ಕರಾವಳಿ

ಭಟ್ಕಳ ಬಂದರಿನಲ್ಲಿ ತೇಲಿ ಬಂದ ಗೋವಿನ ರುಂಡಗಳು..!

Pinterest LinkedIn Tumblr

ಭಟ್ಕಳ: ಅತ್ಯಂತ ಸೂಕ್ಷ್ಮ ಪ್ರದೇಶ ಎಂದು ಹಣೆಪಟ್ಟಿ ಪಡೆದುಕೊಂಡಿದ್ದ ತಾಲೂಕಿನ ಬಂದರಿನ ಸಂಗಮ ಪ್ರದೇಶದಲ್ಲಿ ಗೋವಿನ ರುಂಡ ನೀರಿನಲ್ಲಿ ತೇಲಿ ಬಂದಿದ್ದ ಕೆಲ ಕಾಲ ಜನರಲ್ಲಿ ಆತಂಕ ಮೂಡಿಸಿತ್ತು.

ಸಂಜೆಯ ಸುಮಾರಿಗೆ ಬಂದರ ಪ್ರದೇಶದಲ್ಲಿ ಮೀನುಗಾರರು ಗೋವಿನ ರುಂಡಗಳು ನೀರಿನಲ್ಲಿ ತೇಲಿ ಬರುತ್ತಿರುವುದನ್ನು ಗಮನಿಸಿ ಆತಂಕಕ್ಕೊ ಒಳಗಾದರು. ನಂತರ ಅನೇಕ ಚೀಲಗಳಲ್ಲಿ ತೇಲಿ ಬರುತ್ತಿರುವುದನ್ನು ನೋಡಿದ್ದು ತಕ್ಷಣ ಕೆಲವರು ರುಂಡವನ್ನು ಹಗ್ಗದಿಂದ ಕಟ್ಟಿ ಹಾಕಿ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಗ್ರಾಮೀಣ ಠಾಣೆಯ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಗೋವಿನ ರುಂಡವನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಇನ್ನೂ ಕೆಲವು ತಲೆಭಾಗ ಸಮುದ್ರಕ್ಕೆ ಸೇರಿದ್ದು ಒಂದು ಮಾತ್ರ ದೊರೆತಿದೆ ಎನ್ನಲಾಗಿದೆ.

ರಾಜ್ಯದಲ್ಲಿ ಗೋಹತ್ಯೆ ನಿಷೇಧವಿದ್ದರೂ ಸಹ ಅಲ್ಲಲ್ಲಿ ಗೋವುಗಳನ್ನು ವಧೆ ಮಾಡಿರುವುದು ಸ್ಪಷ್ಟವಾಗಿದ್ದು ಬೆಳಿಗ್ಗೆ ಕಂಪೌಂಡ್ ಒಳಗಡೆ 20 ಕೆ.ಜಿ. ಮಾಂಸ ದೊರೆತರೆ, ಸಂಜೆ ನೀರಿನಲ್ಲಿ ತೇಲಿ ಬಂದ ಗೋವಿನ ರುಂಡಗಳು ಆತಂಕಕ್ಕೆ ಕಾರಣವಾಗಿದೆ.

ಕಾನೂನನ್ನು ಉಲ್ಲಂಘನೆ ಮಾಡಿದವರನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಜರುಗಿಸಬೇಕು ಎನ್ನುವ ಕೂಗು ಕೇಳಿ ಬಂದಿದೆ.

Comments are closed.