ಕರ್ನಾಟಕ

ಪಕ್ಕಾ ‘ದಿಗ್ಗಜರು’ ಫಿಲ್ಮ್ ಸ್ಟೈಲ್; ಕಾರು ಖರೀದಿಗೆ ಬಂದ ಯುವಕನಿಗೆ ಶೋರೂಂ ಸಿಬ್ಬಂದಿಯಿಂದ ಅವಮಾನ; ಮುಂದೇನಾಯ್ತು…?

Pinterest LinkedIn Tumblr

ತುಮಕೂರು: ಕಾರು ಖರೀದಿ ಮಾಡಲೆಂದು ಬಂದ ಗ್ರಾಹಕನಿಗೆ ಕಾರು ಶೋ ರೂಮ್‌ ಸಿಬ್ಬಂದಿ ನಿನ್ನ ಕೈಯಲ್ಲಿ ಹತ್ತು ಲಕ್ಷ ಕೊಟ್ಟು ಕಾರು ಖರೀದಿ ಮಾಡಲು ಸಾಧ್ಯವಿದೆಯಾ ಎಂದು ಅವಮಾನಿಸಿದ್ದು, ಇದರಿಂದ ಬೇಸತ್ತ ಗ್ರಾಹಕ ಹಣ ತಂದು ಕಾರು ನೀಡುವಂತೆ ಪಟ್ಟು ಹಿಡಿದಿದ್ದ ಘಟನೆ ಕುರಿತಾದ ವಿಡಿಯೋ ಶನಿವಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು.

ತಾಲೂಕಿನ ಹೆಬ್ಬೂರು ಹೋಬಳಿಯ ರಾಮನ ಪಾಳ್ಯದ ಕೆಂಪೇಗೌಡ ಎನ್ನುವ ಯುವಕನೊಬ್ಬ ನಗರದ ಕಾರ್‌ ಶೋರೂಮ್‌ಗೆ ಕಾರು ತೆಗೆದುಕೊಳ್ಳಲು ಬಂದಿದ್ದು, ಯುವಕನ ಬಟ್ಟೆ ನೋಡಿ ಶೋರೂಂನಲ್ಲಿ ಕೆಲಸ ಮಾಡುವ ಸೇಲ್ಸ್ ಏಜೆಂಟ್‌ ಕೆಂಪೇಗೌಡನಿಗೆ ಹತ್ತು ರೂಪಾಯಿ ದುಡ್ಡು ಕೊಡುವ ಯೋಗ್ಯತೆ ಇಲ್ಲ ಕಾರು ತೆಗೆದುಕೊಳ್ಳಲು ಬಂದಿರುವೆಯಾ ಎಂದು ಅವಮಾನಿದ್ದಾನೆ ಎನ್ನಲಾಗಿದೆ.

ಕೆಂಪೇಗೌಡ ಹಾಗೂ ಆತನ ಸ್ನೇಹಿತರು ಒಂದು ಗಂಟೆಯಲ್ಲಿ ದುಡ್ಡು ತರುವೆ ಕಾರನ್ನು ನೀಡುವಿರಾ ಎಂದು ಸವಾಲು ಹಾಕಿದ್ದಾರೆ. ಇದಕ್ಕೆ ಒಪ್ಪಿದ ಶೋರೂಮ್‌ ಕೆಲಸಗಾರ ಮೊದಲು ದುಡ್ಡು ತಂದರೆ ಕಾರು ಕೊಡುವುದಾಗಿ ತಿಳಿಸಿದ್ದಾರೆ.

ಕೆಂಪೇಗೌಡ ಒಂದು ಗಂಟೆಯಲ್ಲಿ ಹತ್ತು ಲಕ್ಷ ರೂಪಾಯಿ ತಂದು ಕಾರು ನೀಡುವಂತೆ ಪಟ್ಟು ಹಿಡಿದಿದ್ದು, ಶೋ ರೂಮ್‌ ಕೆಲಸಗಾರರು ಇಲ್ಲಸಲ್ಲದ ಸಬೂಬು ಹೇಳಿ ಮುಂದಿನ ಎರಡು ದಿನದಲ್ಲಿ ಕಾರು ನೀಡುತ್ತೇವೆ ಎಂದಿದ್ದಾರೆ. ನಮ್ಮನ್ನು ಅವಮಾನಿಸುವ ಮುಂಚೆ ಇದರ ಅರಿವು ತಮಗೆ ಇರಬೇಕಾಗಿತ್ತು. ನಾನು ಒಂದು ಗಂಟೆಯಲ್ಲಿ 10 ಲಕ್ಷ ರೂ. ತಂದಿದ್ದೇನೆ. ನನಗೆ ಈಗ ಕಾರು ಕೊಡಿ ಎಂದು ಗ್ರಾಹಕ ಕೆಂಪೇಗೌಡ ಹಾಗೂ ಸ್ನೇಹಿತರು ಶೋರೂಮ್‌ನಲ್ಲಿ ವಾಗ್ವಾದ ನಡೆಸಿದ್ದಾರೆ.ಬಳಿಕ ಗ್ರಾಹಕ ಹಾಗೂ ಶೋರೂಮ್‌ನವರು ತುಮಕೂರಿನ ತಿಲಕ್‌ ಪಾರ್ಕ್‌ ಪೊಲೀಸ್‌ ಠಾಣೆ ಮೆಟ್ಟಿಲು ಏರಿದ್ದು ಹೈಡ್ರಾಮಾ ನಡೆಯಿತು.

ಕೊನೆಗೆ ಸಿಬ್ಬಂದಿಯಿಂದ ಗ್ರಾಹಕನಿಗೆ ತಪ್ಪಾಯಿತು ಎಂದು ಮುಚ್ಚಳಿಕೆ ಬರೆಸುವ ಮೂಲಕ ಪ್ರಕರಣ ಸುಖಾಂತ್ಯ ಕಂಡಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

 

Comments are closed.