ಕರಾವಳಿ

ಬೆಂಗಳೂರಿನ ಯುವ ಜೊಡಿ ಉಡುಪಿಯಲ್ಲಿ ಕಾರಿನೊಳಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡ ಪ್ರಕರಣಕ್ಕೆ ಟ್ವಿಸ್ಟ್

Pinterest LinkedIn Tumblr

ಉಡುಪಿ: ಹೆಗ್ಗುಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊತ್ತೂರು ಎಂಬಲ್ಲಿ ಬೆಂಕಿ ಹೊತ್ತಿ ಉರಿದ ಸ್ಥಿತಿಯಲ್ಲಿ ಕಾರು ಪತ್ತೆಯಾಗಿದ್ದು ಮೃತರನ್ನು ಬೆಂಗಳೂರಿನ ಆರ್ ಟಿ ನಗರದ ನಿವಾಸಿಗಳಾದ ಯಶವಂತ್ ಮತ್ತು ಜ್ಯೋತಿ ಎಂದು ಗುರುತಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಮಂಗಳೂರಿನಲ್ಲಿ ಬಾಡಿಗೆ ಮನೆ ಪಡೆದಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಪ್ರಕರಣಕ್ಕೆ ಮತ್ತಷ್ಟು ಟ್ವಿಸ್ಟ್ ಕೂಡ‌ ಸಿಕ್ಕಿದೆ.

ಹೆಚ್ಚಿನ ವಿವರ:
ಯಶವಂತ್ ಜ್ಯೋತಿ ಆತ್ಮಹತ್ಯೆಗೂ ಮುನ್ನ ಟೂರ್ ಮಾಡಿದ್ದರು. ಸುಸೈಡ್ ಪಾಯಿಂಟ್ ಗಾಗಿ ಹುಡುಕಾಡಿದ್ದರು ಎನ್ನಲಾಗಿದೆ. ಸುತ್ತಾಡಲು ಮಂಗಳೂರಿನಲ್ಲಿ ಬಾಡಿಗೆ ಕಾರು ಪಡೆದಿದ್ದರು.ಮಂಗಳೂರಿನಿಂದ ಸೋಮೇಶ್ವರ ಬೀಚ್ ಗೆ ತೆರಳಿದ್ದರು. ಮತ್ತೆ ಉಡುಪಿ ಮಾರ್ಗವಾಗಿ ಮುರುಡೇಶ್ವರ ಬೀಚ್, ಭಟ್ಕಳಕ್ಕೂ ಹೋಗಿದ್ರು. ಶನಿವಾರ ತಡರಾತ್ರಿ ಮುರುಡೇಶ್ವರ ದಿಂದ ಕುಂದಾಪುರ ಮೂಲಕ ಮಂದಾರ್ತಿ ಗೆ ಬಂದ ಜೋಡಿ ಹೆಗ್ಗುಂಜೆಯ ನಿರ್ಜನ ರಸ್ತೆ ತೆರಳಿದ್ದು ಮುಂಜಾನೆ 3 ಗಂಟೆ ಸುಮಾರಿಗೆ ಕಾರಿನ ಹಿಂಬದಿ ಸೀಟ್ ನಲ್ಲಿ ಪೆಟ್ರೋಲ್ ಸುರಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕಳೆದ ಮೂರು ದಿನಗಳ ಹಿಂದೆ ಬೆಂಗಳೂರಿನಲ್ಲಿ ಇಬ್ಬರು ನಾಪತ್ತೆಯಾಗಿರುವ ಪ್ರಕರಣ ದಾಖಲಾಗಿತ್ತು. ಇಬ್ಬರು ಬೆಂಗಳೂರಿನಿಂದ ಬಂದು ಮಂಗಳೂರಿನಲ್ಲಿ ಹುಸೇನ್ ಎಂಬಾತನಿಂದ ಕಾರನ್ನು ಬಾಡಿಗೆಗೆ ಪಡೆದಿದ್ದರು ಎನ್ನಲಾಗಿದೆ.

ಭಾನುವಾರ ಬೆಳಗಿನ ಜಾವ 3 ಗಂಟೆ ಬಳಿಕ ರಸ್ತೆಯಲ್ಲಿ ಬೆಂಕಿ ಹೊತ್ತಿಕೊಂಡಿರುವುದನ್ನು ಸ್ಥಳೀಯರು ಕಂಡುಕೊಂಡು ವಿದ್ಯುತ್ ಅವಘಡ ಸಂಭವಿಸಿರಬಹುದು ಎಂದು ನೋಡಿದ್ದು ಬೆಂಕಿ ಹೊತ್ತಿಕೊಂಡ ಕಾರು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಬ್ರಹ್ಮಾವರ ಪೊಲೀಸರು ಕಾರಿನಲ್ಲಿ ಎರಡು ಸುಟ್ಟ ಮೃತದೇಹಗಳನ್ನು ಪತ್ತೆ ಹಚ್ಚಿದ್ದರು.

ಇನ್ನು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಯುವಕ ಸಂಬಂಧಿಕರಿಗೆ ಸಂದೇಶ ಕಳುಹಿಸಿದ್ದು, ಈ ಸಂದೇಶ ಬೆಳಗ್ಗೆ 3 ಗಂಟೆ 2 ನಿಮಿಷಕ್ಕೆ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಎಫ್‌ಎಸ್‌ಎಲ್‌ ತಂಡ ಸ್ಥಳ ಪರಿಶೀಲನೆ ನಡೆಸಿದ್ದು, ಮೃತರ ಕುಟುಂಬಸ್ಥರು ಆಗಮಿಸಿದ ಬಳಿಕ ಮೃತದೇಹಗಳನ್ನು ಮಣಿಪಾಲದ ಶವಾಗಾರಕ್ಕೆ ರವಾನಿಸಲಾಗಿದೆ.

ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಯಲಿದೆ.

Comments are closed.