ಪ್ರಮುಖ ವರದಿಗಳು

ಬಾಲಿವುಡ್ ನಟ ಶಾರುಖ್ ಖಾನ್, ನಟಿ ಅನನ್ಯಾ ಪಾಂಡೆ ಮನೆ ಮೇಲೆ ಎನ್.ಸಿ.ಬಿ ದಾಳಿ

Pinterest LinkedIn Tumblr

ಮುಂಬೈ: ಮುಂಬೈನಲ್ಲಿ ಬಾಲಿವುಡ್​ ನಟ, ನಟಿಯರ ಮನೆಗಳ ಮೇಲೆ ಎನ್​ಸಿಬಿ ದಾಳಿ ನಡೆಸಿದೆ.

ಬಾಲಿವುಡ್​ ನಟ ಶಾರುಖ್​ ಖಾನ್​ ಮನೆ ಮೇಲೆ ಎನ್.ಸಿ.ಬಿ ದಾಳಿ ನಡೆಸಿದೆ. ಮುಂಬೈನ ಬಾಂದ್ರಾದಲ್ಲಿರುವ ನಟ ಶಾರುಖ್​ ಖಾನ್ ನಿವಾಸ ‘ಮನ್ನತ್’ಗೆ ತೆರಳಿ ಅಧಿಕಾರಿಗಳು ಶೋಧ ನಡೆಸಿದ್ದಾರೆ.

ಆರ್ಯನ್ ಖಾನ್ ಅವರನ್ನು ಬಂಧಿಸಲಾಗಿರುವ ಕ್ರೂಸ್ ಶಿಪ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎನ್.ಸಿ.ಬಿ ಅಧಿಕಾರಿಗಳು ತನಿಖೆಗಾಗಿ ಶೋಧ ನಡೆಸಲು ಶಾರುಖ್ ನಿವಾಸಕ್ಕೆ ತೆರಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಎನ್​ಸಿಬಿಯ ಮತ್ತೊಂದು ತಂಡ ಬಾಲಿವುಡ್ ನಟಿ ಅನನ್ಯಾ ಪಾಂಡೆ ಮನೆಯಲ್ಲಿ ಶೋಧ ಕಾರ್ಯ ಆರಂಭಿಸಿದೆ. ಇದೇ ವೇಳೆ ಎನ್​ಸಿಬಿ ಅನನ್ಯಾ ಪಾಂಡೆಗೆ ಸಮನ್ಸ್ ಜಾರಿ ಮಾಡಿದೆ.

ಇಂದು ಮುಂಜಾನೆ ನಟ ಶಾರುಖ್ ಆರ್ಥರ್ ರೋಡ್ ಜೈಲಿಗೆ ತೆರಳಿ ಆರ್ಯನ್​ರನ್ನು ಭೇಟಿಯಾಗಿದ್ದರು. ಇದಾದ ಕೆಲ ಹೊತ್ತಲ್ಲೇ ಎನ್​ಸಿಬಿ ಶೋಧಕ್ಕಾಗಿ ದಾಳಿ ನಡೆಸಿದೆ.

Comments are closed.