ಜಿಲ್ಲೆಗಳ ಪ್ರಗತಿಯಲ್ಲಿ ಜಾರ್ಜ್ ಫೆರ್ನಾಂಡೀಸರ ಕೊಡುಗೆ ಅಪಾರ – ಎಲ್.ವಿ ಅಮೀನ್
ಮುಂಬಯಿ: ಮಹಾನಗರದಲ್ಲಿನ ಅವಿಭಜಿತ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ವಿವಿಧ ಜಾತೀಯ ಸಂಘಟನೆಗಳ ಪ್ರಮುಖರು, ರಾಜಕಾರಣಿಗಳು, ಧಾರ್ಮಿಕ ನೇತಾರರು ಹಾಗೂ ವಿವಿಧ ಗಣ್ಯರ ಬೆಂಬಲದೊಂದಿಗೆ, ಕರಾವಳಿಯ ಜಿಲ್ಲೆಗಳ ಪ್ರಗತಿಗಾಗಿ ಹೋರಾಟ ನಡೆಸುತ್ತಾ ಬಂದಿರುವ, ಏಕೈಕ ಸರಕಾರೇತರ ಸಂಘಟನೆ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ. ಇದರ ಮಾರ್ಗದರ್ಶಕರಾಗಿದ್ದ, ಕೊಂಕಣ ರೈಲ್ವೆಯ ಶಿಲ್ಪಿ ಎಂದೇ ಕರೆಯಲ್ಪಡುವ , ಮಾಜಿ ಕೇಂದ್ರ ಸಚಿವ ದಿ. ಜಾರ್ಜ್ ಫೆರ್ನಾಂಡೀಸ್ ಅವರ 93ನೇ ಜನ್ಮ ದಿನದ ಸಂಸ್ಮರಣೆಯನ್ನು ಜೂ. 3ರಂದು ಬಿಲ್ಲವ ಭವನದ ಸಭಾಂಗಣದಲ್ಲಿ ಆಚರಿಸಲಾಯಿತು.
ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿ ಮುಂಡ್ಕೂರು ಸುರೇಂದ್ರ ಸಾಲ್ಯಾನ್ ಅವರು ಸರ್ವರನ್ನೂ ಸ್ವಾಗತಿಸಿ ಸಮಿತಿಯ ಮಾರ್ಗದರ್ಶಕರೂ ಆಗಿದ್ದ ದಿವಂಗತ ಜಾರ್ಜ್ ಫೆರ್ನಾಂಡಿಸ್ ಅವರ ಹುಟ್ಟುಹಬ್ಬದ ಸಾಂಕೇತಿಕ ಆಚರಣೆಯ ಬಗ್ಗೆ ತಿಳಿಸಿದರು. ಅಲ್ಲದೆ ಜಾರ್ಜ್ ಅವರು ಸಮಿತಿಯೊಂದಿಗೆ ಇದ್ದ ಒಡನಾಟವನ್ನು ಅವರು ನೀಡಿದ ಬೆಂಬಲದಿಂದ ಸಮಿತಿ ಮಾಡಿದ ಸಾಧನೆಗಳನ್ನು ತಿಳಿಸಿದರು.
ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿಯ ಅಧ್ಯಕ್ಷ ಎಲ್ ವಿ ಅಮೀನ್ ಅವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ಜಾರ್ಜ್ ಫೆರ್ನಾಂಡಿಸ್ ರಂತಹ ವ್ಯಕ್ತಿ ನಮ್ಮ ದೇಶಕ್ಕೆ ಸದ್ಯಕ್ಕೆ ಸಿಗಲು ಅಸಾಧ್ಯ. ಅವರು ನಮ್ಮ ಜಿಲ್ಲೆಯವರಾಗಿದ್ದು ಅವರ ನೆನಪು ನಮ್ಮ ಜಿಲ್ಲೆಯಲ್ಲಿ ಶಾಶ್ವತವಾಗಿ ಇರಬೇಕಾಗಿದೆ . ಜಿಲ್ಲೆಯ ಅಭಿವೃದ್ಧಿಯಲ್ಲಿ ಅವರ ಕೊಡುಗೆ ಅಪಾರ. ಮುಂದಿನ ವರ್ಷದಿಂದ ಸಾಧಕರನ್ನು ಗುರುತಿಸಿ ಅವರಿಗೆ ಜಾರ್ಜ್ ಅವರ ಹೆಸರಿನ ಪ್ರಶಸ್ತಿ ನೀಡಬೇಕಾಗಿದೆ. ಇಂದಿನ ಸಭೆಯಲ್ಲಿ ಮಾತನಾಡಿನ ಜಾತೀಯ ಸಂಘಟನೆಗಳ ಎಲ್ಲಾ ಗಣ್ಯರು ನಮ್ಮ ಸಮಿತಿಯ ಮುಂದಿನ ಯೋಜನೆಗೆ ಮಹತ್ವವಾದ ಸಲಹೆಗಳನ್ನು ನೀಡಿದ್ದು ನಿಮ್ಮೆಲ್ಲರ ಸಲಹೆ ಗಳಂತೆ ಮುಂದಿನ ದಿನಗಳಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಮಿತಿಯ ಚಟುವಟಿಕೆಗಳು ವಿಸ್ತಾರಗೊಳ್ಳಲಿದೆ ಮತ್ತು ಸರಕಾರ ರೂಪಿಸಿಕೊಂಡಿರುವ ಯೋಜನೆಗಳು ನಮ್ಮೂರಿನ ಜನರಿಗೆ ಫಲಪ್ರದ ಆಗುವಂತೆ ಮಾಡಲು ಬೃಹತ್ ಸಮಾವೇಶವನ್ನು ಸಿದ್ಧತೆ ಮಾಡುತ್ತೇವೆ ಎಂದರು.
ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿಯ ಉಪಾಧ್ಯಕ್ಷರುಗಳಾದ ಸಿ ಎ ಐ ಆರ್ ಶೆಟ್ಟಿ, ಪಿ .ಡಿ. ಶೆಟ್ಟಿ, ನಿತ್ಯಾನಂದ ಡಿ ಕೋಟ್ಯಾನ್. ಹಿರಿಯಡ್ಕ ಮೋಹನದಾಸ್, ಗಿರೀಶ್ ಬಿ ಸಾಲ್ಯಾನ್, ಗೌರವ ಕೋಶಾಧಿಕಾರಿ ತುಳಸಿದಾಸ್ ಅಮೀನ್, ಬಂಟ್ಸ್ ಸಂಘ ಮುಂಬಯಿಯ ಗೌರವ ಪ್ರಧಾನ ಕಾರ್ಯದರ್ಶಿ ಡಾ. ಆರ್. ಕೆ ಶೆಟ್ಟಿ, ಮೊಗವೀರ ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಷ ಕೆ ಎಲ್ ಬಂಗೇರ, ಭಂಡಾರಿ ಮಹಾ ಮಂಡಲದ ಕಡಂದಲೆ ಸುರೇಶ ಭಂಡಾರಿ, ಕುಲಾಲ ಸಂಘ ಮುಂಬಯಿಯ ಅಧ್ಯಕ್ಷರಾದ ದೇವದಾಸ್ ಕುಲಾಲ್, ಸಮಿತಿಯ ಹಿರಿಯ ಸದಸ್ಯರಾದ ಡಾಕ್ಟರ್ ಬೋಳ ಪ್ರಭಾಕರ್ ಶೆಟ್ಟಿ, ಭಂಡಾರಿ ಸೇವಾ ಸಂಘ ಮುಂಬಯಿಯ ಅಧ್ಯಕ್ಷರಾದ ಅಡ್ವೋಕೇಟ್ ಆರ್ ಎಮ್ ಭಂಡಾರಿ, ದೇವಾಡಿಗ ಸಂಘ ಮುಂಬಯಿಯ ಅಧ್ಯಕ್ಷರಾದ ರವಿ ಎಸ್ ದೇವಾಡಿಗ, ಸಾಫಲ್ಯ ಸೇವಾ ಸಂಘದ ಅಧ್ಯಕ್ಷ ಶ್ರೀನಿವಾಸ ಸಾಫಲ್ಯ, ಸಮಿತಿಯ ಕಾರ್ಯದರ್ಶಿ ಹ್ಯಾರಿ ಸಿಕ್ವೆರಾ , ಜೊತೆ ಕೋಶಾಧಿಕಾರಿ ಸಂಜೀವ ಪೂಜಾರಿ ತೋನ್ಸೆ, ಹೈಕೋರ್ಟ್ ನ ನ್ಯಾಯವಾದಿ ಶಶಿಧರ್ ಕಾಪು, ಗಣೇಶ್ ಶೆಟ್ಟಿ (ಸಿ ಎಸ್), ರಾಕೇಶ್ ಭಂಡಾರಿ ಸಭೆಯಲ್ಲಿ ಉಪಸ್ಥಿತರಿದ್ದು ಸಮಿತಿಯ ನಿರ್ಧಾರಕ್ಕೆ ಬೆಂಬಲ ವ್ಯಕ್ತ ಪಡಿಸಿದರು .
