ಕರಾವಳಿ

ಮಗಳನ್ನು ಮಾದಕ ವ್ಯಸನಿಯನ್ನಾಗಿಸಿ ಲೈಂಗಿಕ ಕಿರುಕುಳ ನೀಡುತ್ತಿದ್ದ ವ್ಯಕ್ತಿ | ನೆರವು ಕೋರಿದ ನೊಂದ ತಾಯಿ | ಆರೋಪಿ ಬಂಧನ

Pinterest LinkedIn Tumblr

ಮಂಗಳೂರು: ತನ್ನ ಮಗಳಿಗೆ ಲೈಂಗಿಕ ಕಿರುಕುಳ ನೀಡಿ ಮಾದಕ ವ್ಯಸನಕ್ಕೆ ಆಮಿಷ ಒಡ್ಡುತ್ತಿರುವ ವ್ಯಕ್ತಿಯ ವಿರುದ್ಧ ಬಿಜೈನ ಮಹಿಳೆಯೊಬ್ಬರು, ಪೊಲೀಸರಿಗೆ ಹಾಗೂ ವಿಶ್ವ ಹಿಂದೂ ಪರಿಷತ್‌ಗೆ ದೂರು ನೀಡಿದ್ದಾರೆ.

ಈ ಬಗ್ಗೆ ವಿ.ಎಚ್.ಪಿ ಪೊಲೀಸರಿಗೆ ವಿಚಾರ ತಿಳಿಸಿದ್ದು ಆರೋಪಿ ಕೃಷ್ಣಾಪುರದ ಮೊಹಮ್ಮದ್ ಷರೀಫ್ ಸಿದ್ದಿಕ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಸಂತ್ರಸ್ತೆಯ ತಾಯಿ ವಿಎಚ್‌ಪಿಗೆ ನೀಡಿದ ದೂರಿನಲ್ಲಿ ಕಳೆದ ಮೂರು ವರ್ಷಗಳಿಂದ ಸಿದ್ದಿಕ್ ತನ್ನ ಮಗಳಿಗೆ ಮಾದಕ ದ್ರವ್ಯ ನೀಡಿ ಪದೇ ಪದೇ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂದು ತಿಳಿಸಿದ್ದಾರೆ. ಆಕೆಯ ಮಗಳು ಮಾದಕ ವ್ಯಸನಕ್ಕೆ ಒಳಗಾಗಿದ್ದಾಳೆ ಮತ್ತು ಆಕೆಯ ಆರೋಗ್ಯ ಸ್ಥಿತಿ ಹದಗೆಟ್ಟಿದೆ ಎಂದು ತಾಯಿ ಹೇಳಿದ್ದಾರೆ.

ಪತ್ರದಲ್ಲೇನಿದೆ..?
‘ಸಿದ್ದಿಕ್ ನನ್ನ ಮಗಳನ್ನು ತನ್ನ ಮನೆಯಿಂದ ಕರೆದುಕೊಂಡು ಹೋಗುತ್ತಿದ್ದ. ತನ್ನ ಸ್ನೇಹಿತರೊಂದಿಗೆ ಸೇರಿ ದಿನಗಟ್ಟಲೆ ಆಕೆಯನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದ. ನಾನು ಪೊಲೀಸರಿಗೆ ಹಾಗೂ ನಮ್ಮ ಧಾರ್ಮಿಕ ಮುಖಂಡರಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ.

‘ಮಾಹಿತಿಯ ಪ್ರಕಾರ, ಸಿದ್ದಿಕ್ ಈಗಾಗಲೇ ಮೂರು ಮದುವೆಯಾಗಿದ್ದಾನೆ ಮತ್ತು ಅವನು ನನ್ನ ಮಗಳ ಜೀವನವನ್ನು ಹಾಳುಮಾಡಿದ್ದಾನೆ’ ಎಂದು ತಾಯಿ ದೂರಿನಲ್ಲಿ ತಿಳಿಸಿದ್ದಾರೆ. ತನ್ನ ಮತ್ತು ಮಗಳನ್ನು ಸಿದ್ದಿಕ್‌ನಿಂದ ರಕ್ಷಿಸಲು ಮಹಿಳೆ ವಿಶ್ವ ಹಿಂದೂ ಪರಿಷತ್‌ನ ಸಹಾಯವನ್ನು ಕೋರಿದ್ದಾರೆ.

ದೂರಿನ ಪ್ರತಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಲೇ ಎಚ್ಚೆತ್ತ ಉರ್ವಾ ಪೊಲೀಸರು ಸಿದ್ದಿಕ್‌ನನ್ನು ಭಾನುವಾರ ಬಂಧಿಸಿದ್ದಾರೆ.

Comments are closed.