ಕರಾವಳಿ

ಕರ್ಟನ್‌ ಸರಿ ಮಾಡಲು ಹೋದ ಬಾಲಕಿ ಕಟ್ಟಡದ ಐದನೇ ಮಹಡಿಯಿಂದ ಬಿದ್ದು ಸಾವು

Pinterest LinkedIn Tumblr

ಮಂಗಳೂರು: ಮನೆಯ ಬಾಲ್ಕನಿಯ ಕರ್ಟನ್‌ ಸರಿಮಾಡಲು ಹೋಗಿದ್ದ ಬಾಲಕಿ ಆಯತಪ್ಪಿ ಕಟ್ಟಡದ ಐದನೇ ಮಹಡಿಯಿಂದ ಕೆಳಗೆ ಬಿದ್ದು ಮೃತಪಟ್ಟ ಘಟನೆ ಕಂಕನಾಡಿಯ ವಿಶ್ವಾಸ್‌ ಕ್ರೌನ್‌ ಅಪಾರ್ಟ್‌ ಮೆಂಟ್‌ ನಲ್ಲಿ ನಡೆದಿದೆ.

ಮೃತ ಬಾಲಕಿಯನ್ನು ಕಂಕನಾಡಿ ನಿವಾಸಿ ಮಹಮ್ಮದ್‌ ಇಂತಿಯಾಜ್‌ ಅವರ ಪುತ್ರಿ ಸೆಹರ್‌ ಇಂತಿಯಾಜ್‌ (15) ಎಂದು ಗುರುತಿಸಲಾಗಿದೆ.

ಮಹಮ್ಮದ್‌ ಇಂತಿಯಾಜ್‌ ಅವರು ತನ್ನ ಪತ್ನಿ ಮತ್ತು ಎರಡು ಮಕ್ಕಳೊಂದಿಗೆ ಕಂಕನಾಡಿಯ ವಿಶ್ವಾಸ್‌ ಕ್ರೌನ್‌ ಅಪಾರ್ಟ್‌ ಮೆಂಟ್‌ ನ ಫ್ಲ್ಯಾಟ್‌ ನಂಬರ್‌ 307 ರಲ್ಲಿ ವಾಸವಾಗಿದ್ದು ಬುಧವಾರ ಸಂಜೆ ಸುಮಾರು 4.30 ರ ಸುಮಾರಿಗೆ ಅವರ ಮಗಳು ಸೆಹರ್‌ ಮನೆಯ ಹಾಲ್‌ ಗೆ ತಾಗಿಕೊಂಡಿರುವ ಸೈಡ್‌ ಕರ್ಟನ್‌ ಗಳನ್ನು ಸರಿ ಮಾಡಲು ಕುರ್ಚಿಯ ಮೇಲೆ ಹತ್ತಿ ಸರಿ ಮಾಡುತ್ತಿದ್ದಾಗೆ ಆಕಸ್ಮಿಕವಾಗಿ ಆಯತಪ್ಪಿ ಕಟ್ಟಡದ 5 ನೇ ಮಹಡಿಯಿಂದ ಕೆಳಗೆ ಬಿದ್ದಿದ್ದು, ಕೂಡಲೇ ನಗರದ ಫಾದರ್‌ ಮುಲ್ಲರ್‌ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.

ಸೆಹರ್‌ ಇಂತಿಯಾಜ್‌ ಬಿಜೈ ಲೂರ್ಡ್ಸ್‌ ಸೆಂಟ್ರಲ್‌ ಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು.

ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Comments are closed.