ಪ್ರಮುಖ ವರದಿಗಳು

ಮಹಾತ್ಮ ಗಾಂಧೀಜಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಕಾಳಿಚರಣ್ ಮಹಾರಾಜ್ ಬಂಧನ

Pinterest LinkedIn Tumblr

ರಾಯಪುರ: ಮಹಾತ್ಮಾ ಗಾಂಧಿ ವಿರುದ್ಧ ಅವಹೇಳನಕಾರಿ ಪದಗಳನ್ನು ಬಳಸಿದ ಮತ್ತು ರಾಷ್ಟ್ರಪಿತನನ್ನು ಕೊಂದ ನಾಥುರಾಮ್ ಗೋಡ್ಸೆಯನ್ನು ಹೊಗಳಿದ್ದಕ್ಕಾಗಿ ರಾಯಪುರ ಪೊಲೀಸರು ಕಾಳಿಚರಣ್ ಮಹಾರಾಜ್ ಅವರನ್ನು ಬಂಧಿಸಿದ್ದಾರೆ. ಅವರನ್ನು ಖಜುರಾಹೊದಲ್ಲಿ ಬಂಧಿಸಲಾಯಿತು ಎಂದು ವರದಿಯಾಗಿದೆ.

(ಕಾಳಿಚರಣ್ ಮಹರಾಜ್- ಸಂಗ್ರಹ ಚಿತ್ರ)

ಛತ್ತೀಸ್ ಗಢದಲ್ಲಿ ಡಿಸೆಂಬರ್ 26 ರಂದು ನಡೆದ ಧರ್ಮ ಸಂಸದ್ ನಲ್ಲಿ ಗಾಂಧೀಜಿ ಅವರನ್ನು ಹತ್ಯೆ ಮಾಡಿದ್ದ ನಾಥೂರಾಂ ಗೂಡ್ಸೆ ಅವರನ್ನು ಹೊಗಳುವಾಗ ಕಾಳಿ ಚರಣ್ ಮಹಾತ್ಮ ಗಾಂಧೀಜಿ ವಿರುದ್ದ ಅವಹೇಳನಾಕಾರಿ ಪದ ಬಳಸಿದ್ದರು.

ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ವಿರುದ್ಧ ಕಾಳಿಚರಣ್ ಸ್ವಾಮೀಜಿ ಬಳಸಿರುವ ಪದ ತುಂಬಾ ನೋವುಂಟು ಮಾಡಿದೆ ಎಂದು ಮಹಾರಾಷ್ಟ್ರದ ಸಚಿವ ಜೀತೇಂದ್ರ ಅವದ್ ನೌಪದ್ ಪೊಲೀಸ್ ಠಾಣೆಯಲ್ಲಿ ಬುಧವಾರ ದೂರು ದಾಖಲಿಸಿದ್ದರು.

ಕಾಳಿಚರಣ್ ಮಹಾರಾಜ್ ವಿರುದ್ಧ ಕೋಮು ಪ್ರಚೋದನೆ ಮತ್ತಿತರ ದುರುದ್ದೇಶಪೂರಿತ ಭಾಷಣ ಮತ್ತು ಐಪಿಸಿ ಸೆಕ್ಷನ್ 294,295ಎ. 298, 505 (2) ಮತ್ತು 506(2) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

 

Comments are closed.