ಕರಾವಳಿ

ಕ್ರೇಡಿಟ್‌ ಕಾರ್ಡ್‌ ಮೂಲಕ ಜನರ ಹಣ ವರ್ಗಾವಣೆ; ಇಬ್ಬರು ಟಿಬೇಟಿಯನ್‌ ಪ್ರಜೆಗಳ ಬಂಧನ

Pinterest LinkedIn Tumblr

ಮಂಗಳೂರು: ಕ್ರೆಡಿಟ್ ಕಾರ್ಡ್ ಮೂಲಕ ಸಾರ್ವಜನಿಕರ ಗಮನಕ್ಕೆ ಬಾರದೇ ಹಣವನ್ನು ಮೋಸದಿಂದ ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಳ್ಳುತ್ತಿದ್ದ ಇಬ್ಬರು ಟಿಬೆಟಿಯನ್ ಪ್ರಜೆಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಉತ್ತರಕನ್ನಡ ಜಿಲ್ಲೆ ಮುಂಡುಗೋಡು ಮೊನಸ್ಸಿ ಟಿಬೇಟಿಯನ್‌ ಕಾಲನಿ ನಿವಾಸಿಗಳಾದ ಲೋಬಸಂಗ್‌ ಸಂಗ್ಯ (24) ಮತ್ತು ದಕಪ ಪುಂದೇ (40) ಎಂದು ಗುರುತಿಸಲಾಗಿದೆ.

ಇಬ್ಬರೂ ಚೀನಾದ ನಿಷೇಧಿತ ಆಪ್‌ಗಳಾದ ವೀ ಚಾಟ್ ಮತ್ತು ರೆಡ್ ಪ್ಯಾಕ್ ಸಹಿತ ಇತರ ಆಪ್ ಮೂಲಕ ಹವಾಲಾ ರೀತಿಯಲ್ಲಿ ಹಣವನ್ನು ಟಿಬೆಟಿನಿಂದ ಮುಂಡಗೋಡಿಗೆ ವರ್ಗಾಯಿಸಿಕೊಂಡಿದ್ದರು.

ಇಬ್ಬರನ್ನೂ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಮಾಹಿತಿ ನೀಡಿದ್ದಾರೆ.

Comments are closed.