ಕರ್ನಾಟಕ

ರವಿ ಡಿ. ಚನ್ನಣ್ಣನವರ್ ಸಹಿತ 9 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಸರಕಾರದ ಆದೇಶ

Pinterest LinkedIn Tumblr

ಬೆಂಗಳೂರು: 2 ದಿನಗಳ ಹಿಂದಷ್ಟೇ 19 ಉನ್ನತ ಐಎಎಸ್​ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದ ಬಸವರಾಜ ಬೊಮ್ಮಾಯಿ ಸರ್ಕಾರ ಇದೀಗ 9 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ.

ರವಿ ಡಿ.ಚನ್ನಣ್ಣನವರ್ ಸೇರಿದಂತೆ 9 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಕರ್ನಾಟಕ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದ್ದು, ಸಿಐಡಿ ಎಸ್​ಪಿ ಆಗಿದ್ದ ರವಿ ಡಿ. ಚನ್ನಣ್ಣನವರ್ ಅವರನ್ನು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ವರ್ಗಾವಣೆ ಮಾಡಲಾಗಿದೆ.

ವರ್ಗಾವಣೆಗೊಂಡ ಐಪಿಎಸ್ ಅಧಿಕಾರಿಗಳು
* ಭೀಮಾಶಂಕರ ಗುಳೇದ್- ಡಿಸಿಪಿ, ಬೆಂಗಳೂರು ಪೂರ್ವ
* ಡಿ. ಕಿಶೋರ್ ಬಾಬು- ಬೀದರ್ ಪೊಲೀಸ್ ವರಿಷ್ಠಾಧಿಕಾರಿ(SP)
* ಅರುಣಾಂಗ್ಶು ಗಿರಿ- ಕೊಪ್ಪಳ ಪೊಲೀಸ್ ವರಿಷ್ಠಾಧಿಕಾರಿ
* ಡಿ.ಎಲ್. ನಾಗೇಶ್- ಸಿಐಡಿ ಎಸ್‌ಪಿ
* ಅಬ್ದುಲ್ ಅಹಾದ್- ಕೆಎಸ್‌ಆರ್‌ಟಿಸಿ ನಿರ್ದೇಶಕ
* ಟಿ. ಶ್ರೀಧರ್- ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಎಸ್​ಪಿ
*ಟಿ.ಪಿ. ಶಿವಕುಮಾರ್- ಚಾಮರಾಜನಗರ ಎಸ್‌ಪಿ
* ದಿವ್ಯಸಾರ ಥಾಮಸ್- ಪೊಲೀಸ್ ಅಕಾಡೆಮಿ ಉಪ ನಿರ್ದೇಶಕರಾಗಿ ವರ್ಗಾವಣೆಗೊಂಡಿದ್ದಾರೆ.

ಸಿಐಡಿ ಎಸ್​​ಪಿ ಹುದ್ದೆಯಿಂದ ಕರ್ನಾಟಕ ಮಹರ್ಷಿ ವಾಲ್ಮೀಕಿ ಶಡ್ಯೂಲ್ ಟ್ರೈಬ್ ಡೆವಲಪ್ಮೆಂಟ್ ಕಾರ್ಪೊರೇಷನ್ ಎಂಡಿ ಆಗಿ ರವಿ ಡಿ. ಚನ್ನಣ್ಣನವರ್ ಅವರನ್ನು ವರ್ಗಾವಣೆ ಮಾಡಲಾಗಿದೆ.

ಸಿಐಡಿ ಎಸ್​ಪಿಯಾಗಿದ್ದ ಐಪಿಎಸ್ ಅಧಿಕಾರಿ ಭೀಮಾಶಂಕರ ಗುಳೇದ್ ಅವರನ್ನು ಬೆಂಗಳೂರು ಪೂರ್ವ ವಿಭಾಗದ ಡಿಸಿಪಿ ಅಗಿ ವರ್ಗಾವಣೆ ಮಾಡಲಾಗಿದೆ. ಅಬ್ದುಲ್ ಅಹಾದ್ ಅವರನ್ನು ಎಸಿಬಿ ಎಸ್​ಪಿಯಿಂದ ಕೆಎಸ್​ಆರ್​​ಟಿಸಿ ನಿರ್ದೇಶಕರಾಗಿ ವರ್ಗಾಯಿಸಲಾಗಿದೆ. ಟಿ ಶ್ರೀಧರ್ ಅವರನ್ನು ಕೊಪ್ಪಳ ಎಸ್​ಪಿ ಹುದ್ದೆಯಿಂದ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಎಸ್​ಪಿಯಾಗಿ ವರ್ಗಾಯಿಸಲಾಗಿದೆ.

ಟಿ.ಪಿ ಶಿವಕುಮಾರ್ ಅವರನ್ನು ಬಂಧೀಖಾನೆ ಎಸ್​ಪಿಯಿಂದ ಚಾಮರಾಜನಗರ ಎಸ್​ಪಿಯಾಗಿ, ದಿವ್ಯಸಾರ ಥಾಮಸ್ ಅವರನ್ನು ಚಾಮರಾಜನಗರ ಎಸ್​ಪಿಯಿಂದ ಕರ್ನಾಟಕ ಪೊಲೀಸ್ ಅಕಾಡೆಮಿ ಉಪ ನಿರ್ದೇಶಕರಾಗಿ, ಡೆಕ್ಕಾ ಕಿಶೋರ್ ಬಾಬು ಅವರನ್ನು ಬೀದರ್ ಎಸ್​ಪಿ ಆಗಿ ವರ್ಗಾವಣೆ ಮಾಡಲಾಗಿದೆ.

ಅರುಣಾಂಗ್ಶು ಗಿರಿ ಅವರನ್ನು ಎಸಿಬಿ ಎಸ್ ಪಿಯಿಂದ ಕೊಪ್ಪಳ ಎಸ್ ಪಿ ಆಗಿ ವರ್ಗಾವಣೆ ಮಾಡಲಾಗಿದೆ. ಡಿ.ಎಲ್. ನಾಗೇಶ್ ಅವರನ್ನು ಬೀದರ್ ಎಸ್​ಪಿಯಿಂದ ಸಿಐಡಿ ಎಸ್​ಪಿ ಆಗಿ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.

ಕೆಲವು ದಿನಗಳಿಂದ ರವಿ ಡಿ ಚೆನ್ನಣ್ಣವರ ವಿರುದ್ಧ ಭ್ರಷ್ಟಾಚಾರದ ಗಂಭೀರ ಆರೋಪಗಳು ಕೇಳಿಬರುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ಇವರ ವಿರುದ್ಧ ಪರ ವಿರೋಧ ಚರ್ಚೆಗಳು ನಡೆಯುತ್ತಿದ್ದು, ತಮ್ಮ ವಿರುದ್ಧ ಭ್ರಷ್ಟಾಚಾರದ ಸುದ್ದಿ ಪ್ರಕಟಿಸದಂತೆ ಕೋರ್ಟ್ ನಿಂದ ಇತ್ತೀಚೆಗೆ ತಡೆಯಾಜ್ಞೆ ತಂದಿದ್ದರು. ಈ ಮಧ್ಯೆಯೇ ಇವರ ವರ್ಗಾವಣೆ ವಿಷಯ ಚರ್ಚೆಗೆ ಗ್ರಾಸವಾಗಿದೆ.

Comments are closed.