ಪ್ರಮುಖ ವರದಿಗಳು

ಕಾಶಿ ವಿಶ್ವನಾಥ ಮಂದಿರ ಕಾರಿಡಾರ್ ಉದ್ಘಾಟನೆ: ಕಾರ್ಮಿಕರೊಂದಿಗೆ ಭೋಜನ ಮಾಡಿದ ನಮೋ..!

Pinterest LinkedIn Tumblr

ವಾರಣಾಸಿ: ಶ್ರೀ ಕಾಶಿ ವಿಶ್ವನಾಥ ಧಾಮ ಕಾರಿಡಾರ್ ಯೋಜನೆಯ ಮೊದಲ ಹಂತವನ್ನು ಉದ್ಘಾಟಿಸಲು ತಮ್ಮ ಲೋಕಸಭಾ ಕ್ಷೇತ್ರ ವಾರಾಣಸಿಗೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಸೋಮವಾರ ಕಾರ್ಯಕ್ರಮಕ್ಕೂ ಮುನ್ನ ಪವಿತ್ರ ಗಂಗಾ ನದಿಯಲ್ಲಿ ಮುಳುಗೆದ್ದು ಪ್ರಾರ್ಥನೆ ಸಲ್ಲಿಸಿದರು.

ಧಾರ್ಮಿಕ ನಗರದಲ್ಲಿ ಪ್ರಧಾನಿ ಮೋದಿ ಅವರಿಗೆ ಸ್ಥಳೀಯರಿಂದ ಅದ್ದೂರಿ ಸ್ವಾಗತ ಸಿಕ್ಕಿತು. ವಾರಾಣಸಿಯ ಬೀದಿಯಲ್ಲಿ ತೆರಳಿದ ಪ್ರಧಾನಿಯ ಕಾರಿನ ಮೇಲೆ ಹೂವಿನ ದಳಗಳ ಮಳೆ ಸುರಿಸಿದರು. ಕೆಲವರು ಮೋದಿ ಅವರಿಗೆ ತಮ್ಮ ಪ್ರೀತಿಯ ಕಾಣಿಕೆಗಳನ್ನು ನೀಡಲು ಮುಗಿಬಿದ್ದರು. ಅವರನ್ನು ನಿಯಂತ್ರಿಸಲು ಭದ್ರತಾ ಸಿಬ್ಬಂದಿ ಹರಸಾಹಸಪಟ್ಟರು. ಅಭಿಮಾನಿಗಳು ನೀಡಿದ ಪಗಡಿ ಮತ್ತು ಅಂಗವಸ್ತ್ರವನ್ನು ಸ್ವೀಕರಿಸಿದರು. ‘ಮೋದಿ ಮೋದಿ’ ಹಾಗೂ ‘ಹರ ಹರ ಮಹದೇವ’ ಘೋಷಣೆಗಳು ಮುಗಿಲು ಮುಟ್ಟಿತ್ತು.

ಕಾಶಿ ವಿಶ್ವನಾಥ ಧಾಮ ಕಾರಿಡಾರ್ ನಿರ್ಮಿಸಿದ ಕಾರ್ಮಿಕರೊಂದಿಗೆ ಮೋದಿ ಅಭೂತಪೂರ್ವ ಸಮಯವನ್ನು ಕಳೆದರು. ಮೋದಿ ಅವರನ್ನು ಮೊದಲು ಸ್ವಾಗತಿಸಿದರು. ನಂತರ ಹೂವುಗಳು. ಬಳಿಕ ಎಲ್ಲರೊಂದಿಗೆ ಮಾತನಾಡಿದರು. ಕಾರ್ಯಕರ್ತರೊಂದಿಗೆ ಗುಂಪು ಫೋಟೊ ತೆಗೆಸಿಕೊಂಡರು. ಬಳಿಕ ಊಟಕ್ಕೆ ತೆರಳಿದರು. ಎಲ್ಲಾ ಕೆಲಸಗಾರರು ಅವನ ಪಕ್ಕದಲ್ಲಿ ಕುಳಿತಿದ್ದರು. ಮೋದಿ ಅವರು ಎಲ್ಲರೊಂದಿಗೆ ಊಟ ಮಾಡಿ ಕಾರ್ಯಕರ್ತರ ಕಾರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದರು.

