್ರಾ.ಪಂ. ಸದಸ್ಯ ನಾಗರಾಜ ಆಚಾರ್ ಹಂಗಳೂರು, ಬಿಜೆಪಿ ಮಂಡಲದ ಅಧ್ಯಕ್ಷ ಶಂಕರ ಅಂಕದಕಟ್ಟೆ, ಕ್ಲೀನ್ ಕುಂದಾಪುರದ ಭರತ್ ಬಂಗೇರ, ಸಮಿತಿಯ ಸದಸ್ಯರಾದ ಕೆಂಚನೂರು ಸೋಮಶೇಖರ್ ಶೆಟ್ಟಿ, ರಾಘವೇಂದ್ರ ಶೇಟ್, ಉದಯ ಭಂಡಾರ್ಕರ್, ಅಭಿಜಿತ್ ಸಾರಂಗ, ಪೃಥ್ವಿ ಕುಂದರ್, ವಿಶಾಲ್ ಶೆನೋಯ್ ಪ್ರವೀಣ್, ಜೋಯ್ ಕರ್ವಾಲೊ, ಸುಧಾಕರ್ ಶೆಟ್ಟಿ, ವಿವೇಕ್ ನಾಯಕ್, ಯು.ಎಸ್. ಶೆಣೈ, ಶ್ರೀಧರ್ ಸುವರ್ಣ, ರಾಜೇಶ್, ಪದ್ಮನಾಭ್ ಶೆಣೈ, ರಾಜೇಶ್ ಕಾವೇರಿ, ಚಿಂದಂಬರ್ ಉಡುಪ ಮತ್ತಿತರರು ಉಪಸ್ಥಿತರಿದ್ದರು.

ಪ್ರಧಾನಿಯವರ ಹುಟ್ಟುಹಬ್ಬದಂದು ಈ ರೈಲು ಸಂಚಾರ ಆರಂಭವಾಗಿದ್ದು, ಇದು ಈ ಭಾಗದ ಎಲ್ಲ ಪ್ರಯಾಣಿಕರಿಗೆ ಅನುಕೂಲ. ಎಲ್ಲರೂ ಇದರ ಪ್ರಯೋಜನ ಪಡೆದುಕೊಳ್ಳಬೇಕಿದ್ದು ಇದರಿಂದ ಪಂಚಗಂಗಾ ರೈಲಿನ ಮೇಲಿನ ಒತ್ತಡ ಒಂದಷ್ಟು ಕಡಿಮೆ ಆಗಬಹುದು. ಇದಕ್ಕೆ ಪ್ರಯತ್ನಿಸಿದ ರೈಲು ಪ್ರಯಾಣಿಕರ ಸಮಿತಿ, ಇದಕ್ಕಾಗಿ ಪ್ರಯತ್ನಿಸಿದ ಎಲ್ಲ ಜನಪ್ರತಿನಿಧಿಗಳಿಗೂ ಕೃತಜ್ಞತೆಗಳು.
– ಎ. ಕಿರಣ್ ಕುಮಾರ್ ಕೊಡ್ಗಿ, ಕುಂದಾಪುರ ಶಾಸಕರು

Comments are closed.