ಕರಾವಳಿ

ವಾಹನವಿಲ್ಲದೇ ಪರದಾಡುತ್ತಿದ್ದ ವೃದ್ಧ ದಂಪತಿಗಳಿಗೆ ಪೊಲೀಸ್ ಕಮಿಷನರ್ ನೆರವು : ವ್ಯಾಪಕ ಶ್ಲಾಘನೆ

Pinterest LinkedIn Tumblr

ಮಂಗಳೂರು, ಜೂನ್ 22 : ಪೊಲೀಸ್ ವಾಹನದಲ್ಲಿ ವೃದ್ಧ ದಂಪತಿಗಳನ್ನು ಮನೆ ತಲುಪಿಸುವ ವ್ಯವಸ್ಥೆ ಮಾಡುವ ಮೂಲಕ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿ ಕುಮಾರ್ ಮಾನವಿಯತೆ ಮೆರೆದಿದ್ದಾರೆ.

ಇಂದು ಮಧ್ಯಾಹ್ನ ನಗರದ ಕ್ಲಾಕ್ ಟವರ್ ಬಳಿ ಮನೆಗೆ ತೆರಳಲು ವಾಹನ ಸಿಗದೆ ಪರದಾಟುತ್ತಿದ್ದ ಹಿರಿಯ ದಂಪತಿಯನ್ನು ಗಮನಿಸಿದ ಪೊಲೀಸ್ ಆಯುಕ್ತ ಎನ್.ಶಶಿ ಕುಮಾರ್ ಅವರು ಡಿಸಿಪಿ ಹರಿರಾಮ್ ಶಂಕರ್ ಅವರಿಗೆ ದಂಪತಿಗಳನ್ನು ಮನೆಗೆ ತಲುಪಿಸುವ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿದ್ದು, ಅದರಂತೆ ಡಿಸಿಪಿ ಹರಿರಾಮ್ ಶಂಕರ್ ಅವರು ಪೊಲೀಸ್ ಸಿಬ್ಬಂದಿಗಳ ಮೂಲಕ ದಂಪತಿಗಳನ್ನು ಪೊಲೀಸ್ ಜೀಪ್ ನಲ್ಲೇ ಮನೆ ತಲುಪಿಸುವ ವ್ಯವಸ್ಥೆ ಮಾಡಿದರು.

ಘಟನೆ ವಿವರ :

ಕುಲಶೇಖರದ ಇಬ್ಬರು ಹಿರಿಯ ನಾಗರಿಕರು ಇಂದು ಬೆಳಿಗ್ಗೆ ನಗರದ ಸೆಂಟ್ರಲ್ ಮಾರ್ಕೆಟ್ ಬಳಿಯ ಬ್ಯಾಂಕ್‌ಗೆ ಬಂದು ವಾಪಸು ಮನೆಗೆ ತೆರಳುವ ಸಂದರ್ಭ ಅನ್ ಲಾಕ್ ಅವದಿ ಮುಗಿದಿದ್ದು, ಯಾವೂದೇ ವಾಹನ ಸಿಗದೆ ಪರದಾಡುತ್ತಿದ್ದರು.

ಇದೇ ವೇಳೆ ಸರಕಾರದ ಮಾರ್ಗ ಸೂಚಿ ಉಲ್ಲಂಘನೆ ಮಾಡುತ್ತಿರುವ ವಾಹನ ಸವಾರರ ವಿರುದ್ಧ ಕಾರ್ಯಚರಣೆ ನಡೆಸುತ್ತಿರುವ ಪೊಲೀಸರ ಕಾರ್ಯಾಚರಣೆಯನ್ನು ಪರಿಶೀಲನೆಮಾಡಲು ನಗರದ ಕ್ಲಾಕ್ ಟವರ್ ಬಳಿ ಬಂದ ಪೊಲೀಸ್ ಆಯುಕ್ತರು ಕ್ಲಾಕ್ ಟವರ್ ಸಮೀಪ ಒಂದು ಗಂಟೆಗೂ ಹೆಚ್ಚು ಕಾಲ ಆಟೋ ರಿಕ್ಷಕ್ಕಾಗಿ ಕಾಯುತ್ತಿದ್ದ ಹಿರಿಯ ದಂಪತಿಯನ್ನು ಗಮನಿಸಿ, ಅವರನ್ನು ತಮ್ಮ ನಿವಾಸಕ್ಕೆ ತಲುಪಿಸಲು ಪೊಲೀಸ್ ವಾಹನದಲ್ಲೇ ವ್ಯವಸ್ಥೆ ಮಾಡಿದ್ದಾರೆ.

ಇವರ ಈ ಮಾನವೀಯ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.

Comments are closed.