ಸಮಿತಿಯ ಉಪಾಧ್ಯಕ್ಷರಾದ ನಿತ್ಯಾನಂದ ಡಿ. ಕೋಟ್ಯಾನ್ ರವರು ಪ್ರಾರಂಭದಲ್ಲಿ ಮಾತನಾಡುತ್ತಾ ಸಮಿತಿಯ ಕಳೆದ ಎರಡು ದಶಕಗಳಿಗೂ ಅಧಿಕ ಕಾಲದ ಕಾರ್ಯ ಸಾಧನೆಗಳಲ್ಲಿ ಜಾರ್ಜ್ ಫೆರ್ನಾಂಡಿಸ್ ರ ಮಾರ್ಗದರ್ಶನ ಮತ್ತು ಬೆಂಬಲದ ಬಗ್ಗೆ ಸವಿಸ್ತಾರವಾಗಿ ಮಾತನಾಡುತ್ತಾ ನಮ್ಮ ಜಿಲ್ಲೆಯಲ್ಲಿ ಹುಟ್ಟಿ ದೇಶದ ಒಬ್ಬ ಬಲಿಷ್ಠ ರಾಜಕಾರಣಿಯಾಗಿ, ಆದರ್ಶ ರಾಜಕೀಯ ಜೀವನವನ್ನು ಮಾಡಿದವರು ಅವರ ಹೆಸರು ದೇಶದಲ್ಲಿ ಶಾಶ್ವತವಾಗಿ ಉಳಿಯಬೇಕಾಗಿದೆ ಎಂದು ಅವರಿಗೆ ಗೌರವಾರ್ಪಣೆಗೈದರು.
ಸಭೆಯಲ್ಲಿ ಉಪಸ್ಥಿತರಿದ್ದ ಎಲ್ಲಾ ಗಣ್ಯರು ಜಾರ್ಜ್ ಫೆರ್ನಾಂಡಿಸ್ ರ ಜೀವನ ಚರಿತ್ರೆ, ಕಾರ್ಯಸಾಧನೆ, ನಾಯಕತ್ವದ ಗುಣಗಳು, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹೆಮ್ಮೆಯ ಸುಪುತ್ರ, ದೇಶ ಕಂಡ ಮಹಾನ್ ರಾಜಕಾರಿಣಿ, ಹಾಗೂ ಮರೆಯಲಾಗದ ದಿವ್ಯ ಚೇತನದ ಬಗ್ಗೆ ಮಾತನಾಡಿ ಗೌರವ ಸಲ್ಲಿಸಿದರು. ಸಮಿತಿಯ ಜೊತೆ ಕಾರ್ಯದರ್ಶಿ ದೇವದಾಸ್ ಕುಲಾಲ್ ವಂದಿಸಿದರು.
