ಕರ್ನಾಟಕ

ಬೆಂಗಳೂರು ಶಾಪಿಂಗ್ ಮಾಲ್‌ನಲ್ಲಿ ಆಯತಪ್ಪಿ ಬಿದ್ದ ಸ್ನೇಹಿತರು: ಯುವತಿ ಸಾವು, ಯುವಕ ಗಂಭೀರ

Pinterest LinkedIn Tumblr

ಬೆಂಗಳೂರು: ಬೆಂಗಳೂರಿನ ಬ್ರಿಗೇಡ್ ರಸ್ತೆಯ ‘5 ಅವೆನ್ಯೂ’ ಶಾಪಿಂಗ್ ಮಾಲ್‌ವೊಂದರ ಕಟ್ಟಡದಿಂದ ಯುವಕ-ಯುವತಿಯರಿಬ್ಬರು ಆಯತಪ್ಪಿ ಬಿದ್ದಿದ್ದರಿಂದ ಯುವತಿ ಸಾವನ್ನಪ್ಪಿದ್ದು ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ.

ಲಿಯಾ ಅವರು ಸ್ನೇಹಿತ ಕ್ರಿಸ್ ಪೀಟರ್ ಜೊತೆ ಶನಿವಾರ ಶಾಪಿಂಗ್‌ಗೆ ಬ್ರಿಗೇಡ್ ರಸ್ತೆಯ ‘5 ಅವೆನ್ಯೂ’ ಶಾಪಿಂಗ್ ಮಾಲ್‌ ಗೆ ಬಂದಿದ್ದರು. ಆ ವೇಳೆಯೇ ಇಬ್ಬರೂ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ಈ ಪೈಕಿ ಯುವತಿ ಲಿಯಾ ಸಾವನ್ನಪ್ಪಿದ್ದು, ಸ್ನೇಹಿತ ಕ್ರಿಸ್ ಪೀಟರ್ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಬೆಂಗಳೂರಿನಲ್ಲಿ ಶಾಂಪಿಗ್ ಗೆ ಬಂದಿದ್ದ ಯುವಕ ಯುವತಿ ಕಾಲು ಜಾರಿ ಬಿದ್ದ‌‌ ಪ್ರಕರಣದಲ್ಲಿ ನಿಮ್ಹಾನ್ಸ್‌ ನಲ್ಲಿ ಯುವತಿ ಲಿಯಾ (18) ಮೃತಪಟ್ಟಿದ್ದಾರೆ. ಯುವತಿ ಬೆಂಗಳೂರಿನ ಕಾಕ್ಸ್ ಟೌನ್ ನ ನಿವಾಸಿ. ಯುವಕ‌‌ ಕ್ರಿಸ್ ಪೀಟರ್ (18) ಎಚ್‌ಎಎಲ್ ನಿವಾಸಿ. ಶಾಪಿಂಗ್ ‌ಗೆ ವೇಳೆ ಕಾಲು ಜಾರಿ ಯುವತಿ ಮೊದಲು ಬಿದ್ದಿದ್ದಾಳೆ. ಯುವತಿಯನ್ನ ಹಿಡಿದುಕೊಳ್ಳಲು ಹೋಗಿ ಯುವಕ ಕೂಡ ಬಿದ್ದಿದ್ದಾನೆ. ಯುವತಿಯ ಮೇಲೆ ಯುವಕ ಬಿದ್ದಿದ್ದರಿಂದ ಬದುಕಿದ್ದಾನೆ. ಯುವಕನ ಕಾಲು ಮುರಿದಿದ್ದು ಚಿಕಿತ್ಸೆ ಕೊಡಿಸಲಾಗುತ್ತಿದೆ. ಇಬ್ಬರೂ ಸೆಂಟ್ ಜೋಸೆಫ್ ಕಾಲೇಜ್ ನಲ್ಲಿ ಇಬ್ಬರೂ ದ್ವಿತೀಯ ವರ್ಷದ ಕಾಮರ್ಸ್ ವಿಭಾಗದ ವಿದ್ಯಾರ್ಥಿಗಳು.

ಕಾಂಪ್ಲೆಕ್ಸ್‌ ಮೇಲಿಂದ ಯುವಕ-ಯುವತಿ ಕೆಳಗೆ ಬಿದ್ದಿದ್ದ ಪ್ರಕರಣದಲ್ಲಿ ಸ್ನೇಹಿತರ ಜೊತೆ ಶಾಪಿಂಗ್​ಗೆ ಬಂದಿದ್ದಾಗ ಅವಘಡ ಸಂಭವಿಸಿದೆ. ಪ್ರಾಥಮಿಕ ಮಾಹಿತಿಯಂತೆ ಸ್ಟೇರ್ ಕೇಸ್‌ನಿಂದ ಆಯತಪ್ಪಿ ಬಿದ್ದಿದ್ದಾರೆ. ಯುವಕ ಕ್ರಿಸ್ ಬೆಂಗಳೂರಿನವನಾಗಿದ್ದು ಯುವತಿ ಲೀಯಾ ಆಂಧ್ರದವಳು. ರಕ್ತಸ್ರಾವದಿಂದ ಚಿಕಿತ್ಸೆ ಫಲಿಸದೆ ಲೀಯಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು ಘಟನೆಗೆ ನಿಖರ ಕಾರಣ ಏನು ಎಂಬುದರ ಬಗ್ಗೆ ತನಿಖೆ ನಡೆಸ್ತಿದ್ದೇವೆ. ಯುವಕ ಕ್ರಿಸ್ ಅಪಾಯದಿಂದ ಪಾರಾಗಿದ್ದಾನೆ ಆದರೆ ಶಾಕ್​ನಲ್ಲಿದ್ದಾನೆ ಎಂದು ಕೇಂದ್ರ ವಿಭಾಗ ಪ್ರಭಾರ ಡಿಸಿಪಿ ಡಾ. ಎಸ್.ಡಿ. ಶರಣಪ್ಪ ಹೇಳಿದ್ದಾರೆ.

 

Comments are closed.