Mumbai

ತಥಾಸ್ತು ಮಿತ್ರ ಮಂಡಳಿ ಮಲಾಡ್ ವತಿಯಿಂದ ಭಕ್ತಿ ಸಂಭ್ರಮದೊಂದಿಗೆ ಮಹಾಯಜ್ನ, ಕೊರಗಜ್ಜನ ನೇಮೋತ್ಸವ

Pinterest LinkedIn Tumblr

ಮುಂಬಯಿ: ಮಲಾಡ್ ಪೂರ್ವ ದಪ್ತರಿ ರೋಡ್, ವಲ್ಲಭ ಯೋಗ ಕಟ್ಟಡದ ಹತ್ತಿರದ ತಥಾಸ್ತು ಮಿತ್ರ ಮಂಡಳಿ (ರಿ.) ಇದರ ವತಿಯಿಂದ ಶ್ರೀ ಲಕ್ಷ್ಮೀ – ವಿಷ್ಣು ಮಹಾಯಜ್ನ ಮತ್ತು ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವ ವು ಸಕಲ ಧಾರ್ಮಿಕ ಕಾರ್ಯಗಳೊಂದಿಗೆ ಶನಿವಾರ ಜೂನ್ 4 ರಂದು ವೇದಮೂರ್ತಿ ಸತೀಶ್ ಭಟ್, ಚಂದ್ರಶೇಖರ ಗುರೂಜಿ ಇವರ ಪೌರೋಹಿತ್ಯದಲ್ಲಿ ಮತ್ತು ನರೇಶ್ ಪೂಜಾರಿ ಇವರ ನೇತೃತ್ವದಲ್ಲಿ ನೆರವೇರಿತು.

ಧಾರ್ಮಿಕ ಮುಂದಾಳು, ಪುರೋಹಿತ ವೇದಮೂರ್ತಿ ಸತೀಶ್ ಭಟ್ ಅವರು ಸ್ಥಾಪಿಸಿರುವ ತಥಾಸ್ತು ಮಿತ್ರ ಮಂಡಳಿ ಮಲಾಡ್ ಕಳೆದ ಹಲವಾರು ವರ್ಷಗಳಿಂದ ಧಾರ್ಮಿಕ ಸಾಮಾಜಿಕ ಶೈಕ್ಷಣಿಕ ಕೆಲಸಗಳನ್ನು ಮಾಡುತ್ತಿದ್ದು, ಅಯ್ಯಪ್ಪನ ಮಹಾಪೂಜೆ ಪ್ರತಿವರ್ಷ ಸಂಭ್ರಮದಿಂದ ಮಾಡುತ್ತಿದ್ದು ಅದರೊಂದಿಗೆ ಅನ್ನಸಂತರ್ಪಣೆಯನ್ನು ನೆರವೇರಿಸಿಕೊಂಡು ಬರುತ್ತಿದ್ದಾರೆ. ಅಲ್ಲದೆ ಕಡುಬಡತನದ ಕುಟುಂಬಗಳಿಗೆ ಆರ್ಥಿಕ ನೆರವು, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುತ್ತಾ ಬಂದಿದ್ದಾರೆ.

ಧಾರ್ಮಿಕ ಕಾರ್ಯಕ್ರಮವು ಬೆಳಿಗ್ಗೆ ಮಲಾಡ್ ಪೂರ್ವದ ಗೋವಿಂದ್ ನಗರದಲ್ಲಿರುವ ಶ್ರೀ ರುದ್ರ ಭದ್ರಕಾಳಿ ದೇವಸ್ಥಾನದಿಂದ ಭವ್ಯ ಶೋಭಯಾತ್ರೆ ಮೂಲಕ ಮಲಾಡ್ ಪೂರ್ವದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಸಾಗಿ ಬಂದು ಉತ್ಕರ್ಷ ಶಾಲಾ ಮೈದಾನಕ್ಕೆ ಆಗಮಿಸಿತು.

ಮಲಾಡ್ ಪೂರ್ವದ ಕುರಾರ್ ವಿಲೇಜ್ ನಲ್ಲಿರುವ ಕೊರಗಜ್ಜ ಸಾನಿಧ್ಯ ದ ಪ್ರಧಾನ ಅರ್ಚಕರಾಗಿ ರುವ ನರೇಶ್ ಪೂಜಾರಿ ಇವರ ಕೊರಗಜ್ಜನ ನೇಮೋತ್ಸವಕ್ಕೆ ಸಕಲ ಸಿದ್ಧತೆಯೊಂದಿಗೆ ನೇಮಕ ಪೂರ್ವಭಾವಿ ಪನಿಯಾರ ಸೇವೆ, ಅಗೇಲ್ ಸೇವೆ, ಕಾರ್ಯಗಳು ನಡೆಸಿದರು.

ನಂತರ ಸತೀಶ್ ಭಟ್ ಮತ್ತು ವಿಪ್ರಾ ವೃಂದದವರಿಂದ ಶ್ರೀ ಲಕ್ಷ್ಮಿ ವಿಷ್ಣು ಮಹಾಯಜ್ಞ ನಡೆಯಿತು. ಶೋಭಯಾತ್ರೆ ಯಶಸ್ವಿಯಾಗಿ ಯಾಗಿ ನಡೆಯುವಲ್ಲಿ ತಥಾಸ್ತು ಫೌಂಡೇಶನ್ ನ ಪದಾಧಿಕಾರಿಗಳು ಧನರಾಜ್ ಶೆಟ್ಟಿ, ನವೀನ್ ಅಂಚನ್, ಜಗನ್ನಾಥ ಕೋಟ್ಯಾನ್, ಸೋನಮ್ ನಾಯರ್, ಶ್ರೀಮತಿ ವಿಜಯ ಶೆಟ್ಟಿ
ದಿನೇಶ್ ಅಮೀನ್. ದಿನೇಶ್ ಸಾಲಿಯಾನ್, ದಿನೇಶ್ ಪೂಜಾರಿ ಸಹಕರಿಸಿದರು. ಮಧ್ಯಾಹ್ನ ಹಾಗೂ ರಾತ್ರಿ ಅನ್ನ ಸಂತರ್ಪಣೆ ನಡೆಯಿತು.

ಸಂಜೆ ಕೊರಗಜ್ಜನ ನೇಮೋತ್ಸವ ನಡೆಯಿತು. ಈ ಎಲ್ಲಾ ಧಾರ್ಮಿಕ ಕಾರ್ಯಗಳಿಗೆ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರಸಾದ ಸ್ವೀಕರಿಸಿದರು.

ವರದಿ : ಈಶ್ವರ ಎಂ. ಐಲ್
ಚಿತ್ರ : ಚಿತ್ರ : ದಿನೇಶ್ ಕುಲಾಲ್

Comments are closed.