ಜಾರ್ಜ್ ಫರ್ನಾಂಡೀಸ್ ರ ಮೂಲಕ ಜಯಶ್ರೀಕೃಷ್ಣ ಪರಿಸರಪ್ರೇಮಿ ಸಮಿತಿ ಹೋರಾಟದಯೋಜನೆ ಫಲ ಪ್ರಾಪ್ತಿಯಾಗಿದೆ: ತೋನ್ಸೆ ಜಯಕೃಷ್ಣ ಶೆಟ್ಟಿ
ಸಾಮಾನ್ಯ ಬದುಕು ನಡೆಸಿ ದೇಶ ಗುರುತಿಸುವ ರಾಜಕಾರಣಿಯಾಗಿ, ಸರ್ವೇ ಸಾಧಾರಣನಂತೆ ಬದುಕಿ, ಅಸಾಧಾರಣ ಧೈರ್ಯಶಾಲಿಯಾಗಿ ಸಾಹಸಮಯ ಬದುಕನ್ನು ನಡೆಸಿದವರು ಜಾರ್ಜ್ ಫೆರ್ನಾಂಡೀಸ್ ಅವರಂತ ಮಹಾನ್ ಚೇತನ ದ ಹೆಸರು ಹಸಿರಾಗಿ ಉಳಿಯಲಿ. ಇಂತಹ ಸ್ವಾರ್ಥ ರಹಿತ ಪುತ್ರನನ್ನು ಕೊಟ್ಟ ಭಾರತ ಮಾತೆ ನಿಜಕ್ಕೂ ಧನ್ಯೆ. ನಮ್ಮ ಕಾಲದಲ್ಲಿ ಇವರನ್ನು ಕಂಡ ನಾವು ಕೂಡಾ ಧನ್ಯ ರಾಗಿದ್ದೇವೆ. ನಮ್ಮ ಸಮಿತಿಯ ಯೋಜನೆಗಳು ಕೇಳಿಕೊಂಡಾಗ ಬಹಳ ಸಂತೋಷ ಕೊಳ್ಳುತ್ತಿದ್ದರು.ಅಲ್ಲದೆ ನಮ್ಮ ಯೋಜನೆಗಳಿಗೆ ಸರಕಾರಕ್ಕೆ ತಲುಪುವಲ್ಲಿ ಮಾರ್ಗದರ್ಶಕರಾಗಿದ್ದರು. ಮಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣ. ಕುದುರೆಮುಖ, ನಾಗಾರ್ಜುನ ವಿದ್ಯುತ್ ಯೋಜನೆಗಳಿಗೆ ಮಾರ್ಗದರ್ಶಕರಾಗಿದ್ದರು. ಅವರೊಂದಿಗಿದ್ದ ನನ್ನ ಒಡನಾಟಗಳು ನನ್ನ ಬದುಕಿನಲ್ಲಿ ಅವಿಸ್ಮರಣೀಯವಾಗಿ ಉಳಿಯುತ್ತದೆ. ದೇಶದ ಉನ್ನತ ಮಂತ್ರಿಸ್ಥಾನದಲ್ಲಿ ಇದ್ದರೂ ನಮ್ಮ ಜಿಲ್ಲೆಯ ಅಭಿವೃದ್ಧಿಯ ಕನಸು ಕಂಡವರು ಅವರು ಎಂದು ಜಯಶ್ರೀಕೃಷ್ಣ ಪರಿಸರಪ್ರೇಮಿ ಸಮಿತಿಯ ಸಂಸ್ಥಾಪಕ ತೋನ್ಸೆ ಜಯಕೃಷ್ಣ ಶೆಟ್ಟಿ ನುಡಿದರು.
ಹತ್ತು ಬಾಷೆಯನ್ನು ಅರಿತ ಜಾರ್ಜ್ ಫೆರ್ನಾಂಡಿಸ್ ರು ಒರ್ವ ನಿಪುಣ ರಾಜ ಕಾರಣಿ. ಅಸಾಧಾರಣ ವ್ಯಕ್ತಿತ್ವದ ಸಾಧಾರಣ ವ್ಯಕ್ತಿ ಜಾರ್ಜ್ ಫೆರ್ನಾಂಡಿಸ್ ಆಗಿದ್ದು ಅವರ ಹೆಸರನ್ನು ಶಾಶ್ವತವಾಗಿರಿಸುವಲ್ಲಿ ನಮ್ಮ ಸಮಿತಿಯು ಕ್ರೀಯಾಶೀಲವಾಗಿದೆ.
