ಪ್ರಮುಖ ವರದಿಗಳು

2 ವರ್ಷದ ತಮ್ಮನ ಶವವನ್ನು ತೊಡೆಯ ಮೇಲಿಟ್ಟುಕೊಂಡು ಕಾಯುತ್ತಾ ಕುಳಿತ 8 ವರ್ಷದ ಬಾಲಕ

Pinterest LinkedIn Tumblr

ಭೋಪಾಲ್‌: 8 ವರ್ಷದ ಬಾಲಕನೊಬ್ಬ ತನ್ನ 2 ವರ್ಷದ ತಮ್ಮನನ್ನು ತೊಡೆಯ ಮೇಲೆ ಮಲಗಿಸಿಕೊಂಡು ಕಾಯುತ್ತಾ ಕುಳಿತ ಹೃದಯವಿದ್ರಾವಕ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಪೂಜಾರಾಮ್‌ ಹೆಸರಿನ ವ್ಯಕ್ತಿಯ 2 ವರ್ಷದ ಮಗ ರಕ್ತಹೀನತೆಯಿಂದಾಗಿ ಇತ್ತೀಚೆಗೆ ಮೊರೆನಾ ಜಿಲ್ಲಾಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಆದರೆ, ಆಸ್ಪತ್ರೆಯಿಂದ 30ಕಿ.ಮೀ. ದೂರದಲ್ಲಿರುವ ಮನೆಗೆ ರಾಜಾನ ಶವ ತೆಗೆದುಕೊಂಡು ಹೋಗಲು ಪೂಜಾರಾಮ್‌ ಕಷ್ಟಪಟ್ಟಿದ್ದಾರೆ.

ಆಸ್ಪತ್ರೆಯಿಂದ ಆ್ಯಂಬುಲೆನ್ಸ್‌ ಕಳುಹಿಸಬೇಕೆಂದರೆ 1500 ರೂ. ಕೊಡಬೇಕೆಂದು ಚಾಲಕ ಹೇಳಿದ ಹಿನ್ನೆಲೆ ಅಲ್ಲೇ ಹತ್ತಿರವಿದ್ದ ಪಾರ್ಕ್‌ ಬಳಿ ತನ್ನ ಮೊದಲ ಮಗ ಗುಲ್ಶನ್‌ನನ್ನು ರಾಜಾನ ಶವ ಕಾಯಲು ಬಿಟ್ಟು ಬೇರೆ ಗಾಡಿ ವ್ಯವಸ್ಥೆ ಮಾಡಲು ತೆರಳಿದ್ದಾರೆ‌. ಈ ದೃಶ್ಯ ಕಂಡ ಸ್ಥಳೀಯರೊಬ್ಬರು ವರದಿ ಮಾಡಿದ್ದು, ವಿಚಾರ ಎಲ್ಲೆಡೆ ದೊಡ್ಡ ಸುದ್ದಿಯಾಗಿದೆ.

 

Comments are closed.