ಕರಾವಳಿ

ರಿಸೆಪ್ಷನ್’ನಲ್ಲಿ ತಡರಾತ್ರಿಯವರೆಗೆ ಡಿಜೆ ನೃತ್ಯ: ಡಿಜೆ ಸೌಂಡ್ ಬಾಕ್ಸ್ ವಶಪಡಿಸಿಕೊಂಡ ಉಡುಪಿ‌ ನಗರ ಠಾಣೆ ಪೊಲೀಸರು

Pinterest LinkedIn Tumblr

ಉಡುಪಿ: ನಗರದಲ್ಲಿ ತಡರಾತ್ರಿವರೆಗೆ ಅತಿ ಕರ್ಕಶವಾಗಿ ಡಿಜೆ ಸೌಂಡ್‌‌‌‌ ಹಾಕಿಕೊಂಡು ರಿಸೆಪ್ಷನ್ ನಡೆಸುತ್ತಿದ್ದವರ ವಿರುದ್ದ ಪ್ರಕರಣ ದಾಖಲು ಮಾಡಿದ್ದು ಡಿಜೆ ಸೌಂಡ್ ಬಾಕ್ಸ್‌ ಗಳನ್ನು ವಶಕ್ಕೆ ಪಡೆಯಲಾಗಿದೆ.

ಉಡುಪಿ ತಾಲೂಕು ಬಡಗುಬೆಟ್ಟು ಗ್ರಾಮದ ಪಣಿಯಾಡಿಯಲ್ಲಿ ಶಿವರಾಮ್‌ ಎಂಬವರ ಮನೆಯಲ್ಲಿ ಈ ಅರತಕ್ಷತೆ ಕಾರ್ಯಕ್ರಮ ನಡೆಯುತ್ತಿತ್ತು. ಈ ಕುರಿತು ನಗರ ಠಾಣೆಯ ಪೊಲೀಸ್‌‌ ಇನ್ಸ್‌‌ಪೆಕ್ಟರ್‌‌‌‌‌ಗೆ ಬಂದ ಮಾಹಿತಿಯ ಮೇರೆಗೆ ಎಸ್‌ಐ ವಾಸಪ್ಪ ನಾಯ್ಕ ಅವರು ಪ್ರೊಬೆಷನರಿ ಪಿಎಸ್‌ಐ, ಗಸ್ತು ಸಿಬ್ಬಂದಿ ಹಾಗೂ ಠಾಣಾ ಪ್ರಭಾರ ಅಧಿಕಾರಿಗಳೊಂದಿಗೆ ಹೋಗಿ ಪರಿಶೀಲಿಸಿದಾಗ ಶಿವರಾಮ್‌ ಅವರ ಮನೆಯಲ್ಲಿ ಅವರ ಪುತ್ರನ ವಿವಾಹ ರಿಸೆಪ್ಷನ್‌‌‌‌‌ ಕಾರ್ಯಕ್ರಮ ನಡೆಯುತ್ತಿತ್ತು. ಯಾವುದೇ ಪೂರ್ವಾನುಮತಿ ಇಲ್ಲದೇ, ಸರ್ಕಾರದ ರಾತ್ರಿ ಕರ್ಫ್ಯೂ ಆದೇಶ ಹಾಗೂ ಕೊರೊನಾ ತಡೆ ಮುಂಜಾಗ್ರತಾ ಕ್ರಮಗಳನ್ನು ಉಲ್ಲಂಘಿಸಿ ಡಿಜೆ ಸೌಂಡ್ ಹಾಕಿ ನೃತ್ಯ ಮಾಡಲಾಗುತ್ತಿತ್ತು.

ಸ್ಥಳದಿಂದ ಪೊಲೀಸರು ಎರಡು ಡಿಜೆ ಸೌಂಡ್‌ ಬಾಕ್ಸ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಈ ಬಗ್ಗೆ ಉಡುಪಿ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Comments are closed.