-ಸಿ ಎ ಐ ಆರ್ ಶೆಟ್ಟಿ, ಉಪಾಧ್ಯಕ್ಷರು – ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ
ಮಾನವನ ಹಕ್ಕಿಗಾಗಿ ಹೋರಾಟ ಮಾಡಿದ ಜಾರ್ಜ್ ಫೆರ್ನಾಂಡಿಸ್ ರು ಕೇವಲ ಒರ್ವ ವ್ಯಕ್ತಿಯಾಗಿರದೆ ಒಂದು ಸಂಸ್ಥೆಯಾಗಿದ್ದರು. ಅವರು. ಅವರು ಇಂದು ಜಿಲ್ಲೆಯಲ್ಲಿ ಉತ್ತಮ ಬದಲಾವಣೆ ಆಗುವಲ್ಲಿ ಸೇವೆ ಮಾಡಿದ್ದಾರೆ . ಸಮಿತಿಯ ಸೇವಾಕಾರ್ಯಗಳು ಜಿಲ್ಲೆಗಳಿಗೆ ತಲುಪುವಲ್ಲಿ ನಾವು ಕಾರ್ಯಪ್ರವೃತ್ತರಾಗಬೇಕು .
– ಡಾ. ಆರ್. ಕೆ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಬಂಟರ ಸಂಘ ಮುಂಬಯಿ
ಕಾರ್ಮಿಕ ನಾಯಕನಾಗಿ, ಕೇಂದ್ರ ಸಚಿವರಾಗಿ ಜನಸೇವೆಯನ್ನು ಮಾಡಿದ ಮಹಾನ್ ವ್ಯಕ್ತಿಯ ಹುಟ್ಟು ಹಬ್ಬದಂದು ನಮ್ಮ ಸಮಿತಿಯು ಉತ್ತಮವಾದ ನಿರ್ಣಯವನ್ನು ಕೈಗೊಳ್ಳುತ್ತಿರುವುದು ಅಭಿನಂದನೀಯ.
-ಶ್ರೀನಿವಾಸ್ ಸಾಫಲ್ಯ, ಅಧ್ಯಕ್ಷರು ಸಾಫಲ್ಯ ಸೇವಾ ಸಂಘ ಮುಂಬೈ
ಮಹಾನ್ ನಾಯಕ ಜಾರ್ಜ್ ಫೆರ್ನಾಂಡಿಸ್ ರ ಹೆಸರು ನಮ್ಮ ನಾಡಲ್ಲಿ ಶಾಶ್ವತ ವಾಗಿರಲಿ, . ಅವರ ಹೆಸರಿನಲ್ಲಿ ಕೊಡಮಾಡುವ ಪ್ರಶಸ್ತಿ ಪ್ರತಿವರ್ಷ ನಡೆಯಬೇಕು
-ಕೆ ಎಲ್ ಬಂಗೇರ, ಅಧ್ಯಕ್ಷರು ಮೊಗವೀರ ವ್ಯವಸ್ಥಾಪಕ ಮಂಡಳಿ
ಜಾರ್ಜ್ ಫೆರ್ನಾಂಡಿಸ್ ಅವರು ನನಗೆ ಮೊದಲೇ ಪರಿಚಿತರು. ಸೂರ್ಯ ಚಂದ್ರರಿರುವ ತನಕ ಅವರ ಹೆಸರು ನಮ್ಮ ಜಿಲ್ಲೆಯಲ್ಲಿ ಶಾಶ್ವತವಾಗಿರಲಿ.
