ಕರಾವಳಿ

ಲಾಕ್ಡೌನ್ ಅವಧಿಯ ವಿದ್ಯುತ್ ಬಿಲ್ ಮನ್ನಾ ಮಾಡಲು ಆಗ್ರಹಿಸಿ ಡಿವೈಎಫ್ಐ ಪ್ರತಿಭಟನೆ

Pinterest LinkedIn Tumblr

ಕುಂದಾಪುರ: ವಿದ್ಯುತ್ ದರ ಏರಿಕೆ ಹಿಂಪಡೆಯಲು ಹಾಗು ಲಾಕ್ ಡೌನ್ ಅವಧಿಯ ಮೂರು ತಿಂಗಳ ವಿದ್ಯುತ್ ಬಿಲ್ ಮನ್ನಾ ಮಾಡಲು ಆಗ್ರಹಿಸಿ ಡಿವೈಎಫ್ಐ ರಾಜ್ಯ ಸಮಿತಿ ಕರೆಯ ಮೇರೆಗೆ ಜೂನ್ 21 ರಂದು ರಾತ್ರಿ ನಡೆದ ಚಿಮಣಿ, ದೊಂದಿ,ಕ್ಯಾಂಡಲ್ ಪ್ರತಿಭಟನೆ ಕುಂದಾಪುರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಜರುಗಿತು.

ಕರೋನ ಹಾವಳಿಯಿಂದ ಜನತೆ ಆರ್ಥಿಕ ಮುಗ್ಗಟ್ಟಿಗೆ ಒಳಗಾಗಿರುವ ಜನರಿಗೆ ರಾಜ್ಯ ಸರಕಾರ ವಿದ್ಯುತ್ ಬೆಲೆ ಏರಿಕೆ ಮಾಡಿ ದ್ರೋಹವೆಸಗಿದೆ. ವಿದ್ಯುತ್ ಬಳಕೆಯ ಯಾವುದೇ ಐಷಾರಾಮಿ ವಸ್ತುಗಳನ್ನು ಹೊಂದಿರದ ಸಾಮಾನ್ಯ ಕುಟುಂಬಗಳೂ ಇಂದು ತಿಂಗಳಿಗೆ ಸಾವಿರ ರೂಪಾಯಿಗಳಿಗೂ ಅಧಿಕ ವಿದ್ಯುತ್ ಬಿಲ್ ಪಾವತಿಸಬೇಕಾದ ಪರಿಸ್ಥಿತಿಯಲ್ಲಿರುವಾಗ ಸರಕಾರ ಒಂದು ವರ್ಷದ ಅವಧಿಯಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಬೆಲೆ ಏರಿಕೆ ಮಾಡಿ ಜನದ್ರೋಹಿಯಾಗಿ ವರ್ತಿಸುತ್ತಿದೆ.
ಲಾಕ್ ಡೌನ್ ಅವಧಿಯಲ್ಲಿ ಬಿಲ್ ಪಾವತಿಗೆ ಬಲವಂತಪಡಿಸಬಾರದು ಎಂದು ಸರಕಾರ ಹೇಳುತ್ತಲೇ ತೆರವಿನ ನಂತರ ಬಾಕಿ ಬಿಲ್ ಒಟ್ಟಿಗೆ ಪಾವತಿಸುವ ಅನಿವಾರ್ಯ ಸ್ಥಿತಿ ನಿರ್ಮಿಸಿದೆ.ಇದು ಜನಸಾಮಾನ್ಯರಿಗೆ ಮುಂದಿನ ದಿನಗಳಲ್ಲಿ ಭರಿಸಲಾಗದ ಸಾಲದ ಹೊರೆಯಾಗಲಿದೆ ಆದ್ದರಿಂದ ಸರಕಾರ ಮೂರು ತಿಂಗಳ ವಿದ್ಯುತ್ ಬಿಲ್ ಮನ್ನಾ ಮಾಡಬೇಕು ಏರಿಸಿದ ದರ ಹಿಂಪಡೆಯಬೇಕೆಂದು ತಾಲೂಕಿನ ಹದಿನೇಳು ಗ್ರಾಮಗಳಲ್ಲಿ ಯುವಜನರು,ಕಾರ್ಮಿಕರು,ಮಹಿಳೆಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಡಿವೈಎಫ್ಐ ತಾಲೂಕು ಸಮಿತಿ ನೇತ್ರತ್ವದಲ್ಲಿ ಪ್ರತಿಭಟನೆಯಲ್ಲಿ ತಾಲೂಕು ಅಧ್ಯಕ್ಷ ರಾಜೇಶ್ ವಡೇರಹೋಬಳಿ,ಕಾರ್ಯದರ್ಶಿ ಗಣೇಶದಾಸ್,ರಾಜ ಬಿಟಿಆರ್,ಗಣೇಶ್ ಕಲ್ಲಾಗರ ಇದ್ದರು. ತಾಲೂಕು ಉಪಾಧ್ಯಕ್ಷ ಸುರೇಶ್ ಕಲ್ಲಾಗರ ಮಾತನಾಡಿದರು.

