ಕರಾವಳಿ

ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಲಸಿಕಾ ಅಭಿಯಾನ: ಒಂದೇ ದಿನ 700 ಲಸಿಕೆ ನೀಡಿಕೆ

Pinterest LinkedIn Tumblr

ಮಂಗಳೂರು: ನಗರದ ಖ್ಯಾತ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಸೋಮವಾರ ನಡೆದ ಕೋವಿಡ್-19 ಲಸಿಕಾ ಅಭಿಯಾನದಲ್ಲಿ ಒಂದೇ ದಿನ 700 ಮಂದಿಗೆ ಲಸಿಕೆ ನೀಡಲಾಯಿತು.

ಬೆಳಿಗ್ಗೆಯಿಂದಲೇ ಅಪಾರ ಸಂಖ್ಯೆಯ ಹಿತೈಷಿಗಳು ಮತ್ತು ಸಾರ್ವಜನಿಕರು ಲಸಿಕೆ ಪಡೆದುಕೊಳ್ಳುವ ಸಲುವಾಗಿ ಆಗಮಿಸಿದ್ದರಿಂದ ಇಡೀ ಆಸ್ಪತ್ರೆ ದಿನವಿಡೀ ತುಂಬಿ ತುಳುಕುತ್ತಿತ್ತು. ಆಸ್ಪತ್ರೆಯ ಆಡಳಿತ ಮಂಡಳಿ ನಗರದ ಜನತೆಗೆ ಲಸಿಕೆ ನೀಡುವ ಸಲುವಾಗಿ ಹಮ್ಮಿಕೊಂಡಿದ್ದ ಈ ಅಭಿಯಾನಕ್ಕೆ ಅದ್ಭುತ ಸ್ಪಂದನೆ ವ್ಯಕ್ತವಾಯಿತು.

ಇದಕ್ಕೆ ಪೂರ್ವಭಾವಿಯಾಗಿ ಜೂನ್ 19ರಂದು 300ಕ್ಕೂ ಹೆಚ್ಚು ಮಂದಿ ಆಸ್ಪತ್ರೆ ಸಿಬ್ಬಂದಿ ಸಿದ್ಧತೆ ಮಾಡಿಕೊಂಡಿದ್ದರು. ಸಾರ್ವಜನಿಕಗೆ ಸ್ವಲ್ಪವೂ ತೊಂದರೆ ಆಗದಂತೆ ಎಲ್ಲ ಎಚ್ಚರಿಕೆ ವಹಿಸಲಾಗಿತ್ತು. ಆಡಳಿತ ಮಂಡಳಿ ಕೂಡಾ ಸ್ವಲ್ಪವೂ ಅಡಚಣೆಯಾಗದಂತೆ ನೋವುರಹಿತ ಅನುಭವ ಖಾತರಿಪಡಿಸಲು ಎಲ್ಲ ನೆರವು ನೀಡಿತ್ತು.

ಹವಾನಿಯಂತ್ರಿತ ಹಾಲ್‍ಗಳಲ್ಲಿ ಮಾಡಿದ ಅದ್ಭುತ ವ್ಯವಸ್ಥೆ ಸಾರ್ವಜನಿಕರನ್ನು ಅಚ್ಚರಿಪಡಿಸಿತ್ತು. ಸಿಬ್ಬಂದಿಯ ಕ್ಷಮತೆ ಮತ್ತು ಹಿತಾನುಭವಕ್ಕಾಗಿ ಸಾರ್ವಜನಿಕರಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬಂತು.

ಮಂಗಳೂರಿನ ಬಿಷಪ್ ಮತ್ತು ಫಾದರ್ ಮುಲ್ಲರ್ ಚಾರಿಟಬಲ್ ಸಂಸ್ಥೆಗಳ ಅಧ್ಯಕ್ಷರು ಈ ಸಂದರ್ಭದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ, ಸಾಂಕ್ರಾಮಿಕ ಬೇಗ ಕೊನೆಗೊಳ್ಳುವಂತೆ ಮತ್ತು ರೋಗಿಗಳ ಸೇವೆಯಲ್ಲಿ ನಿರತರಾದವರನ್ನು ರಕ್ಷಿಸುವಂತೆ ಪ್ರಾರ್ಥಿಸಿದರು.

ಎಫ್‍ಎಂಸಿಐ ನಿರ್ದೇಶಕ ಫಾದರ್ ರಿಚರ್ಡ್ ಅಲಾಶಿಯಸ್ ಕೊಯೆಲ್ಹೊ ಕಾರ್ಯಕ್ರಮಕ್ಕೆ ಎಲ್ಲರನ್ನೂ ಸ್ವಾಗತಿಸಿದರು. ಈ ಅದ್ಭುತ ವ್ಯವಸ್ಥೆಗಾಗಿ ಆಡಳಿತಾಧಿಕಾರಿ ಮತ್ತು ತಂಡವನ್ನು ಶ್ಲಾಘಿಸಿದರು.

ಕೇಂದ್ರ ಸರ್ಕಾರ ಉಚಿತ ಲಸಿಕೆ ನೀಡುವ ಮೂಲಕ ಒಳ್ಳೆಯ ಕೆಲಸ ಮಾಡಿದೆ. ಜತೆಗೆ ನ್ಯಾಯಸಮ್ಮತ ಬೆಲೆಯಲ್ಲಿ ಲಸಿಕೆ ಒದಗಿಸುವ ಮೂಲ ಖಾಸಗಿ ಆಸ್ಪತ್ರೆಗಳೂ ಈ ರಾಷ್ಟ್ರೀಯ ಅಭಿಯಾನದಲ್ಲಿ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದೆ. ಈ ಸಾಂಕ್ರಾಮಿಕದ ವಿರುದ್ಧದ ಹೋರಾಟಕ್ಕೆ ಲಸಿಕೆ ಪಡೆಯವುದೊಂದೇ ಮಾರ್ಗ ಎಂದು ಅವರು ಹೇಳಿದರು.

ಅಚ್ಚುಕಟ್ಟಿನ ವ್ಯವಸ್ಥೆಯ ಜತೆಗೆ ಕೋವಿಡ್-19 ಶಿಷ್ಟಾಚಾರಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಯಿತು. ಸಾರ್ವಜನಿಕರ ಭೇಟಿ ಪ್ರದೇಶ, ಸ್ವಾಗತಕಾರರ ಕೌಂಟರ್, ಲಸಿಕೆ ನೀಡಿಕೆ ಮತ್ತು ಲಸಿಕೆ ಬಳಿಕದ ವಿಶ್ರಾಂತಿ ಕೊಠಡಿ, ಕೆಫೆಟೇರಿಯ ಮತ್ತಿತರ ಸೌಲಭ್ಯವನ್ನು ಫಾದರ್ ಅಜಿತ್ ಮಿನೇಜಸ್ ನೇತೃತ್ವದಲ್ಲಿ ವ್ಯವಸ್ಥೆ ಮಾಡಲಾಗಿತ್ತು.

Comments are closed.