-ಪಿ .ಧನಂಜಯ ಶೆಟ್ಟಿ, ಉಪಾಧ್ಯಕ್ಷರು – ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ
ನಮ್ಮ ಜಿಲ್ಲೆಯು ಬಹಳ ದೊಡ್ಡ ನಾಯಕನನ್ನು ಹೊಂದಿದ್ದಲ್ಲಿ ಅದು ಜಾರ್ಜ್ ಫೆರ್ನಾಂಡಿಸ್. ಅಂತವರು ನಮ್ಮ ಸಮಿತಿಗೆ ಜಯಕೃಷ್ಣ ಶೆಟ್ಟಿಯವರಿಗೆ ವರವಾಗಿ ಸಿಕ್ಕಿದ್ದರು. ಅವರ ನೆನಪು ಪ್ರತಿವರ್ಷ ನಡೆಯುವಂತಾಗಬೇಕು. ಪರಿಸರ ಪ್ರೇಮಿ ಸಮಿತಿಯ ಕೆಲಸ ಕಾರ್ಯಗಳು ಯುವಕರಿಗೆ ಅರಿವು ಮೂಡಿಸುವ ಕೆಲಸ ನಮ್ಮದಾಗ ಬೇಕಾಗಿದೆ ಅದಕ್ಕಾಗಿ ಜಿಲ್ಲೆಯಲ್ಲಿ ಕಾರ್ಯಕ್ರಮ ರೂಪುಗೊಳ್ಳಬೇಕು.
-ಕಡಂದಲೆ ಸುರೇಶ್ ಭಂಡಾರಿ, ಮಾಜಿ ಅಧ್ಯಕ್ಷರು ಭಂಡಾರಿ ಮಹಾಮಂಡಲ
ಜಾರ್ಜ್ ಫೆರ್ನಾಂಡಿಸ್ ಅವರಲ್ಲಿ ನಾನು ಒಮ್ಮೆ ತುಳು ಭಾಷೆಯಲ್ಲಿ ಮಾತನಾಡಿದ್ದಾಗ ಬಹಳ ಸಂತೋಷ ವ್ಯಕ್ತಪಡಿಸಿದ್ದರು. ನಿಷ್ಠಾವಂತ ರಾಜಕಾರಣಿಯಾಗಿ ಸಮಾಜ ಗುರುತಿಸಿ ಕೊಂಡವರು ಅವರು.
-ದೇವದಾಸ್ ಕುಲಾಲ್ ಅಧ್ಯಕ್ಷರು, ಕುಲಾಲ ಸಂಘ, ಮುಂಬಯಿ
ಜಾರ್ಜ್ ಫೆರ್ನಾಂಡಿಸ್ ರು ಎಲ್ಲಾ ಸಮುದಾಯಕ್ಕೆ ಬೇಕಾದ ವ್ಯಕ್ತಿಯಾಗಿದ್ದರು.. ಯವುದೇ ಉತ್ತಮ ಕೆಲಸಕ್ಕೆ ರಾಜಕೀಯದ ಆತಂಕವಿದೆ. ನಮ್ಮ ಸಮಿತಿಯ ಯೋಜನೆಗಳು-ಯೋಚನೆಗಳು ಸರಕಾರಕ್ಕೆ ತಲುಪುವಂಥ ಆಗುವ ಕಾರ್ಯಗಳು ನಾವು ರೂಪಿಸಿಕೊಳ್ಳಬೇಕಾಗಿದೆ.
– ಗಣೇಶ್ ಶೆಟ್ಟಿ
ಸಮಿತಿಯ ಎಲ್ಲಾ ಕೆಲಸಕ್ಕೆ ನಮ್ಮ ಸಹಕಾರ, ಸಹಭಾಗಿತ್ವ ಹಾಗೂ ಪ್ರೋತ್ಸಾಹವಿದೆ.
-ಅಡ್ವೋಕೇಟ್ ಆರ್ ಎಮ್ ಭಂಡಾರಿ, ಅಧ್ಯಕ್ಷರು, ಭಂಡಾರಿ ಸೇವಾ ಸಂಘ ಮುಂಬಯಿ
ಸಮಿತಿಯು ಜಿಲ್ಲೆಯಲ್ಲಿ ಸ್ಥಾಪನೆಗೊಳ್ಳಲಿರುವ ಕೈಗಾರಿಕೆ ಉದ್ಯಮಗಳು ನಮ್ಮ ಊರಿಗೆ ಮತ್ತು ಜನರಿಗೆ ಲಾಭದಾಯಕ ವಾಗುವ ನಾವು ಚಿಂತಿಸಬೇಕಾಗಿದೆ, ಸಮಿತಿಯು ಕೈಗೊಂಡ ನಿರ್ಧಾರಗಳಿಗೆ ನಮ್ಮ ಸೇವೆ ಹಾಗೂ ಬೆಂಬಲ ಸದಾ ಇದೆ.