ಪುರಾತನ ಪ್ರಸಿದ್ಧ ಕಾಶಿ ವಿಶ್ವನಾಥ ದೇವಾಲಯಕ್ಕೆ ತೆರಳಲು ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ಖಿರ್ಕಿಯಾ ಘಾಟ್‌ನಿಂದ ಲಲಿತಾ ಘಾಟ್‌ಗೆ ದೋಣಿಯಲ್ಲಿ ಪ್ರಯಾಣಿಸಿದರು. ಕಾಳ ಬೈರವ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಪ್ರಧಾನಿ, ಗಂಗಾ ನದಿಯಲ್ಲಿ ಮುಳುಗೆದ್ದರು. ಗಂಗಾ ನದಿಯ ನೀರನ್ನು ಕಾಶಿ ವಿಶ್ವನಾಥ ದೇವಾಲಯದಲ್ಲಿ ಜಲಾಭಿಷೇಕಕ್ಕಾಗಿ ತೆಗೆದುಕೊಂಡು ಹೋದರು.

ಬಳಿಕ ವಿಶ್ವನಾಥ ದೇವಸ್ಥಾನಕ್ಕೆ ತೆರಳಿದ ಮೋದಿ, ಅಲ್ಲಿ ಪ್ರಾರ್ಥನೆ ಸಲ್ಲಿಸಿದರು. ನಂತರ ಮಂತ್ರಘೋಷಗಳ ನಡುವೆ ಯಜ್ಞ ಕಾರ್ಯದಲ್ಲಿ ಭಾಗವಹಿಸಿದರು.

ಬಿಜೆಪಿ ಆಡಳಿತವಿರುವ ರಾಜ್ಯಗಳ 12 ಮುಖ್ಯಮಂತ್ರಿಗಳು ಮತ್ತು 9 ಉಪ ಮುಖ್ಯಮಂತ್ರಿಗಳು ಹಾಗೂ ಸುಮಾರು 3,000 ಸಾಧು ಸಂತರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಈ ಯೋಜನೆಯು 5 ಲಕ್ಷ ಚದರ ಅಡಿಯ ಬೃಹತ್ ಪ್ರದೇಶದಲ್ಲಿ ಹರಡಿದ್ದು, 40ಕ್ಕೂ ಹೆಚ್ಚು ಪುರಾತನ ದೇವಾಲಯಗಳನ್ನು ಪುನರುಜ್ಜೀವನ ಮತ್ತು ಹೊಸ ಸೌಂದರ್ಯ ಪಡೆದುಕೊಂಡಿವೆ. ಹಳೆಯ ಕಟ್ಟಡಗಳಿಗೆ ಮೆರುಗು ನೀಡಲಾಗಿದ್ದು, ಆಕರ್ಷಕ ಶಿಲ್ಪ ಕಲೆಗಳಿಂದ ಪ್ರವಾಸಿಗರು, ಭಕ್ತರನ್ನು ಸೆಳೆಯುವ ಗುರಿ ಹೊಂದಲಾಗಿದೆ. ಜತೆಗೆ ದೇಶದ ಮೂಲೆ ಮೂಲೆಗಳಿಂದ ಬರುವ ಭಕ್ತರಿಗೆ ವಿವಿಧ ಬಗೆಯ ಸೌಲಭ್ಯಗಳನ್ನು ಒದಗಿಸಲು 23 ಹೊಸ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಯಾತ್ರಿ ಸುವಿಧಾ ಕೇಂದ್ರಗಳು, ಪ್ರವಾಸಿ ಸೌಲಭ್ಯ ಕೇಂದ್ರ, ವೇದಿಕ್ ಕೇಂದ್ರ, ಮುಮುಕ್ಷು ಭವನ, ಭೋಗಶಾಲಾ, ಸಿಟಿ ಮ್ಯೂಸಿಯಂ, ಪ್ರದರ್ಶನ ಗ್ಯಾಲರಿಗಳು, ಆಹಾರ ಮಳಿಗೆ ಮುಂತಾದವು ಇದರಲ್ಲಿದೆ.

 

Comments are closed.