ಕರಾವಳಿ

ಬೈಂದೂರು ವಲಯ ಅರಣ್ಯ ಕಛೇರಿಯಲ್ಲಿ ವಿಶ್ವ ಪರಿಸರ ದಿನಾಚರಣೆ: ಬೀಜ ಬಿತ್ತನೆ ಅಭಿಯಾನಕ್ಕೆ‌ ಚಾಲನೆ

Pinterest LinkedIn Tumblr

ಕುಂದಾಪುರ: ಕರ್ನಾಟಕ ಅರಣ್ಯ ಇಲಾಖೆ, ಕುಂದಾಪುರ ‌ವಿಭಾಗದ ಬೈಂದೂರು ವಲಯದ ವತಿಯಿಂದ ‘ಹಸಿರು ಕರ್ನಾಟಕ’ ಕಾರ್ಯಕ್ರಮದ ಭಾಗವಾಗಿ ವಾರಗಳ‌ ಕಾಲ ನಡೆಯುವ ಬೀಜ ಬಿತ್ತನೆ ಅಭಿಯಾನ 2022-23ಕ್ಕೆ ಚಾಲನೆ ನೀಡಲಾಯಿತು.

ಅಲ್ಲದೆ ಇದೇ ವೇಳೆ ಬೈಂದೂರು ವಲಯ ಅರಣ್ಯ ಕಛೇರಿ ಆವರಣದಲ್ಲಿ ಬೈಂದೂರು ವಲಯ ಅರಣ್ಯಧಿಕಾರಿ ಮತ್ತು ಸಿಬ್ಬಂದಿಗಳು ಸೇರಿ ಗಿಡ ನೆಟ್ಟು ವಿಶ್ವ ಪರಿಸರ ದಿನಾಚರಣೆಯ ಆಚರಣೆ ಮಾಡಿದರು.

ಬೈಂದೂರು ವಲಯ ಅರಣ್ಯಾಧಿಕಾರಿ ಸಿದ್ದೇಶ್ವರ ಕೆ., ಉಪ ವಲಯ ಅರಣ್ಯಧಿಕಾರಿಗಳಾದ ಬಂಗಾರಪ್ಪ, ರವಿರಾಜ್, ಸಚಿನ್, ಅರಣ್ಯ ರಕ್ಷಕರು, ಸಿಬ್ಬಂದಿಗಳು ಹಾಗೂ ಗ್ರಾಮಸ್ಥರಿದ್ದರು.

Comments are closed.