ಕರಾವಳಿ

ತಲ್ಲೂರು ಹೆದ್ದಾರಿಯಲ್ಲಿ ಕೆಟ್ಟು ನಿಂತಿದ್ದ ಟಿಪ್ಪರ್’ಗೆ ಆಕ್ಟಿವ್ ಹೋಂಡಾ ಡಿಕ್ಕಿ: ಸವಾರ ಸಾವು, ಹಿಂಬದಿ ಸವಾರ ಗಂಭೀರ

Pinterest LinkedIn Tumblr

ಕುಂದಾಪುರ: ಹೆದ್ದಾರಿಯಲ್ಲಿ ಕೆಟ್ಟು ನಿಂತಿದ್ದ ಟಿಪ್ಪರ್ ವಾಹನಕ್ಕೆ ಆಕ್ಟಿವ್ ಹೊಂಡಾ ಡಿಕ್ಕಿಯಾದ ಪರಿಣಾಮ ದ್ವಿಚಕ್ರ ವಾಹನ ಸವಾರ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು ಹಿಂಬದಿ ಸವಾರ ಗಾಯಗೊಂಡ ಘಟನೆ ಕುಂದಾಪುರ ತಾಲೂಕಿನ ತಲ್ಲೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ತಡರಾತ್ರಿ ನಡೆದಿದೆ.

ಬೈಂದೂರು ತಾಲೂಕಿನ ಕಂಬದಕೋಣೆ ಹಳಗೇರಿ ತೆಂಕಬೆಟ್ಟಿನ ನಿವಾಸಿ ಸತೀಶ್ ಜೋಗಿ (42) ಮೃತ ದುರ್ದೈವಿ. ಆಕಾಶ್ ಜೋಗಿ (17) ಗಂಭೀರ ಗಾಯಗೊಂಡವರು.

ಘಟನೆ ವಿವರ:
ಸತೀಶ್ ಜೋಗಿಯವರು ಸಂಬಂಧಿ ಆಕಾಶ್ ಅವರನ್ನು ಆಕ್ಟಿವ್ ಹೊಂಡಾದಲ್ಲಿ ಕುಳ್ಳೀರಿಸಿಕೊಂಡು ಹೋಗುತ್ತಿದ್ದ ವೇಳೆ ಆರೋಪಿ ಟಿಪ್ಪರ್ ಚಾಲಕ ನಜ್ರುಲ್ ಬಷೀರ್ ಎಂಬಾತ ನಿರ್ಲಕ್ಷತನದಿಂದ ಯಾವುದೇ ಸಿಗ್ನಲ್, ಇಂಡಿಕೇಟರ್, ಸಹಿತ ಇತರೆ ಯಾವುದೇ ಮುನ್ನೆಚರಿಕೆ ಕ್ರಮ ವಹಿಸದೇ ನಿಲ್ಲಿಸಿಕೊಂಡಿದ್ದು ಟಿಪ್ಪರ್ ಲಾರಿಯ ಹಿಂಬಂದಿಗೆ ಆಕ್ಟಿವ್ ಹೊಂಡಾ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಆಕಾಶ ಜೋಗಿರವರ ಮುಖ, ತಲೆಗೆ ರಕ್ತಗಾಯ ಹಾಗೂ ಸತೀಶ ಜೋಗಿಯವರ ತಲೆಗೆ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ. ಆಕಾಶ ಜೋಗಿ ಅವರು ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದಾರೆ.

ಕುಂದಾಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Comments are closed.