UAE

ನ.12ರಂದು ದುಬೈನಲ್ಲಿ ಕೆ.ಎನ್.ಆರ್.ಐ ಫೋರಮ್ ಯುಎಇ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಆಚರಣೆ

Pinterest LinkedIn Tumblr

ದುಬೈ: ಯುಎಇ ಇತಿಹಾಸದಲ್ಲಿ ಮೊದಲ ಬಾರಿಗೆ ಕರ್ನಾಟಕ ಎನ್‌ಆರ್‌ಐ ಫೋರಮ್ ಯುಎಇ ನೇತೃತ್ವದಲ್ಲಿ ಎಲ್ಲಾ ಕನ್ನಡ ಪರ ಸಂಘಗಳು ನವೆಂಬರ್ 12 ರಂದು ಶುಕ್ರವಾರ ದುಬೈನಲ್ಲಿ 66 ನೇ ವರ್ಷದ ಕರ್ನಾಟಕ ರಾಜ್ಯೋತ್ಸವ ಆಚರಣೆಗೆ ಸಕಲ ಸಿದ್ಧತೆ ನಡೆಸಿದೆ.

ಯುಎಇ ಯಲ್ಲಿ ಕನ್ನಡ ಸಂಘ ವಿವಿಧ ಸಾಂಸ್ಕೃತಿಕ, ಸಾಮಾಜಿಕ ಚಟುವಟಿಕೆಗಳು ಮತ್ತು ಕನ್ನಡ ಪರ ಸಂಸ್ಥೆಗಳು ಆಯೋಜಿಸುವ ಕಾರ್ಯಕ್ರಮಗಳಿಂದ ಬಹಳಷ್ಟು ಕ್ರಿಯಾಶೀಲವಾಗಿತ್ತು ಆದರೆ ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಕಾರ್ಯಕ್ರಮಗಳು ಸ್ಥಗಿತಗೊಂಡಿತ್ತು. ಇದೀಗಾ ಕೆ.ಎನ್.ಆರ್.ಐ ಅವರು ಕರ್ನಾಟಕ ರಾಜ್ಯೋತ್ಸವವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲು ಎಲ್ಲಾ ಕನ್ನಡ ಆಧಾರಿತ ಸಂಘಗಳೊಂದಿಗೆ ಮುಂದಾಗಿದ್ದಾರೆ.

ಫಾರ್ಚೂನ್ ಪ್ಲಾಜಾ ಹೋಟೆಲ್‌ನಲ್ಲಿ ಮಾಧ್ಯಮವನ್ನುದ್ದೇಶಿಸಿ ಮಾತನಾಡಿದ ಕೆಎನ್‌ಆರ್‌ಐ ಯುಎಇ ಅಧ್ಯಕ್ಷ ಪ್ರವೀಣ್ ಶೆಟ್ಟಿ, ನವೆಂಬರ್ 12, 2021 ರಂದು ದುಬೈನ ಶೇಖ್ ರಶೀದ್ ಆಡಿಟೋರಿಯಂನಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸುತ್ತೇವೆ. ಕರ್ನಾಟಕ ರಾಜ್ಯ ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನೀಲ್ ಕುಮಾರ್, ಪ್ರಾಥಮಿಕ ಮತ್ತು ಪ್ರೌಢಶಾಲಾ ಸಚಿವ ಬಿ.ಸಿ ನಾಗೇಶ್ ಮತ್ತು ದುಬೈನಲ್ಲಿರುವ ಭಾರತೀಯ
ಕಾನ್ಸುಲೇಟ್ ಕಾನ್ಸುಲ್ ಜನರಲ್ ಎಚ್.ಇ. ಕಾರ್ಯಕ್ರಮಕ್ಕೆ ಗೌರವಾನ್ವಿತ ಅತಿಥಿಯಾಗಿ ಡಾ. ಅಮನ್ ಪುರಿ ಮತ್ತು ಕನ್ನಡ ಚಲನಚಿತ್ರರಂಗದ ಸಂಗೀತ ಖ್ಯಾತ ನಿರ್ದೇಶಕ ಗುರುಕಿರಣ್ ಆಗಮಿಸಲಿದ್ದಾರೆ. ಯುಎಇ ಕನ್ನಡ ಆಧಾರಿತ ಸಂಘಗಳ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಕನ್ನಡ…ಕನ್ನಡ….ಮನೋರಂಜನೆ
ಕಾರ್ಯಕ್ರಮದಲ್ಲಿ‌ ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ‌ ಗುರುಕಿರಣ್, ಚಲನಚಿತ್ರ ನಿರ್ಮಾಪಕ, ಉದ್ಯಮಿ ಹರೀಶ್ ಶೇರಿಗಾರ್ ಹಾಗೂ ಹಿನ್ನೆಲೆ ಗಾಯಕಿ ಅಕ್ಷತಾ ರಾವ್ ಅವರಿಂದ‌ ಕನ್ನಡ ಸಂಗೀತ ರಸಮಂಜರಿ ನಡೆಯಲಿದೆ. ನೃತ್ಯ, ಕಲೆ ಮತ್ತು ಸಾಂಸ್ಕೃತಿಕ ಪ್ರಸ್ತುತಿಗಳೊಂದಿಗೆ ಲೈವ್ ಆರ್ಕೆಸ್ಟ್ರಾ, ಯಕ್ಷಗಾನ ನಾಟಕ ಮತ್ತು ವಿಶೇಷವಾಗಿ ಕನ್ನಡ ರಾಜ್ಯೋತ್ಸವ ವೇದಿಕೆಯಲ್ಲಿ ಪ್ರದರ್ಶನ ನೀಡಲು ದುಬೈಗೆ ಆಗಮಿಸುತ್ತಿರುವ ಟಗರು ತಂಡದ ವಿಶೇಷ ಪ್ರದರ್ಶನ ಇರಲಿದೆ.

ಎಲ್ಲಾ ಕನ್ನಡಿಗರು ತಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಪ್ರವೀಣ್ ಕುಮಾರ್ ಶೆಟ್ಟಿ ವಿನಂತಿಸಿದ್ದಾರೆ.

Comments are closed.