ಪ್ರಮುಖ ವರದಿಗಳು

ಮುಂಬೈನಲ್ಲಿ ಕೊರೋನಾ ಸ್ಫೋಟ; ಒಂದೇ ದಿನ 20 ಸಾವಿರ ಸೋಂಕು ಪತ್ತೆ; ಲಾಕ್ ಡೌನ್ ಖಚಿತ..?

Pinterest LinkedIn Tumblr

ಮುಂಬೈ: ಮುಂಬೈ ನಗರದಲ್ಲಿ ಕೋವಿಡ್ 19 ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದೆ. ಒಂದೇ ದಿನ 20 ಸಾವಿರಕ್ಕೂ ಹೆಚ್ಚಿನ ಪ್ರಕರಣಗಳು ವರದಿಯಾಗಿದ್ದು, ಲಾಕ್ ಡೌನ್ ಬಹುತೇಕ ಖಚಿತ ಎನ್ನಲಾಗುತ್ತಿದೆ.

ಮುಂಬೈನಲ್ಲಿ 20,181 ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು ಒಂದೇ ದಿನದಲ್ಲಿ ಶೇಕಡಾ 33ರಷ್ಟು ಸೋಂಕು ಪ್ರಕರಣಗಳು ಹೆಚ್ಚಾಗಿದೆ. ನಾಲ್ಕು ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ.

ಕಳೆದ 24 ಗಂಟೆಗಳಲ್ಲಿ ಪತ್ತೆಯಾದ ಹೊಸ ಪ್ರಕರಣಗಳಲ್ಲಿ, 85 ಪ್ರತಿಶತವು ಯಾವುದೇ ರೋಗಲಕ್ಷಣಗಳನ್ನು ಹೊಂದಿಲ್ಲ. ಆದರೆ 1,170 ಕೋವಿಡ್ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 106 ಜನರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Comments are closed.