– ರವಿ ಎಸ್. ದೇವಾಡಿಗ – ಅಧ್ಯಕ್ಷರು, ದೇವಾಡಿಗ ಸಂಘ ಮುಂಬಯಿ
ಇಂದು ಜಾರ್ಜ್ ಫೆರ್ನಾಂಡಿಸ್ ಹುಟ್ಟು ಹಬ್ಬವನ್ನು ಸಮಿತಿಯು ಅರ್ಥಪೂರ್ಣವಾಗಿ ಆಚರಿಸುತ್ತಿದೆ. ದೇಶ ಸೇವೆ ಮಾಡಲು ಅವರಿಂದ ಕಲಿಯಬೇಕು. ಜಾರ್ಜ್ ಫೆರ್ನಾಂಡಿಸ್ ಅವರ ಸಾಧನೆಯನ್ನು ಗೌರವಿಸುವಂತಾಗಬೇಕು. ಜಾರ್ಜ್ ಫೆರ್ನಾಂಡಿಸ್ ಅಂತರಾಷ್ಟ್ರೀಯ ವಿಮಾನ ನಿಲ್ಧಾಣ” ವಾಗಿ ಪುನರ್ ನಾಮಕರಣ ಗೊಳ್ಳುವು ದರೊಂದಿಗೆ ಅವರ ಹೆಸರು ಶಾಶ್ವತವಾಗಿ ಉಳಿಯಲಿ.
-ಹಿರಿಯಡ್ಕ ಮೋಹನದಾಸ್, ಮಾಜಿ ಅಧ್ಯಕ್ಷರು ದೇವಾಡಿಗ ಸಂಘ ಮುಂಬೈ
ಇಂದಿನ ವಿಷಯ ಬಹಳ ಮಹತ್ವಪೂರ್ಣವಾಗಿದ್ದು ನಮ್ಮ ಸಮಿತಿಯು ಅವರ ಮಾರ್ಗದರ್ಶನದಲ್ಲಿ ಮುಂದುವರಿದ ಕಾರಣ ಈ ತನಕ ಸಮಿತಿಯು ಕೈಗೊಂಡ ಯಾವುದೇ ಕೆಲಸದಲ್ಲಿ ವಿಫಲವಾಗಿಲ್ಲ. ಆದುದರಿಂದ ಸಮಿತಿಯ ಜಿಲ್ಲೆಯ ಅಭಿವೃದ್ಧಿಯ ಚಿಂತನ ಮಂಥನ ಕಾರ್ಯ ಊರಿನಲ್ಲಿ ನಡೆಯಬೇಕಾಗಿದೆ.
– ಶಶಿಧರ್ ಕಾಪು, ಹೈಕೋರ್ಟ್ ನ್ಯಾಯವಾದಿ
ಎಲ್ಲಾ ಸಂಘ ಸಂಸ್ಥೆಯ ಅಧ್ಯಕ್ಷರು ಪದಾಧಿಕಾರಿಗಳನ್ನು ಸಭೆ ಕರೆದು ಜಿಲ್ಲೆಯಲ್ಲಿ ನಮ್ಮ ಸಮಿತಿಯ ಮೂಲಕ ಯಶಸ್ವಿಗೊಂಡ ಯೋಜನೆಗಳನ್ನು ತಿಳಿಸಿ ಮುಂದೆ ಊರಿನಲ್ಲಿ ಕಾರ್ಯಕ್ರಮ ನಡೆಯಬೇಕು
ಗಿರೀಶ್ ಸಾಲ್ಯಾನ್, ಮಾಜಿ ಅಧ್ಯಕ್ಷರು ಕುಲಾಲ ಸಂಘ ಮುಂಬೈ
ವರದಿ : ಈಶ್ವರ ಎಂ. ಐಲ್, ಚಿತ್ರ : ದಿನೇಶ್ ಕುಲಾಲ್
Comments are closed.