ಬಿ.ಸಿ ರಸ್ತೆ ಘಟಕದಲ್ಲಿ ನಡೆದ ಪ್ರತಿಭಟನೆಯಲ್ಲಿ ಅಧ್ಯಕ್ಷ ಮಂಜುನಾಥ ಶೋಗನ್,ಕಾರ್ಯದರ್ಶಿ ರವಿ ವಿಎಂ ಮಾತನಾಡಿದರು.

ಹೆಮ್ಮಾಡಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಸಂತೋಷ ಹೆಮ್ಮಾಡಿ,ನರಸಿಂಹ ದೇವಾಡಿಗ,ಜಗದೀಶ್ ಆಚಾರ್ ಇದ್ದರು. ಪಡುಕೋಣೆ ಘಟಕದಲ್ಲಿ ನಡೆದ ಪ್ರತಿಭಟನೆಯಲ್ಲಿ ನಾಗರಾಜ, ಕಿರಣ್ ಮೊಲಾದವರಿದ್ದರು. ಗುಲ್ವಾಡಿ,ಅಬ್ಬಿಗುಡ್ಡೆ,ಮಾವಿನಕಟ್ಟೆಯಲ್ಲಿ ಜಮಾಲ್,ಅಣ್ಣಪ್ಪಅಬ್ಬಿಗುಡ್ಡೆ,ಅಬ್ಬಾಸ್,ನೀಲ,ಗುಲಾಬಿ,ಗೀತ,ಬಾಬಿ,ಜಯ ಅವರಿದ್ದರು. ಬಸ್ರೂರಿನಲ್ಲಿ ಕಾರ್ಮಿಕ ಸಂಘದ ಮುಖಂಡರಾದ ಶಶಿಕಾಂತ್,ಸುರೇಶ್ ಪೂಜಾರಿ, ಸುಶೀಲ, ವಿಶಾಲಾಕ್ಷಿ, ಬೇಬಿ, ಶಾಂತ, ಶಾರದ ಇದ್ದರು.

ಅಂಪಾರು,ನೆಲ್ಲಿಕಟ್ಟೆಯಲ್ಲಿ ಚಂದ್ರಕುಲಾಲ್,ಚಂದ್ರಪೂಜಾರಿ ನೇತ್ರತ್ವ ನೀಡಿದರು. ಹಾಲಾಡಿಯಲ್ಲಿ ಕಾರ್ಮಿಕ ಸಂಘದ ಅನಂತ ಕುಲಾಲ್ ವಕ್ವಾಡಿ,ರಘುರಾಮ್ ಇದ್ದರು. ಗಂಗೊಳ್ಳಿಯಲ್ಲಿ ಡಿವೈಎಪ್ಐ ತಾಲೂಕು ಉಪಾಧ್ಯಕ್ಷ ಅರುಣ್ ಕುಮಾರ್,ಕಾರ್ಮಿಕ ಮುಖಂಡರಾದ ಚಿಕ್ಕ ಮೊಗವೀರ ಮಾತನಾಡಿದರು. ನಾಗರಾಜ,ಕಮಲ ಖಾರ್ವಿ ಜಯಂತಿ,ಮಾನಸ ಇದ್ದರು.

ಆಲೂರಿನಲ್ಲಿ ರಘುರಾಮ್ ಆಚಾರ್,ಗಣೇಶ್ ಇದ್ದರು. ವಂಡ್ಸೆಯಲ್ಲಿ ಶಂಕರ ಆಚಾರ್ಯ ನೇತ್ರತವದಲ್ಲಿ ಪ್ರತಿಭಟನೆ ನಡೆಯಿತು. ಗುಜ್ಜಾಡಿಯಲ್ಲಿ ಶ್ರೀನಿವಾಸಪೂಜಾರಿ,ಸಂತೋಷ,ರೇಣುಕ ನೇತ್ರತ್ವ ನೀಡಿದರು. ಕೋಟೇಶ್ವರದಲ್ಲಿ ನಡೆದ ಪ್ರತಿಭಟನೆಯಲ್ಲಿ ಕಾರ್ಮಿಕ ಸಂಘದ ಅಧ್ಯಕ್ಷರಾದ ಪರಮೇಶ್ವರ್ ನೇತ್ರತ್ವ ವಹಿಸಿದ್ದರು. ಬೈಂದೂರು ಬಿಜೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಕಾರ್ಮಿಕ ಮುಖಂಡ ರೊನಾಲ್ಡ್ ರಾಜೇಶ್ ಕ್ವಾಡ್ರಸ್ ಮಾತನಾಡಿದರು. ಗುಲಾಬಿ,ಜ್ಯೋತಿ,ಸವಿತ,ಬೇಬಿ,
ಸಾವಿತ್ರಿ ಉಪ್ಪುಂದ ಇದ್ದರು.

Comments are closed.