ಬೆಂಗಳೂರು: ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅಗಲಿ ಮೂರು ತಿಂಗಳು ಕಳೆದಿವೆ. ಅಪ್ಪು ನಟನೆಯ ಕೊನೆಯ ಚಿತ್ರವಾದ ‘ಜೇಮ್ಸ್’ ಸಿನಿಮಾದ ಪೋಸ್ಟರ್ ಇಂದು (ಜ.26 ಬುಧವಾರ) ಬಿಡುಗಡೆ ಮಾಡಲಾಗಿದೆ.
ಪುನೀತ್ ರಾಜ್ ಕುಮಾರ್ ಅವರ ಜೇಮ್ಸ್ ಸಿನಿಮಾದ ಪೋಸ್ಟರ್ ರಿಲೀಸ್ ಆಗಿದ್ದು , ಅಪ್ಪು ದೇಶಕಾಯುವ ಸೈನಿಕನ ಅವತಾರದಲ್ಲಿ ಕಮಾಲ್ ಮಾಡಿದ್ದಾರೆ. ಜೇಮ್ಸ್ ಸಿನಿಮಾವನ್ನು ಚೇತನ್ ನಿರ್ದೇಶನ ಮಾಡುತ್ತಿದ್ದು , ಅಶ್ವಿನಿ ಪುನೀತ್ ರಾಜ್ ಕುಮಾರ್ ಜೇಮ್ಸ್ ಪೋಸ್ಟರ್ ಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಪುನೀತ್ ನಿಧನದ ಬಳಿಕ ಇನ್ನುಳಿದ ದೃಶ್ಯಗಳ ಶೂಟಿಂಗ್ ಅನ್ನು ಪೂರ್ಣಗೊಳಿಸಲಾಯಿತು. ಈ ಸಿನಿಮಾದಲ್ಲಿ ಶಿವರಾಜ್ಕುಮಾರ್ ಮತ್ತು ರಾಘವೇಂದ್ರ ರಾಜ್ಕುಮಾರ್ ಕೂಡ ಬಣ್ಣ ಹಚ್ಚಿರುವುದು ವಿಶೇಷ. ‘ಜೇಮ್ಸ್’ನಲ್ಲಿ ಪುನೀತ್ ರಾಜ್ಕುಮಾರ್ ಅವರಿಗೆ ಜೋಡಿಯಾಗಿ ಪ್ರಿಯಾ ಆನಂದ್ ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ಚರಣ್ ರಾಜ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.
ಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯಗಳು.
Wish you all a "Happy Republic Day". @PRKAudio @PriyaAnand #KishorePathikonda @BahaddurChethan @actorsrikanth @realsarathkumar @charanrajmr2701 #BoloBoloJames pic.twitter.com/oFW615ISJD— Ashwini Puneeth Rajkumar (@ashwinipuneet) January 26, 2022
ಗಣರಾಜ್ಯೋತ್ಸವದ ಪ್ರಯುಕ್ತ ಬಿಡುಗಡೆ ಆಗಿರುವ ಹೊಸ ಪೋಸ್ಟರ್ನಲ್ಲಿ ಪುನೀತ್ ರಾಜ್ಕುಮಾರ್ ಅವರು ಸೈನಿಕನ ಗೆಟಪ್ ಧರಿಸಿದ್ದಾರೆ. ಗನ್ ಹಿಡಿದು ಯುದ್ಧಕ್ಕೆ ಸಜ್ಜಾದ ಯೋಧನಾಗಿ ಅವರು ಕಾಣಿಸಿಕೊಂಡಿದ್ದಾರೆ. ‘ಸಲಾಂ ಸೋಲ್ಜರ್, ದೇಶಕ್ಕೆ ನೀನೇ ಪವರ್’ ಎಂಬ ಸ್ಲೋಗನ್ ಈ ಪೋಸ್ಟರ್ನಲ್ಲಿ ಗಮನ ಸೆಳೆಯುತ್ತಿದೆ.
ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಈ ಪೋಸ್ಟರ್ ಶೇರ್ ಮಾಡಿಕೊಂಡಿದ್ದಾರೆ. ಆ ಮೂಲಕ ಅವರು ಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯ ಕೋರಿದ್ದಾರೆ.
Comments are closed.