ಕರಾವಳಿ

ರಶ್ಮಿ ಉಳ್ಳಾಲ್ ತಂಡದಿಂದ ಉಸಿರಿಗಾಗಿ ಹಸಿರು ಜಾಗ್ರತಿ ಕಾರ್ಯಕ್ರಮ

Pinterest LinkedIn Tumblr

ಮಂಗಳೂರು : ಉಸಿರಿಗಾಗಿ ಹಸಿರು ಜಾಗ್ರತಿ ಕಾರ್ಯಕ್ರಮವು ಹೆಚ್ಚಿನ ಜನರ ಮನ್ನಣೆಯೊಂದಿಗೆ ಜರಗಿತು. ಗಿಡವನ್ನು ಬೆಳೆಸಬೇಕು ಅನ್ನುವ ಜಾಗೃತಿ ಮೂಡಿಸುವ ಸಲುವಾಗಿ ಜನರು ತಮ್ಮ ತಮ್ಮ ಊರು , ಮನೆಯಲ್ಲಿ ಗಿಡ ನೆಡುವ ಕಾರ್ಯವನ್ನು ಮಾಡಬೇಕು.

ವರ್ಷ ಇಡೀ ನೆಟ್ಟ ಗಿಡವನ್ನು ಪೋಷಿಸಬೇಕು. ಗಿಡವನ್ನು ಕುಟುಂಬದಂತೆ ನೋಡಬೇಕು. ಈ ಕಾರ್ಯಕ್ಕೆ ಕೈ ಜೋಡಿಸುವವರು ಆ ದಿನ ಗಿಡನೆಟ್ಟವರು ಪರಿಸರಕ್ಕೆ ಮಾಡಿದ ಸೇವೆಯನ್ನು ರಶ್ಮಿ ಉಳ್ಳಾಲ್ ತಂಡಕ್ಕೆ ಕಳುಹಿಸಿಕೊಡಲು ಕರೆ ನೀಡಿದ್ದು ಇದಕ್ಕೆ ಮಂಗಳೂರಿನಾದ್ಯಂತ ಅತೀವ ಹೆಚ್ಚಿನ ಮಟ್ಟದಲ್ಲಿ ಪ್ರಶಂಸೆಯನ್ನು ಪಡೆದಿರುತ್ತದೆ.

ರಶ್ಮಿ ಉಳ್ಳಾಲ್ ಅವರ ತಂಡ ತೊಕ್ಕೊಟ್ಟಿನಲ್ಲಿ ಗಿಡ ನೆಡುತ್ತಿದ್ದರೆ . ಇತರ ಪರಿಸರ ಪ್ರಿಯರು ತಮ್ಮ ತಮ್ಮ ಮನೆಯಲ್ಲಿ ಮೂಡಬಿದ್ರಿ , ಕಾರ್ಕಳ , ಕೆಂಜಾರ್ , ಬೆಂಗಳೂರು , ಅಳೆದಂಗಡಿ, ಉಳ್ಳಾಲ್ , ಉಡುಪಿ ಕಡೆ ಯಿಂದ ತಾವು ನೆಟ್ಟ ಗಿಡದ ಚಿತ್ರವನ್ನು ಕಳುಹಿಸಿಕೊಟ್ಟಿದ್ದಾರೆ . ಏಕ ಕಾಲದಲ್ಲಿ ನೂರಾರು ಗಿಡನೆಟ್ಟಿರೋದು ಪರಿಸರ ಪ್ರಿಯರಿಗೆ ಖುಷಿ ತಂದಿದೆ.

ಇತ್ತೀಚಿನ ದಿನಗಳ್ಲಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಮರ ಕಡಿಯುವ ಕಾರ್ಯ ನಡೆಯುತ್ತಾ ಬಂದಿದ್ದು , ಗಿಡ ಬೆಳೆಸುವ ಹಾಗು ರಕ್ಷಿಸುವ ಕಾರ್ಯ ಮನೆಯಿಂದ ಆರಂಭ ಆಗಬೇಕು ತಾವು ನೆಟ್ಟ ಗಿಡದ ಫೋಟೋ ವನ್ನು ಮುಂದಿನ ಜೂನ್ 8 ರಂದು ರಶ್ಮಿ ಉಳ್ಳಾಲ್ ತಂಡಕ್ಕೆ ಕಳುಹಿಸಬೇಕು ಹೀಗೆ ಮಾಡುವುದರಿಂದ ಜನರಿಗೆ ಗಿಡ ರಕ್ಷಿಸುವ ಮನೋಭಾವನೆ ಬೆಳೆಯಬಹುದು ಎನ್ನುವ ಉದ್ದೇಶ ಉಸಿರಿಗಾಗಿ ಹಸಿರು ತಂಡದ್ದಾಗಿದೆ.

ಇಂತಹ ಸಂದರ್ಭದಲ್ಲಿ ರಶ್ಮಿ ಉಳ್ಳಾಲ್ ಅವರು ತೊಕ್ಕೊಟ್ಟು ಪರಿಸರದಲ್ಲಿ ತಮ್ಮ ತಂಡದ ಸಹಾಯದಿಂದ 20 ಗಿಡ ನೆಡುವ ಹಾಗೂ ಮನೆಗೊಂದು ಸಸಿಯನ್ನು ವಿತರಿಸುವ ಕಾರ್ಯವನ್ನು ಮಾಡಿದ್ದು ಹೊಳೆ ದಾಸವಾಳ, ಬೇವಿನ ಗಿಡ , ಲಕ್ಷ್ಮಣ ಫಲ , ಮಹಾಗನಿ 10 ಗಿಡವನ್ನು ಮನೆ ಮನೆಗೆ ವಿತರಿಸುವ ಕಾರ್ಯವನ್ನು ಮಾಡಿದರು.

ಈ ಸಂದರ್ಭದಲ್ಲಿ ಪರಿಸರ ಪ್ರೇಮಿ ಮಾಧವ್ ಉಳ್ಳಾಲ್ , ಲತೀಶ್ , ಶರತ್ , ನಿತೀಶ್ ನಾಯರ್ , ಪ್ರಥ್ವಿರಾಜ್ ಶೆಟ್ಟಿ, ಶ್ರೀಕಾಂತ್ , ಶ್ರೀಮಂತ್ , ಬೃಜೇಶ್ ಉಪಸ್ಥಿತರಿದ್ದರು.

ವರದಿ: ಈಶ್ವರ ಎಂ. ಐಲ್.

Comments are closed.