ನವದೆಹಲಿ: ಸೇನಾ ಹೆಲಿಕಾಪ್ಟರ್ ಪತನದಲ್ಲಿ ಮಡಿದ ಮಿಲಿಟರಿ ಮುಖ್ಯಸ್ಥ ಬಿಪಿನ್ ರಾವತ್, ಪತ್ನಿ ಮಧುಲಿಕಾ ಹಾಗೂ ಇತರ 11 ಸೇನಾಧಿಕಾರಿಗಳ ಮೃತದೇಹ ದೆಹಲಿ ತಲುಪಿದೆ. ತಮಿಳುನಾಡಿನಿಂದ ದೆಹಲಿಯ ಪಾಲಮ್ ವಾಯು ನೆಲೆಗೆ ವಾಯು ಸೇನೆ ವಿಮಾನದ ಮೂಲಕ ಪಾರ್ಥೀವ ಶರೀರ ಆಗಮಿಸಿದೆ. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಗಲಿದ ಸೇನಾಧಿಕಾರಿಗಳಿಗ ಅಂತಿಮ ದರ್ಶನ ಪಡೆದು, ಗೌರವ ನಮನ ಸಲ್ಲಿಸಿದ್ದಾರೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಸೇನಾ ಹೆಲಿಕಾಪ್ಟರ್ ಪತನದಲ್ಲಿ ಮಡಿದ 12 ಕುಟುಂಬವನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಸರ್ಕಾರ ಕುಟುಂಬದ ಜೊತೆಗಿರುವುದಾಗಿ ಧೈರ್ಯ ತುಂಬಿದ್ದಾರೆ. ಪಾಲಮ್ ವಾಯುನೆಯಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ರಾಜನಾಥ್ ಸಿಂಗ್ ಕೂಡ ಹೆಲಿಕಾಪ್ಟರ್ ಅಪಘಾತದಲ್ಲಿ ಮಡಿದವರ ಅಂತಿಮ ದರ್ಶನ ಪಡೆದಿದ್ದಾರೆ.
ಸಿಡಿಎಸ್ ಜನರಲ್ ಬಿಪಿನ್ ರಾವತ್, ರಾವತ್ ಪತ್ನಿ ಮಧುಲಿಕ, ಬ್ರಿಗೇಡಿಯರ್ ಎಲ್ಎಸ್ ಲಿಡ್ಡರ್, ಲೆಫ್ಟಿನೆಂಟ್ ಕರ್ನಲ್ ಹರ್ಜಿಂದರ್ ಸಿಂಗ್, ವಿಂಗ್ ಕಮಾಂಡರ್ ಪಿಎಸ್ ಚೌವ್ಹಾನ್, ಸ್ಕಾಡ್ರಾನ್ ಲೀಡರ್ ಕೆ ಸಿಂಗ್, JWO ದಾಸ್, JWO ಪ್ರದೀಪ್ ಎ, ಹವಿಲ್ದಾರ್ ಸತ್ಪಾಲ್ ನಾಯಕ್ ಗುರುಸೇವಕ್ ಸಿಂಗ್, ನಾಯಕ್ ಜಿತೇಂದ್ರ ಕುಮಾರ್, ಲ್ಯಾನ್ಸ್ ನಾಯಕ್ ವಿವೇಕ್ ಕುಮಾರ್ ಹಾಗೂ ಲ್ಯಾನ್ಸ್ ನಾಯಕ್ ಸಾಯಿ ತೇಜ್ ವಾಯು ಸೇನೆಯ Mi-17V5 ಹೆಲಿಕಾಪ್ಟರ್ ಅಪಘಾತದಲ್ಲಿ ಮಡಿದಿದ್ದಾರೆ. ಇವರ ಪಾರ್ಥೀವ ಶರೀರವನ್ನು ಇದೀಗ ಪಾಲಂ ವಾಯುನೆಲೆಯಲ್ಲಿ ಇಡಲಾಗಿದೆ.
ಮೃತರ ಅಂತ್ಯಕ್ರಿಯೆ ಇಂದು (ಡಿ.10)ಕ್ಕೆ ದೆಹಲಿಯ ಕಂಟೋನ್ಮೆಂಟ್‌ನಲ್ಲಿ ನಡೆಯಲಿದೆ. ನಾಗರೀಕರಿಗೆ ಜನರಲ್ ಬಿಪಿನ್ ರಾವತ್ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಮಾಡಲಾಗಿದೆ. ಇಂದು ಬೆಳಗ್ಗೆ 11 ಗಂಟೆಯಿಂದ 12.30ರ ವರೆಗೆ ರಾವತ್ ಅವರ ಕರಾಜ್ ಮಾರ್ಗ್‌ನಲ್ಲಿ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಲಾಗಿದೆ.
ಸಿಡಿಎಸ್ ಬಿಪಿನ್ ರಾವತ್, ಅವರ ಪತ್ನಿ ಮತ್ತು ಬ್ರಿಗೇಡಿಯರ್ ಎಲ್ಎಸ್ ಲಿಡ್ಡರ್, ಲೆಫ್ಟಿನೆಂಟ್ ಕರ್ನಲ್ ಹರ್ಜಿಂದರ್ ಸಿಂಗ್, ವಿಂಗ್ ಕಮಾಂಡರ್ ಪಿಎಸ್ ಚೌಹಾಣ್, ಸ್ಕ್ವಾಡ್ರನ್ ಲೀಡರ್ ಕೆ ಸಿಂಗ್, ಜೆಡಬ್ಲ್ಯೂಒ ದಾಸ್, ಜೆಡಬ್ಲ್ಯೂಒ ಪ್ರದೀಪ್ ಎ, ಹವಾಲ್ದಾರ್ ಸತ್ಪಾಲ್, ನಾಯಕ್ ಗುರ್ಸೇವಕ್ ಸಿಂಗ್, ನಾಯಕ್ ಜಿತೇಂದರ್ ಕುಮಾರ್, ಲ್ಯಾನ್ಸ್ ನಾಯಕ್ ವಿವೇಕ್ ಕುಮಾರ್ ಮತ್ತು ಲ್ಯಾನ್ಸ್ ಅವರು ಪ್ರಯಾಣಿಸುತ್ತಿದ್ದ ಭಾರತೀಯ ವಾಯುಪಡೆಯ (IAF) Mi-17V5 ಹೆಲಿಕಾಪ್ಟರ್ ಡಿಸೆಂಬರ್ 8 ರಂದು ತಮಿಳುನಾಡಿನ ಕುನ್ನೂರ್ ಬಳಿ ಪತನಗೊಂಡಿತ್ತು.
Comments are closed.