ಪ್ರಮುಖ ವರದಿಗಳು

ಕತ್ರೀನಾ ಕೈಫ್ ಕೆನ್ನೆಯಂತಹ ರಸ್ತೆ ನಿರ್ಮಿಸಬೇಕು; ವಿವಾದಾತ್ಮಕ ಹೇಳಿಕೆ ನೀಡಿದ ರಾಜಸ್ಥಾನ ಸಚಿವ

Pinterest LinkedIn Tumblr

ಜೈಪುರ್: ಕತ್ರಿನಾ ಕೈಫ್ ಅವರ ಕೆನ್ನೆಯಂತೆ ರಸ್ತೆಗಳನ್ನು ನಿರ್ಮಿಸಬೇಕು ಎಂದು ಹೇಳಿಕೆ ನೀಡುವ ಮೂಲಕವಾಗಿ ರಾಜಸ್ಥಾನ ಸಚಿವ ರಾಜೇಂದ್ರ ಸಿಂಗ್ ಗುಧಾ ವಿವಾದಾತ್ಮಕವಾಗಿ ಸುದ್ದಿಯಾಗಿದ್ದಾರೆ.

ಹೊಸದಾಗಿ ನೇಮಕಗೊಂಡ ರಾಜಸ್ಥಾನ ಸಚಿವ ರಾಜೇಂದ್ರ ಸಿಂಗ್ ಗುಧಾ ಅವರು ರಾಜ್ಯದ ರಸ್ತೆಗಳನ್ನು ನಟಿ ಕತ್ರಿನಾ ಕೈಫ್ ಅವರ ಕೆನ್ನೆಗೆ ಹೋಲಿಸಿದ್ದಾರೆ. ಈ ಹೇಳಿಕೆಯ ವೀಡಿಯೋ ವೈರಲ್ ಆಗಿದ್ದು ಇದೀಗಾ ವಿವಾದಕ್ಕೆ ಕಾರಣವಾಗಿದೆ.

ಶಾಸಕ ತಮ್ಮ ವಿಧಾನಸಭಾ ಕ್ಷೇತ್ರವಾದ ಉದಯಪುರವತಿಯಲ್ಲಿ ಜನರೊಂದಿಗೆ ಸಂವಹನ ನಡೆಸುತ್ತದ್ದರು. ತಮ್ಮ ಅಳಲನ್ನು ತೋಡಿಕೊಂಡ ಕೆಲ ಗ್ರಾಮಸ್ಥರು ಈ ಭಾಗದ ರಸ್ತೆಗಳನ್ನು ದುರಸ್ತಿಪಡಿಸುವಂತೆ ಆಗ್ರಹಿಸಿದ್ದಾರೆ. ಈ ವೇಳೆ ಸಚಿವರು ಸಭೆಯಲ್ಲಿದ್ದ ಲೋಕೋಪಯೋಗಿ ಇಲಾಖೆಯ ಮುಖ್ಯ ಎಂಜಿನಿಯರ್ ಕಡೆಗೆ ತಿರುಗಿ, ನನ್ನ ಕ್ಷೇತ್ರದಲ್ಲಿ ಕತ್ರಿನಾ ಕೈಫ್ ಕೆನ್ನೆಯಂತೆ ರಸ್ತೆ ಮಾಡಬೇಕು ಎಂದು ತಮಾಷೆಯಾಗಿ ಹೇಳಿದರು ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

2005 ರಲ್ಲಿ, ಆರ್.ಜೆ.ಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು ಬಿಹಾರದ ರಸ್ತೆಗಳನ್ನು ಹೇಮಾ ಮಾಲಿನಿ ಅವರ ಕೆನ್ನೆಯಂತೆ ಸುಗಮಗೊಳಿಸುವುದಾಗಿ ಭರವಸೆ ನೀಡಿದ್ದು ವಿವಾದವಾಗಿತ್ತು.

Comments are closed.