ಮಂಗಳೂರು: ಕರಾವಳಿಯ ಇತಿಹಾಸ ಪ್ರಸಿದ್ಧ ಮಂಗಳೂರಿನ ಶ್ರೀ ಕ್ಷೇತ್ರ ಕುದ್ರೋಳಿಗೆ ಗುರುವಾರ ಸಂಜೆ ನಟ ಕಿಚ್ಚ ಸುದೀಪ್ ಭೇಟಿ ನೀಡಿದ್ದಾರೆ.
ಶ್ರೀ ದೇವರ ದರ್ಶನ ಪಡೆದ ಸುದೀಪ್ ಪ್ರಸಾದ ಸ್ವೀಕರಿಸಿದರು. ಚಲನಚಿತ್ರ ನಿರ್ದೇಶಕ ರಾಜೇಶ್ ಭಟ್ ಮೊದಲಾದವರು ಸುದೀಪ್ ಅವರ ಜೊತೆಗಿದ್ದರು.
ಕುದ್ರೋಳಿ ಕ್ಷೇತ್ರದ ಅಧ್ಯಕ್ಷ ಹೆಚ್.ಎಸ್. ಸಾಯಿರಾಂ, ಕ್ಷೇತ್ರದ ಟ್ರಸ್ಟಿ ಶೇಖರ್ ಪೂಜಾರಿ, ಮ್ಯಾನೇಜರ್ ವಿನೀತ್ ಅವರು ಸುದೀಪ್ ಅವರನ್ನು ಬರ ಮಾಡಿಕೊಂಡರು.
ಸುದೀಪ್ ಅವರ ಬಹು ನಿರೀಕ್ಷೆಯ ವಿಕ್ರಂತ್ ರೋಣ 2022 ರ ಫೆಬ್ರವರಿಯಲ್ಲಿ ಬಿಡುಗಡೆಗೊಳ್ಳಲಿದೆ.
Comments are closed.