ಕರಾವಳಿ

ರೌಡಿ ಶೀಟರ್‌ ರಾಜ ಯಾನೆ ರಾಘವೇಂದ್ರ ಕೊಲೆ ಪ್ರಕರಣದ ಪ್ರಮುಖ ಆರೋಪಿ ಅರೆಸ್ಟ್

Pinterest LinkedIn Tumblr

ಮಂಗಳೂರು: ರೌಡಿ ಶೀಟರ್‌ ರಾಜ ಯಾನೆ ರಾಘವೇಂದ್ರ ಕೊಲೆ ಪ್ರಕರಣದ ಪ್ರಮುಖ ಆರೋಪಿಯನ್ನು ಪಣಂಬೂರು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ರೌಡಿಶೀಟರ್‌ ನವೀನ್‌ ಅಲಿಯಾಸ್ ಮೈಕಲ್‌ ನವೀನ್‌ ಎಂದು ಗುರುತಿಸಲಾಗಿದೆ.

ಜೂನ್‌ 6ರಂದು ಬೈಕಂಪಾಡಿಯ ಮೀನಕಳಿಯಕ್ಕೆ ಹೋಗುವ ರಸ್ತೆಯ ಬದಿಯಲ್ಲಿ ರಾಜ ಯಾನೇ ರಾಘವೇಂದ್ರನ್ನು ಆರೋಪಿಗಳು ಸೇರಿ ಮಾರಕಾಯುಧಗಳಿಂದ ಗಂಭೀರವಾಗಿ ಹಲ್ಲೆ ಮಾಡಿ ಕೊಲೆ ಮಾಡಿದ್ದು ಈ ಪ್ರಕರಣದಲ್ಲಿ ಕೊಲೆಯ ಸಂಚು ರೂಪಿಸಿದ್ದ ನವೀನ್‌ ತಲೆ ಮರೆಸಿಕೊಂಡಿದ್ದು ಜೂ. 15ರಂದು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಆರೋಪಿ ನವೀನ್‌ ಮೇಲೆ ಮೂರು ಕೊಲೆ ಪ್ರಕರಣಗಳು ಸೇರಿದಂತೆ ಒಟ್ಟು 8 ಕ್ರಿಮಿನಲ್‌ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪವಿದೆ.

Comments are closed.