ಕರ್ನಾಟಕ

ಒಂದೇ ಕುಟುಂಬದ 9 ಮಂದಿ ಘರ್ ವಾಪಾಸಿ; ಕ್ರಿಶ್ಚಿಯನ್ ಧರ್ಮ ತೆರದು ಮರಳಿ‌ ಹಿಂದೂ ಧರ್ಮಕ್ಕೆ..!

Pinterest LinkedIn Tumblr

ಶಿವಮೊಗ್ಗ: ಜಿಲ್ಲೆಯಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದ ಒಂದೇ ಕುಟುಂಬದ ಒಂಬತ್ತು ಮಂದಿ ಹಿಂದೂ ಧರ್ಮದ ವಿಧಿ ವಿಧಾನದ ಮೂಲಕ ಮತ್ತೆ ಮರಳಿ ಹಿಂದೂ ಧರ್ಮಕ್ಕೆ ವಾಪಾಸ್ ಆಗಿದ್ದಾರೆ.

ನಗರದಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದಿಂದ ಶಿವಮೊಗ್ಗ ಜಿಲ್ಲೆಯ ಅಂತರಗಂಗೆ ಗ್ರಾಮದ ಜಯಶೀಲನ್ ಹಾಗೂ ಅವರ ಕುಟುಂಬದ 9 ಮಂದಿ ಮಾತೃಧರ್ಮಕ್ಕೆ ಮರಳಿ ಬಂದಿದ್ದಾರೆ.

ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದ ಈ ಒಂಭತ್ತು ಮಂದಿಯನ್ನು ಹಿಂದೂ ಧರ್ಮದ ವಿಧಿ ವಿಧಾನದಂತೆ ಜನ್ನಾಪುರದಲ್ಲಿನ ಶ್ರೀರಾಮ ಭಜನಾ ಮಂದಿರದಲ್ಲಿ ಅರಕೆರೆ ವಿರಕ್ತ ಮಠದ ಕರಿಸಿದ್ದೇಶ್ವರ ಸ್ವಾಮೀಜಿಗಳ ಸಮ್ಮುಖದಲ್ಲಿ ಮರಳಿ ಹಿಂದೂ ಧರ್ಮಕ್ಕೆ ಘರ್ ವಾಪಾಸ್ ಆದರು. ಇವರಿಗೆ ನೆರೆದಿದ್ದ ಅನೇಕರು ಶುಭ ಕೋರಿದರು.

Comments are closed.