ಕರ್ನಾಟಕ

ನಮಗೆ ನಷ್ಟ ಮಾಡಿಕೊಂಡು ಪ್ರತಿಭಟನೆ ಮಾಡಬಾರದು: ಕರ್ನಾಟಕ ಬಂದ್ ಬಗ್ಗೆ ನಟ ಯಶ್ ಹೇಳಿಕೆ

Pinterest LinkedIn Tumblr

ಬೆಂಗಳೂರು: ಬೆಳಗಾವಿಯಲ್ಲಿ ಎಂಇಎಸ್‌ ಪುಂಡಾಟ, ಸ್ವತಂತ್ರ ಹೋರಾಟಗಾರರ ಪ್ರತಿಮೆಗಳಿಗೆ ಮಸಿ ಬಳಿದಿರುವ ಪ್ರಕರಣವನ್ನು ಖಂಡಿಸಿ ಕನ್ನಡಪರ ಸಂಘಟನೆಗಳು ಡಿ. 31ರ ಶುಕ್ರವಾರ ಕರ್ನಾಟಕ ಬಂದ್‌ ಗೆ ಕರೆ ನೀಡಿವೆ. ಡಿ. 31ರಂದು ಕರ್ನಾಟಕದಲ್ಲಿ ಬಹುತೇಕ ವ್ಯಾಪಾರ, ವಹಿವಾಟು, ಸಂಚಾರ ಮತ್ತಿತರ ಚಟುವಟಿಕೆಗಳು ಬಂದ್‌ ಆಗಲಿವೆ ಎನ್ನಲಾಗುತ್ತಿದೆ. ಚಿತ್ರರಂಗವು ಬಂದ್ ಗೆ ನೈತಿಕ ಬೆಂಬಲ ನೀಡಿದ್ದು, ಶೂಟಿಂಗ್, ಚಿತ್ರಪ್ರದರ್ಶನ ಎಂದಿನಂತೆ ಮುಂದುವರಿಯಲಿದೆ. ಬಂದ್ ಬಗ್ಗೆ ನಟ ಯಶ್ ಪ್ರತಿಕ್ರಿಯೆ ನೀಡಿದ್ದಾರೆ.

ನಟ ಯಶ್ ಪ್ರತಿಕ್ರಿಯೆ ಏನು..?
ದೊಡ್ಡವರು ಏನು ನಿರ್ಧಾರ ಮಾಡುತ್ತಾರೋ ಮಾಡಲಿ. ಆದರೆ, ನಮಗೆ ನಷ್ಟ ಮಾಡಿಕೊಂಡು, ಇನ್ನೊಬ್ಬರ ವಿರುದ್ಧ ಪ್ರತಿಭಟನೆ ಯಾವತ್ತೂ ಮಾಡಬಾರದು ಅನ್ನೋದು ನನ್ನ ನಂಬಿಕೆ. ನಾನೀಗ ಏನೇ ಮಾತನಾಡಿದರೂ, ಅದು ಬೇರೆ ಥರ ರೂಪ ಪಡೆದುಕೊಳ್ಳುತ್ತದೆ ಅಂತ ನನಗೆ ಗೊತ್ತು. ಅದು ನನಗೆ ಬೇರೆಯದೇ ವಿಚಾರ. ಯಾಕೆಂದರೆ, ನಮ್ಮ ಬದುಕುಗಳು, ಕರ್ತವ್ಯಗಳು ಬೇರೆಯೇ ಇವೆ. ಆ ಕಡೆ ಗಮನ ಕೊಟ್ಟರೆ ಒಳ್ಳೆಯದು. ನಮ್ಮ ಭಾವನೆ ಏನಿದೆ ಅನ್ನೋದು ಪ್ರತಿಯೊಬ್ಬ ಕನ್ನಡಿಗನಿಗೂ ಗೊತ್ತಿರುತ್ತದೆ. ಅದನ್ನೂ ಮೀರಿ, ನಾವು ಮಾನವೀಯತೆ ಕಡೆಗೆ ಗಮನ ನೀಡಬೇಕು ಎಂದಿದ್ದಾರೆ.

Comments are closed.