ತುಮಕೂರು: ಸೋಶಿಯಲ್ ಮೀಡಿಯಾದಲ್ಲಿ ಸದ್ಯ ತುಮಕೂರಿನಲ್ಲಿ ನಡೆದ ಮದುವೆಯೊಂದು ಭಾರೀ ಸದ್ದು ಮಾಡುತ್ತಿದ್ದು, ಮದುವೆ ಫೋಟೋಗಳು ವೈರಲ್ ಆಗಿವೆ. ಇಲ್ಲೊಬ್ಬ 25 ವರ್ಷದ ಯುವತಿ ತನಗಿಂತ 20ವರ್ಷ ಹಿರಿಯ ವ್ಯಕ್ತಿ ಜೊತೆ ಮದುವೆಯಾಗಿದ್ದಾಳೆ. ಆದರೆ ಅದರ ಹಿಂದಿನ ಕಾರಣ ನಿಜಕ್ಕೂ ಅಚ್ಚರಿ ಮೂಡಿಸಿದೆ.

ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಸಂತೆಮಾವತ್ತೂರು ಗ್ರಾಮದ 25 ವರ್ಷ ವಯಸ್ಸಿನ ಮೇಘನಾ ಎಂಬಾಕೆ ತನಗಿಂತ ಇಪ್ಪತ್ತು ವರ್ಷ ಹಿರಿಯ ವ್ಯಕ್ತಿಯನ್ನು ಮದುವೆಯಾಗಿದ್ದಾರೆ. ಇದೇ ತಾಲೂಕಿನ ಚೌಡನಕುಪ್ಪೆ ಗ್ರಾಮ ಸಮೀಪದ ಅಕ್ಕಿಮರಿಪಾಳ್ಯದ ಶಂಕರಣ್ಣ ಎಂಬವರನ್ನು ಮದುವೆಯಾಗಿದ್ದಾಳೆ. 45 ವರ್ಷದ ಶಂಕರಣ್ಣಗೆ ಮದುವೆ ಆಗಿರಲಿಲ್ಲ. ಹೀಗಿರುವಾಗ ಮೇಘನಾ ಅವರ ಬಳಿಕ ತನನ್ನು ಮದುವೆಯಾಗುವಂತೆ ಕೇಳಿದ್ದಾರೆ. ಇದಕ್ಕೆ ಶಂಕರಣ್ಣನೂ ಒಪ್ಪಿಗೆ ಸೂಚಿಸಿದ್ದು, ಇಬ್ಬರೂ ಸಮೀಪದ ದೇವಾಲಯದ ಬಳಿ ಸರಳವಾಗಿ ಮದುವೆಯಗಿದ್ದಾರೆ. ಈ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಮಾಹಿತಿಗಳ ಪ್ರಕಾರ ಮೇಘನಾಗೆ ಮೂರು ವರ್ಷದ ಹಿಂದೆ ಮದುವೆಯಾಗಿದೆ. ಆದರೆ ಮದುವೆಯಾದ ಒಂದು ವರ್ಷದಲ್ಲಿ ಆಕೆಯ ಪತಿ ಮನೆ ಬಿಟ್ಟು ಓಡಿ ಹೋಗಿದ್ದಾರೆ. ಮನೆ ಬಿಟ್ಟು ಹೋದ ಗಂಡ ಮೇಘನಾಳನ್ನು ನೋಡಲು ಕೂಡಾ ಬಂದಿರಲಿಲ್ಲ. ಹೀಗಿರುವಾಗ ಕಳೆದೆರಡು ವರ್ಷದಿಂದ ಒಬ್ಬಂಟಿಯಾಗಿದ್ದ ಮೇಘನಾ ಬೇಸತ್ತು ಶಂಕರಣ್ಣನನ್ನು ಮದುವೆ ಆಗಿದ್ದಾಳೆ ಎನ್ನಲಾಗಿದೆ.
Comments are closed.