ಕರ್ನಾಟಕ

ಬೆಂಗಳೂರಿನಲ್ಲಿ ರಸ್ತೆ ಅಪಘಾತ; ಹಿರಿಯ ಪತ್ರಕರ್ತ ಗಂಗಾಧರ ಮೂರ್ತಿ ವಿಧಿವಶ

Pinterest LinkedIn Tumblr

ಬೆಂಗಳೂರು: ನಗರದ ಟೌನ್ ಹಾಲ್ ಮುಂಭಾಗ ಲಾರಿ ಬೈಕ್​​ಗೆ​​ ಡಿಕ್ಕಿ ಹೊಡೆದ ಪರಿಣಾಮ ಬೈಕ್​​ನಲ್ಲಿದ್ದ ಹಿರಿಯ ಪತ್ರಕರ್ತ ಗಂಗಾಧರ ಮೂರ್ತಿ (49) ಮೃತಪಟ್ಟಿದ್ದಾರೆ.

ಬೈಕ್​​ನಲ್ಲಿ ಚಾಮರಾಜಪೇಟೆಯಲ್ಲಿರುವ ಪತ್ರಿಕೆಯ ಕಚೇರಿಗೆ ಬರುತ್ತಿದ್ದಾಗ ಟೌನ್ ಹಾಲ್ ಬಳಿ ನಿಯಂತ್ರಣ ತಪ್ಪಿದ ಲಾರಿ ಡಿವೈಡರ್​ಗೆ ಡಿಕ್ಕಿ ಹೊಡೆದು ಬಿದ್ದಿದ್ದು, ಲಾರಿ ಅಡಿಯಲ್ಲಿ ಸಿಲುಕಿದ ಗಂಗಾಧರ ಮೂರ್ತಿ ತೀವ್ರವಾಗಿ ಗಾಯಗೊಂಡಿದ್ದರು. ತಕ್ಷಣವೇ ಅವರನ್ನ ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗಿದ್ದು, ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಮೃತರಿಗೆ ಪತ್ನಿ, ಇಬ್ಬರು ಮಕ್ಕಳಿದ್ದಾರೆ.

ಗಂಗಾಧರ ಮೂರ್ತಿ ಪತ್ರಕರ್ತ ವೃತ್ತಿ ಸೇವೆ ಗುರುತಿಸಿ ಕಳೆದ ವರ್ಷ ಕೆಯುಡಬ್ಲ್ಯೂಜೆ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಂಗಳೂರು ಕಾರ್ಯನಿರತ ಪತ್ರಕರ್ತರ ಸಂಘ ಸನ್ಮಾನಿಸಿತ್ತು.

Comments are closed.